ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ಪಡೆಯುತ್ತಿದ್ದ ಆರೋಪ
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ.
ನಗರದ ಪರಪ್ಪನ ಅಗ್ರಹಾರದಲ್ಲಿ ವಿಶೇಷ ಸೌಲಭ್ಯ ಪಡೆಯುತ್ತಿದ್ದ ಆರೋಪದ ಮೇಲೆ ದರ್ಶನ್ ಅವರನ್ನು ಇಂದು ಮುಂಜಾನೆ 4 ಗಂಟೆಗೆ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಯಿತು.
ದರ್ಶನ್ ಬಳ್ಳಾರಿ ಜೈಲಿಗೆ ಧಾವಿಸುತ್ತಿದ್ದಂತೆ ಡಿಐಜಿ ಟಿ.ಪಿ. ಶೇಷ ಅವರು ಆದೇಶ ಹೊರಡಿಸಿ ಇವರನ್ನು ಪ್ರತ್ಯೇಕ ಶೆಲ್ನಲ್ಲಿ ಇಡುವಂತೆ ಸೂಚಿಸಿದ್ದಾರೆ.
ಇವರನ್ನು ಸಾಮಾನ್ಯ ಖೈದಿಯಂತೆ ನೋಡಿಕೊಳ್ಳಬೇಕು ಹಾಗೂ ಇವರ ಶೆಲ್ಗೆ 24 ಗಂಟೆಗಳ ಕಾಲ ಸಿಸಿ ಟಿವಿ ಕ್ಯಾಮರ ಅವಳವಡಿಸಬೇಕು. ದಿನಕ್ಕೆ ಒಂದೆರಡು ಬಾರಿಯಾದರೂ ಜೈಲ್ ಮುಖ್ಯಸ್ಥರು ಭೇಟಿ ನೀಡಿ ಪರಿಶೀಲಿಸಬೇಕು. ದರ್ಶನ್ ಇರುವ ಶೆಲ್ ಉಸ್ತುವಾರಿಗೆ ಕಿರಿಯ ಅಧಿಕಾರಿ ನೇಮಿಸಿದಲ್ಲಿ ಅವರಿಗೆ ಬಾಡಿ ಕ್ಯಾಮರಾ ಅಳವಡಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಜೈಲಿನಲ್ಲಿ ನಟ ದರ್ಶನ್ ಭೇಟಿಗೆ ಚಿತ್ರೋಧ್ಯಮದವರು ಭೇಟಿ ಕೊಡುವಂತಿಲ್ಲ. ಬರೀ ಅವರ ಕುಟುಂಬದವರು, ಅವರ ರಕ್ತ ಸಂಬಂಧಿಗಳು ಸಮಯಾವಕಾಶ ಪಡೆದು ಭೇಟಿ ಮಾಡಬಹುದಾಗಿದೆ ಎಂದಿದ್ದಾರೆ.