ವಿಚಾರಣೆ ಆಗಸ್ಟ್ 31 ಕ್ಕೆ ಮುಂದೂಡಿದ ರಾಜ್ಯ ಹೈಕೋರ್ಟ್
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಿಡಿ ನಿವೇಶನ ಹಂಚಿಕೆ ಪ್ರಕರಣದ ವಿಚಾರಣೆಯನ್ನುರಾಜ್ಯ ಹೈಕೋರ್ಟ್ ಆಗಸ್ಟ್ 31 ಕ್ಕೆ ಮುಂದೂಡಿದೆ.
ಮುಂದುವರೆದ ವಿಚಾರಣೆ ಕೈಗೆತ್ತಿಕೊಂಡ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ವಿಚಾರಣೆಯನ್ನು ಮುಂದೂಡಿದಲ್ಲದೆ ಅಲ್ಲಿಯವರೆವಿಗೂ ಜನಪ್ರತಿನಿಧಿಗಳ ನ್ಯಾಯಾಲಯವು ಅಲ್ಲಿಯವರೆಗೂ ವಿಚಾರಣೆ ಕೈಗೆತ್ತಿಕೊಳ್ಳುವಂತಿಲ್ಲ ಎಂದು ಆದೇಶ ಮಾಡಿದ್ದಾರೆ.
ನ್ಯಾಯಾಲಯದ ಆದೇಶದಿಂದ ಮುಖ್ಯಮಂತ್ರಿ ಅವರಿಗೆ ಮತ್ತೆ 2 ದಿನಗಳ ಕಾಲ ತಾತ್ಕಾಲಿಕ ರಿಲೀಪ್ ದೊರೆತಿದೆ.
ವಿಚಾರಣೆ ಆರಂಭವಾಗುತ್ತಿದ್ದಂತೆ ಸಿದ್ದರಾಮಯ್ಯ ಅವರ ಪರವಾಗಿ ಸುದೀರ್ಘ ವಾದ ಮಂಡಿಸಿದ ಸುಪ್ರೀಂಕೋರ್ಟ್ನ ಹಿರಿಯ ನ್ಯಾಯವಾದಿ ಅಭಿಷೇಕ್ ಮುನುಸಿಂಘ್ವಿ ಅವರು ಮುಖ್ಯಮಂತ್ರಿಯವರು ತಮ್ಮ ಅಧಿಕಾರವನ್ನು ದುರುಪಯೋಗಮಾಡಿಕೊಂಡಿಲ್ಲ.
ರಾಜ್ಯಪಾಲರು ಯಾವ ಆಧಾರದ ಮೇಲೆ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೋ ತಿಳಿಯದು ಇದರಲ್ಲಿ ಯಾವುದೇ ಹಗರಣ ನಡೆದಿಲ್ಲ. ಈಗಲಾದರು ರಾಜ್ಯಪಾಲರು ತಮ್ಮ ನಿರ್ಧಾರವನ್ನು ಬದಲಿಸಿ ಪ್ರಾಸಿಕ್ಯೂಷನ್ ಗೆ ನೀಡಿರುವ ಅನುಮತಿಯನ್ನು ಹಿಂದಕ್ಕೆ ಪಡೆಯಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ರಾಜ್ಯಪಾಲರ ಅನುಮತಿಯಿಂದ ಸಮಸ್ಯೆ ಎದುರಾಗಲಿದೆ. ಅವರು ಪ್ರಾಸಿಕ್ಯೂಷನ್ ನೀಡುವ ಮುನ್ನ ಸೂಕ್ತ ಕಾರಣಗಳನ್ನೇ ನೀಡಿಲ್ಲ. ಕೇವಲ ನಾಲ್ಕು ಪಟಗಳ ಅನುಮತಿ ನೀಡಿ ಕೈತೊಳೆದುಕೊಂಡಿದ್ದಾರೆ ಎಂದುದ್ದಲ್ಲದೆ, ಮುಖ್ಯಮಂತ್ರಿ ಅವರ ಪತ್ನಿ ಪ್ರಾಧಿಕಾರದ ನಿವೇಶನಗಳನ್ನು ತಮ್ಮ ಪತಿಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಪಡೆದಿಲ್ಲ.
ಅವರ ಜಮೀನನ್ನು ಮೂಡಾ ವಶಪಡಿಸಿಕೊಂಡಿತ್ತು. ಅದಕ್ಕೆ ಪರ್ಯಾಯವಾಗಿ 14 ನಿವೇಶನ ನೀಡಿದೆ. ಇದಲ್ಲಿ ಏನು ತಪ್ಪಿಲ್ಲ ಎಂದು ಅವರು ಸಿದ್ದರಾಮಯ್ಯ ಅವರ ಪತ್ನಿಯ ಜಮೀನಿಗೆ ಸಂಬಂಧಿಸಿದಂತೆ ಪೂರ್ಣ ದಾಖಲೆಗಳನ್ನು ಪೀಠದ ಮುಂದೆ ಇಟ್ಟರು.
ಹಿಂದೆ ಹಲವಷ್ಟು ಡೀನೋಟಿಪಿಕೇಷನ್ ಪ್ರಕರಣಗಳಾಗಿವೆ. ಅದರಲ್ಲಿ ಯಾವುದರ ಬಗ್ಗೆಯೂ ತನಿಖೆ ಅಥವಾ ಶಿಕ್ಷೆಯಾಗಿಲ್ಲ ಎಂದರು.
ರಾಜ್ಯಪಾಲರು ಮೊದಲು ದೂರುದಾರನಿಗೆ ದಂಡಹಾಕಬೇಕು. ದೂರುದಾರ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವ ಮೊದಲೇ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹೋಗಿದ್ದಾರೆ.
ಲೋಕಾಯುಕ್ತ ಪೊಲೀಸರಿಗೂ ದೂರು ಕೊಟ್ಟಿದ್ದಾರೆ. ಸಮಯ ವ್ಯರ್ಥಮಾಡಿರುವ ದೂರುದಾರನಿಗೆ ಮೊದಲು ದಂಡಹಾಕಿ. ನಾನು ಲೋಕಾಯುಕ್ತ ಮತ್ತು ರಾಜ್ಯಪಾಲರನ್ನು ದೋಷಣೆಮಾಡಲ್ಲ. ದೂರು ಕೊಟ್ಟಿದ್ದ ಇವರು ಪ್ರಾಷ್ಯಕೂಷನ್ಗೂ ಅನುಮತಿ ಕೇಳಿದ್ದಾರೆ.
ಅರ್ಜಿ ರಾಜ್ಯಪಾಲರ ಬಳಿ ಇರಬೇಕಾದರೆ ಕೆಳ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ರಾಜ್ಯಪಾಲರಿಗೆ ದಂಡ ಹಾಕುವ ಅಧಿಕಾರ ಇಲ್ಲ. ಮಾನ್ಯ ನ್ಯಾಯಮೂರ್ತಿಗಳು ದಂಡ ಹಾಕಬೇಕು ಎಂದು ಹೇಳಿದರು.
ಎರಡು ಕಡೆ ಅರ್ಜಿ ಸಲ್ಲಿಸಿದರೆ ರಾಜ್ಯಪಾಲರು ಇದನ್ನು ಪರಿಶೀಲನೆ ಮಾಡಬೇಕು. ಇಂತಹ ಪ್ರಕರಣಗಳ ಬಗ್ಗೆ ಗಂಭೀರವಾಗಿ ತೆಗುದುಕೊಳ್ಳದಿದ್ದರೆ ದಾರಿ ಹೋಕರು ಕೂಡ ಅರ್ಜಿ ಸಲ್ಲಿಸುತ್ತಾರೆ.
ಪ್ರಾಸಿಕ್ಯೂಷನ್ ಕೊಡುವಾಗ ರಾಜ್ಯಪಾಲರು ಎಲ್ಲವನ್ನು ಪರಿಶೀಲನೆ ಮಾಡಿಲ್ಲ. ಮುಖ್ಯಮಂತ್ರಿ ಅವರ ವಿರುದ್ಧ ತನಿಖೆಗೆ ಆದೇಶ ನೀಡುವ ಮೊದಲು ರಾಜಭವನಕ್ಕೆ ಬಂದ ದೂರುಗಳ ಬಗ್ಗೆ ಯಾಕೆ ಕ್ರಮಕೊಂಡಿಲ್ಲ ಪ್ರಶ್ನಿಸಿದರು.
ಆಡಳಿತದ ಅತಿ ಉನ್ನತ ಹುದ್ದೆಯಲ್ಲಿ ಇರುವವರ ಬಗ್ಗೆ ಅನುಮತಿ ನೀಡುವಾಗ ಸಾಮಾಜಿಕ ನ್ಯಾಯ ಪಾಲನೆ ಮಾಡಬೇಕಿತ್ತು. ಅದನ್ನು ರಾಜ್ಯಪಾಲರು ಮಾಡಿಲ್ಲ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಾಗ ಒಂದು ಅಂಶವನ್ನು ಮತ್ತು ಕಾನೂನಿನ ಸೂಕ್ಷ್ಮತೆಯನ್ನು ಅರಿತಿಲ್ಲ. ಕರ್ನಾಟಕ ಸರ್ಕಾರದ ಸಂಪುಟ ಸಭೆ ತೆಗೆದುಕೊಂಡ ನಿರ್ಣಯವನ್ನು ಪಾಲಿಸಿಲ್ಲ ಎಂದರು.
ಯಾವುದೇ ಪ್ರಕರಣ ಪ್ರಾಸಿಕ್ಯೂಷನ್ಗೆ ಕೊಡುವ ಮೊದಲು ಅದರ ಗಂಭೀರತೆಯನ್ನ ಅರಿಯಬೇಕು. ಆದರೆ ಮುಖ್ಯಮಂತ್ರಿ ಅವರ ವಿಷಯಲ್ಲಿ ರಾಜ್ಯಪಾಲರು ಇತ್ತ ಗಮನ ಹರಿಸಿಲ್ಲ.
ಈ ಹಿಂದೆ ರಾಜ್ಯಪಾಲರ ವಿರುದ್ಧ ಸಂವಿಧಾನ ಪೀಠ ಕೊಟ್ಟ ತೀರ್ಪುಗಳನ್ನು ಸಿಂಘ್ವಿ ಪೀಠದ ಗಮನಕ್ಕೆ ತಂದರು.