ಬೆಂಗಳೂರು:ದಸರಾ ಹಬ್ಬದ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಮುಡಾ ಹಗರಣದಲ್ಲಿ ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆ ಕಾನೂನು ತಜ್ಞರು ಹಾಗೂ ತಮ್ಮ ಆಪ್ತರ ಜೊತೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ, ಕೇಂದ್ರ ಬಿಜೆಪಿ ನನ್ನನ್ನು ಕುಣಿಕೆಗೆ ಸಿಲುಕಿಸಿದೆ ಎಂದು ಕಿಡಿ ಕಾರಿದ್ದಾರೆ.
ವಿಭಾಗೀಯ ಪೀಠದ ಮುಂದೆ ಏಕದಸ್ಯ ಪೀಠದ ತೀರ್ಪಿಗೆ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ವಿಚಾರಣೆ ವಿಳಂಬ ಸಾಧ್ಯತೆ
ಈಗಾಗಲೇ ತಮ್ಮ ವಿರುದ್ಧ ಅರ್ಜಿದಾರರು ವಿಭಾಗೀಯ ಪೀಠದ ಮುಂದೆ ಕೇವಿಯಟ್ ಸಲ್ಲಿಸಿದ್ದು, ಇದರಿಂದ ವಿಚಾರಣೆ ಮತ್ತು ತೀರ್ಪು ವಿಳಂಬವಾಗಬಹುದು.
ಇದಕ್ಕೂ ಮುನ್ನವೇ ಮುಡಾ ಹಗರಣದ ವಿಚಾರಣೆ ನಡೆಯುತ್ತಿರುವ ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ದೂರುದಾರರು ಹೈಕೋರ್ಟ್ ತೀರ್ಪಿನ ಪ್ರತಿ ಸಲ್ಲಿಸಿ, ಹಗರಣ ತನಿಖೆಗೆ ಕೋರಲಿದ್ದಾರೆ.
ಹೈಕೋರ್ಟ್ ಪೀಠವೇ, ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ನಿರ್ಧಾರ ಎತ್ತಿ ಹಿಡಿದಿರುವುದರಿಂದ ಕೆಳ ನ್ಯಾಯಾಲಯ ಕಾಯ್ದಿರಿಸಿರುವ ತೀರ್ಪನ್ನು ಪ್ರಕಟಿಸುವ ಸಾಧ್ಯತೆ ಇದೆ.
ಅಧಿಕಾರ ತ್ಯಜಿಸುವ ಸ್ಥಿತಿ
ಈ ಎಲ್ಲಾ ವಿಷಯಗಳು ಸಭೆಯಲ್ಲಿ ಚರ್ಚೆಯಾಗಿದೆ, ನನಗೆ ಪಕ್ಷದ ವರಿಷ್ಠರು, ಸಚಿವರು, ಶಾಸಕರ ಮತ್ತು ನಾಡಿನ ಜನರ ಬೆಂಬಲ ಇದ್ದರೂ ಅಧಿಕಾರ ತ್ಯಜಿಸುವ ಸ್ಥಿತಿ ನಿರ್ಮಾಣವಾಗಿದೆ.
ನಮ್ಮ ಹೋರಾಟ ಮುಂದುವರೆಸೋಣ, ಆದರೆ, ರಾಜ್ಯಪಾಲರು ತಮ್ಮ ವಿರುದ್ಧ ಇನ್ನೂ ಕೆಲವು ಪ್ರಕರಣಗಳ ಬಗ್ಗೆ ತನಿಖೆಗೆ ಆದೇಶ ಮಾಡುವುದನ್ನೂ ತಳ್ಳಿಹಾಕುವಂತಿಲ್ಲ.
ಕಳೆದ 15 ತಿಂಗಳ ಆಡಳಿತದಲ್ಲಿ ಜನಪರ ಕೆಲಸಗಳನ್ನು ಮಾಡಿದ್ದರೂ, ಮಾಡದ ತಪ್ಪಿಗೆ ಗುರಿಯಾಗಬೇಕಾಗಿದೆ.
ದಿನನಿತ್ಯ ವಿಷಯ ಕೇಳಿ ಬೇಸರ
ದಿನನಿತ್ಯ ಇದರ ವಿಷಯವೇ ಕೇಳಿ ನನಗೂ ಬೇಸರವಾಗಿದೆ, ದಸರಾ ನಂತರ ಸ್ಥಾನ ತ್ಯಜಿಸುವ ಬಗ್ಗೆ ನಿರ್ಧಾರ ಮಾಡುವ ಇಂಗಿತ ವ್ಯಕ್ತಪಡಿಸಿದರು.
ಗುರುವಾರ ನಡೆಯುವ ಸಂಪುಟ ಸಭೆಯಲ್ಲೂ ನ್ಯಾಯಾಲಯ ತೀರ್ಪಿನ ಕುರಿತು ಚರ್ಚಿಸುವ ಸಾಧ್ಯತೆ ಇದೆ.