ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 17 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ನಟ ದರ್ಶನ್ ಅವರ ಆಪ್ತೆ ಪವಿತ್ರಗೌಡ ಸೇರಿದಂತೆ 17 ಮಂದಿ ವಿರುದ್ಧ ನ್ಯಾಯಾಲಯಕ್ಕೆ ಇಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ದೋಷಾರೋಪ ಪಟ್ಟಿಯಲ್ಲಿ ದರ್ಶನ್ ಅವರನ್ನು 2ನೇ ಆರೋಪಿ ಮಾಡಿದ್ದರೆ, ಪವಿತ್ರಗೌಡ ಮೊದಲ ಆರೋಪಿಯಾಗಿದ್ದು, ಉಳಿದ 15 ಆರೋಪಿಗಳ ಪಾತ್ರವನ್ನು ಉಲ್ಲೇಖಿಸಲಾಗಿದೆ.
ಸಾಕ್ಷ್ಯಧಾರ, ಸಾಂಧಾರ್ಭಿಕ, ತಾಂತ್ರಿಕ, ವೈಜ್ಞಾನಿಕ ಹಾಗೂ ಇತರೆ ಸಾಕ್ಷಾಧಾರ ಸೇರಿ 3991 ಪುಟಗಳ ಪ್ರಾಥಮಿಕ ದೋಷಾರೋಪ ಪಟ್ಟಿಯನ್ನು 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸಲ್ಲಿಸಿದ್ದಾರೆ.
ರೇಣುಕಾಸ್ವಾಮಿ ಕರೆತರುವುದರಿಂದ ಶರಣಾಗತಿ ಮಾಡಿಸುವ ತನಕ ಪ್ರತಿ ಹಂತದಲ್ಲಿ ದರ್ಶನ್ ಪಾತ್ರವಿದೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಕೊಲೆ ಪ್ರಕರಣವನ್ನು ಬಿಎನ್ಎಸ್ಎಸ್ ಕಾಯ್ದೆ ಪ್ರಕಾರ ತನಿಖೆ, ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಪವನ್ ಮೂಲಕ ಚಿತ್ರದುರ್ಗದಿಂದ ರೇಣುಕಾಸ್ವಾಮಿ ಅವರನ್ನು ದರ್ಶನ್ ಕರೆಸಿರುವುದು.
ರಾಘವೇಂದ್ರಗೆ ಹೇಳಿ ರೇಣುಕಾಸ್ವಾಮಿಯನ್ನು ಪವನ್ ಅಪಹಣ ಮಾಡಿಸಿದ್ದಾರೆ. ಅಪಹರಣಾ ನಂತರ ಆತನ ಮೇಲೆ ಹಲ್ಲೆ ಮಾಡುವಾಗ ದರ್ಶನ್ ಬಟ್ಟೆಯ ಮೇಲೆ ರೇಣುಕಾಸ್ವಾಮಿಯ ರಕ್ತದ ಕಲೆಗಳು ಪತ್ತೆಯಾಗಿದೆ.
ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುವ ಮುನ್ನ ದರ್ಶನ್ ಪಬ್ ಒಂದರಲ್ಲಿ ಕುಳಿತಿದ್ದರು. ನಂತರ ಪವಿತ್ರಾ ಮನೆಗೆ ಹೋಗಿ ಆಕೆಯನ್ನು ಕರೆದುಕೊಂಡು ಪಟ್ಟಣಗೆರೆ ಶೆಡ್ ಗೆ ತೆರಳಿದ್ದಾರೆ.
ಶೆಡ್ ನಲ್ಲಿ ರೇಣುಕಾಸ್ವಾಮಿಯ ಮೇಲೆ ಹಲ್ಲೆ ಮಾಡಿದ ದರ್ಶನ್, ನಂತರ ಪಬ್ ಗೆ ಮರಳಿದ್ದಾರೆ. ಆಗ ಇತರೆ ಹಲ್ಲೆ ಕೋರರು ರೇಣುಕಾಸ್ವಾಮಿ ಪೋಟೋಗಳನ್ನು ದರ್ಶನ್ ಮೊಬೈಲ್ ಗೆ ಕಳುಹಿಸಿದ್ದಾರೆ.
ಮತ್ತೆ ಪಬ್ ನಿಂದ ಶೆಡ್ ಗೆ ಹೋಗಿ ಅಲ್ಲಿಂದ ಆರ್ ಆರ್ ನಗರದ ತಮ್ಮ ಮನೆಗೆ ಬಂದು ಬಟ್ಟೆ ಬದಲಾಯಿಸಿದ್ದಾರೆ. ಬೆಳಿಗ್ಗೆ ಬನಶಂಕರಿಯಲ್ಲಿರುವ ತಮ್ಮ ಪತ್ನಿ ವಿಜಯಲಕ್ಷ್ಮೀ ಅವರ ಮನೆಗೆ ತೆರಳಿದ್ದು, ಅಲ್ಲಿ ಪೂಜೆ ಮುಗಿಸಿ ನಂತರ ಮೈಸೂರಿಗೆ ತೆರಳಿದ್ದಾರೆ.
ತಮ್ಮ ಫಾರಂ ಹೌಸ್ ನಿಂದ ಹೋಟೆಲ್ ಗೆ ತೆರಳಿ, ಅಲ್ಲಿಂದ ಶೂಟಿಂಗ್ ಮುಗಿಸಿ ಮತ್ತೆ ಹೋಟೆಲ್ ಗೆ ವಾಪಾಸ್ಸಾಗಿದ್ದಾರೆ. ಇದೆಲ್ಲದರ ಸಿಸಿಟಿವಿ, ಟವರ್ ಲೋಕೇಷನ್ ದೊರೆತಿದೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರತಿ ಹಂತದಲ್ಲಿ ದರ್ಶನ್ ನೋಡಿದ್ದ ಸಾಕ್ಷಿದಾರರ ಹೇಳಿಕೆಗಳು, ನಟ ಚಿಕ್ಕಣ್ಣ ಸೇರಿದಂತೆ ಅನೇಕ ಸಾಕ್ಷಿಗಳ ಹೇಳಿಕೆಗಳನ್ನು ನಮೂದಿಸಲಾಗಿದೆ.
ಪ್ರದೋಷ್ ಮೊಬೈಲ್ ನಲ್ಲಿ ಘಟನೆಗೆ ಸಂಬಂಧಿಸಿದ ವಿಡಿಯೋ, ಪೋನ್ ಕಾಲ್, ಚಾಟಿಂಗ್ ನಲ್ಲಿ ಸಂಚಿನ ಬಗ್ಗೆ ಮಾಹಿತಿ, ಶರಣಾಗತಿ ಮನವೊಲಿಸಿದ್ದು, ದರ್ಶನ್ ಹಣ ನೀಡಿರುವ ಸಾಕ್ಷ್ಯಗಳಿವೆ.
ನಂತರ ಶವ ಸಾಗಾಣಿಕೆಗೆ ಸೂಚನೆ ನೀಡಿರುವುದು, ಹಣ ನೀಡಿ ಪ್ರಕರಣ ಮುಚ್ಚಿ ಹಾಕಿ ತಲೆ ಮರೆಸಿಕೊಳ್ಳುವ ಪ್ರಯತ್ನ ಮಾಡಿದ್ದಲ್ಲದೆ, ಕೊಲೆ ಸಂಚು, ಅಪಹಣರಣ, ಸಾಕ್ಷ್ಯನಾಶ ಎಲ್ಲದರಲ್ಲೂ ದರ್ಶನ ಪಾತ್ರವಿದೆ ಎಂಬುದನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.
ದರ್ಶನ್ ಅಷ್ಟೇ ಅಲ್ಲ, ಪವಿತ್ರಗೌಡ ಸೇರಿದಂತೆ 17 ಆರೋಪಿಗಳ ವಿರುದ್ಧವೂ ಪೂರಕ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಕೊಲೆಯಲ್ಲಿ ಪ್ರತಿಯೊಬ್ಬರ ಪಾತ್ರವೇನು ಎಂಬುದನ್ನು ವಿವರಿಸಲಾಗಿದೆ.
ಈ ಕೊಲೆಗೆ ಪವಿತ್ರಗೌಡ ಮೂಲ ಕಾರಣವೆಂದು ಆಕೆಯನ್ನು ಮೊದಲ ಆರೋಪಿ ಮಾಡಲಾಗಿದೆ. ಅಷ್ಟೇ ಅಲ್ಲ, ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಯುವ ಸ್ಥಳದಲ್ಲಿದ್ದು, ತನ್ನ ಚಪ್ಪಲಿಯಿಂತ ಆತನ ಮೇಲೆ ಹಲ್ಲೇ ಮಾಡಿದ್ದಾಳೆ.
ಆಕೆ ಬಳಸುತ್ತಿದ್ದ ಮೊಬೈಲ್ ಟವರ್ ಲೋಕೇಷನ್ ನಿಂದ ಶೆಡ್ ನಲ್ಲಿ ಹಲ್ಲೇ ಮಾಡುವಾಗ ಇತರೆ ಚಲಮ-ವಲನಗಳಲ್ಲೂ ಆಕೆಯ ಪಾತ್ರವಿರುವುದು ಖಚಿತಗೊಂಡಿದೆ.
ಈ ದೋಷಾಆರೋಪ ಪಟ್ಟಿಯು 231 ಸಾಕ್ಷಿದಾರರನ್ನು ಒಳಗೊಂಡಂತೆ ಒಟ್ಟು 3991 ಪುಟಗಳುಳ್ಳ, 7 ಸಂಪುಟಗಳ ಹತ್ತು ಕಡತಗಳನ್ನು ಒಳಗೊಂಡಿದೆ.