ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣ
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಹಾಗೂ ನಟಿ ಪವಿತ್ರಾಗೌಡ ಅವರ ಜಾಮೀನು ಅರ್ಜಿ ವಜಾಗೊಂಡಿದೆ.
ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ವಾದ ಪ್ರತಿವಾದ ಆಲಿಸಿದ ತೀರ್ಪು ಕಾಯ್ದಿರಿಸಿದ್ದ 57ಸಿಸಿಎಚ್ ಕೋರ್ಟ್ ನ ನ್ಯಾಯಾಧೀಶ ಜಯಶಂಕರ್ ಇಂದು ತೀರ್ಪು ಪ್ರಕಟಿಸಿ, ಇದೇ ಆರೋಪದಲ್ಲಿದ್ದ ಇಬ್ಬರಿಗೆ ಜಾಮೀನು ಮಂಜೂರು ಮಾಡಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾಗೌಡ ಮೊದಲ ಆರೋಪಿಯಾಗಿದ್ದರೆ, ನಟ ದರ್ಶನ್ ಎರಡನೇ ಆರೋಪಿಯಾಗಿದ್ದರು. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಗಳಿಗೆ ಜಾಮೀನು ದೊರೆತಿದೆ. ದರ್ಶನ್ ಪರ ಹಿರಿಯ ನ್ಯಾಯವಾದಿ ಸಿ.ವಿ.ನಾಗೇಶ್ ಅವರು ಎರಡು ದಿನಗಳ ಕಾಲ ವಾದ ಮಂಡಿಸಿ, ದರ್ಶನ್ ಅವರ ಪಾತ್ರವೇ ಇಲ್ಲ. ಪೊಲೀಸರು ಕತೆ ಕಟ್ಟಿದ್ದಾರೆ.
ಅವರ ತನಿಖೆಯ ವರದಿಗಳನ್ನು ನೋಡಿದರೆ ಲೋಪಗಳು ಕಂಡುಬರುತ್ತವೆ ಎಂದಿದ್ದರು. ಆರೋಪಿಗಳು ಮತ್ತು ಸಾಕ್ಷ್ಯಗಳ ಲೊಕೇಷನ್ ಒಂದೇ ಕಡೆ ಇದೆ ಎಂಬ ಪೊಲೀಸರ ವಾದಕ್ಕೆ ಆಕ್ಷೇಪಿಸಿದರು. ಒಬ್ಬ ಸಾಕ್ಷಿ ಹೇಳಿಕೆಯನ್ನು 13 ದಿನಗಳ ನಂತರ ತಡವಾಗಿ ದಾಖಲಿಸಿದ್ದಾರೆ.
ನಾಗೇಶ್ ಅವರ ಆಕ್ಷೇಪವನ್ನು ಸಾರಸಗಟಾಗಿ ಅಲ್ಲಗಳೆದ ಸರ್ಕಾರಿ ಅಭಿಯೋಜಕ ಪ್ರಸನ್ನಕುಮಾರ್, ಕೊಲೆ ಆರೋಪಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ನ್ಯಾಯಾಲಯದ ಮುಂದಿಟ್ಟಿದ್ದರು. ಜೂನ್ 11 ರಂದು ದರ್ಶನ್ ಬಂಧಿಸಲಾಗಿತ್ರು. ಈಗ ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.