Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ಅಂಕಣ

ಶಿಗ್ಗಾಂವಿ, ಸಂಡೂರು, ಚನ್ನಪಟ್ನದ FIR ಕಾಪಿ

by admin October 28, 2024
written by admin October 28, 2024 0 comments 4 minutes read
0FacebookTwitterPinterestEmail
154

ಕಳೆದ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಶಿಗ್ಗಾಂವಿಯ ಮಾಜಿ ಶಾಸಕ ಮಂಜುನಾಥ ಕುನ್ನೂರು ವಿಧಾನಸಭೆಯ ಮೊಗಸಾಲೆಗೆ ಬಂದಿದ್ದರು, ಹೀಗೆ ಬಂದವರು ಕಾಂಗ್ರೆಸ್ಸಿನ ಕೆಲ ನಾಯಕರ ಮುಂದೆ ತಮ್ಮ ನೋವು ತೋಡಿಕೊಂಡಿದ್ದರು.

’ಸಾರ್, ನಮ್ಮ ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದು ಸುಲಭ, ಈ ಗೆಲುವಿಗೆ ಅಗತ್ಯವಾದ ಒಂದೇ ಮಾನದಂಡವೆಂದರೆ ಪಂಚಮಸಾಲಿ ಲಿಂಗಾಯತರಿಗೆ ಟಿಕೆಟ್ ಕೊಡುವುದು, ಆದರೆ ಇದು ಗೊತ್ತಿದ್ದರೂ ಕ್ಷೇತ್ರದಲ್ಲಿ ಉದ್ದೇಶಪೂರ್ವಕವಾಗಿ ಪಂಚಮಸಾಲಿಗಳಿಗೆ ಟಿಕೆಟ್ ತಪ್ಪಿಸಲಾಗುತ್ತಿದೆ.

ಅದರಲ್ಲೂ ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರ ಗೆಲುವಿಗೆ ಅನುಕೂಲ ಮಾಡಿಕೊಡಲು ಮುಸ್ಲಿಮರಿಗೆ ಟಿಕೆಟ್ ಕೊಡಲಾಗುತ್ತಿದೆ, ಅರವತ್ತು ಸಾವಿರದಷ್ಟಿರುವ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ತಪ್ಪಿಸಿ, ಮುಸ್ಲಿಮರಿಗೆ ಟಿಕೆಟ್ ಕೊಡುತ್ತಿರುವುದರಿಂದ ಕಾಂಗ್ರೆಸ್ ಗೆಲುವು ಗಳಿಸಲು ಸಾಧ್ಯವಾಗುತ್ತಿಲ್ಲ.

ಯಾಕೆಂದರೆ ಮುಸ್ಲಿಮರ ವೋಟು ಗಣನೀಯ ಸಂಖ್ಯೆಯಲ್ಲಿ ಸಿಕ್ಕರೂ ಹಿಂದುಳಿದ, ದಲಿತ ಸಮುದಾಯಗಳ ಮತ ಬ್ಯಾಂಕನ್ನು ಕ್ರೋಢೀಕರಿಸಲು ಕಾಂಗ್ರೆಸ್ಸಿಗೆ ಸಾಧ್ಯವಾಗುತ್ತಿಲ್ಲ, ಆದರೆ ಅದೇ ಕಾಲಕ್ಕೆ ಬೊಮ್ಮಾಯಿ ಅವರು ಪಂಚಮಸಾಲಿ ಲಿಂಗಾಯತರು, ವಾಲ್ಮೀಕಿಗಳು, ಸಾದಲಿಂಗಾಯತರ ಮತಗಳನ್ನು ಕನ್‌ಸಾಲಿಡೇಟ್ ಮಾಡುತ್ತಾರೆ, ಉಳಿದಂತೆ ಕುರುಬರು, ಮುಸ್ಲಿಮರು, ದಲಿತರ ಮತ ಬ್ಯಾಂಕಿನಲ್ಲೂ ಒಂದಷ್ಟು ಮತ ಸೆಳೆದು ಗೆಲ್ಲುತ್ತಿದ್ದಾರೆ.

ಈ ಸತ್ಯ ನಮ್ಮ ಪಕ್ಷದ ಟಾಪ್ ಲೀಡರುಗಳಿಗೆ ಗೊತ್ತಿಲ್ಲ ಅಂತಲ್ಲ, ಆದರೆ ಅವರು ಬೇಕು ಅಂತಲೇ ಬಸವರಾಜ ಬೊಮ್ಮಾಯಿ ಅವರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ.

ಈಗ ಬಸವರಾಜ ಬೊಮ್ಮಾಯಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದಾರಲ್ಲ, ಹೀಗಾಗಿ ಸದ್ಯದಲ್ಲೇ ಶಿಗ್ಗಾಂವಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ, ಹೀಗಾಗಿ ಈ ಸಲವಾದರೂ ಪಂಚಮಸಾಲಿ ಸಮುದಾಯದವರಿಗೆ ಪಕ್ಷದ ಟಿಕೆಟ್ ಕೊಡುವಂತಾಗಬೇಕು, ಇವತ್ತು ನನ್ನ ಮಗ ರಾಜು ಕುನ್ನೂರ್‌ಗೆ ಟಿಕೆಟ್ ಕೊಡಿ ಅಂತ ನಾನು ಕೇಳಲು ಬಂದಿದ್ದೇನೆ, ಹಾಗಂತ ನನ್ನ ಮಗನಿಗೇ ಟಿಕೆಟ್ ಅಗುತ್ತದೆ ಅಂತಲ್ಲ, ಅದರೆ ಯಾವ ಕಾರಣಕ್ಕೂ ಪಂಚಮಸಾಲಿಗಳನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಡಬಾರದು.

ಹೀಗೆ ಪಂಚಮಸಾಲಿಗಳಿಗೆ ಟಿಕೆಟ್ ಕೊಟ್ಟರೆ, ಆ ಸಮುದಾಯದ ಮತಗಳ ಜತೆ ಅಹಿಂದ ವರ್ಗಗಳ ಮತ ಬ್ಯಾಂಕ್ ಸೇರಿ ಕಾಂಗ್ರೆಸ್ ಸುಲಭವಾಗಿ ಗೆಲ್ಲುತ್ತದೆ, ಹಾಗಂತ ಸಿಎಂ ಮತ್ತು ಡಿಸಿಎಂ ಅವರಿಗೆ ನೀವು ಒಂದು ಮಾತು ಹೇಳಬೇಕು ಸಾರ್.

ಒಂದು ವೇಳೆ ಇಷ್ಟೆಲ್ಲ ಹೇಳಿಯೂ ಈ ಸಲ ಶಿಗ್ಗಾಂವಿ ಟಿಕೆಟ್ಟನ್ನು ಪಂಚಮಸಾಲಿಗಳಿಗೆ ಕೊಟ್ಟಿಲ್ಲ ಅಂದ್ರೆ ಯಥಾ ಪ್ರಕಾರ ಬಿಜೆಪಿ ಗೆಲ್ಲುತ್ತದೆ, ನಾವು ಕೈ-ಕೈ ಹಿಸುಕಿಕೊಂಡು ತಿರುಗಾಡಬೇಕಾಗುತ್ತದೆ ಅಂತ ಮಂಜುನಾಥ್ ಕುನ್ನೂರ್ ಹೇಳುತ್ತಿದ್ದರೆ, ಕೇಳುತ್ತಿದ್ದ ಕಾಂಗ್ರೆಸ್ ನಾಯಕರು ಅವತ್ತು ಬೆರಗಾಗಿದ್ದರು.

ಭರತ್ ಬೊಮ್ಮಾಯಿ ಗೆಲ್ಲೋದು ಸುಲಭವಲ್ಲ

ಅಂದ ಹಾಗೆ ಈ ಬೆಳವಣಿಗೆ ನಡೆದು ಕೆಲವೇ ಕಾಲದಲ್ಲಿ ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆ ಎದುರಾಗಿದೆ, ಈ ಸಲ ಬಿಜೆಪಿಯಿಂದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಕಣಕ್ಕಿಳಿದಿದ್ದಾರೆ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಕಣಕ್ಕಿಳಿದಿದ್ದಾರೆ.

ಹೀಗೆ ಮೇಲ್ನೋಟಕ್ಕೆ ನೋಡಿದರೆ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಗೆಲ್ಲುವುದು ಸುಲಭ ಎಂಬ ಭಾವನೆ ಹಲವರಲ್ಲಿದೆ.

ಕಾರಣ, ಯಥಾ ಪ್ರಕಾರ ಕಾಂಗ್ರೆಸ್ ಪಕ್ಷದ ಟಿಕೆಟ್ಟನ್ನು ಮುಸ್ಲಿಮರಿಗೆ ನೀಡಲಾಗಿದೆ, ಹೀಗಾಗಿ ಎಂದಿನಂತೆ ಬಲಿಷ್ಟ ವರ್ಗದ ಬೆಂಬಲವಿಲ್ಲದೆ, ಅಹಿಂದ ವರ್ಗಗಳ ಮತಗಳನ್ನು ಕನ್‌ಸಾಲಿಡೇಟ್ ಮಾಡಲು ಸಾಧ್ಯವಾಗದೆ ಕಾಂಗ್ರೆಸ್ ಸೋಲುವುದು ಗ್ಯಾರಂಟಿ ಎಂಬುದು ಇಂತವರ ಲೆಕ್ಕಾಚಾರ.

ಆದರೆ, ಶಿಗ್ಗಾಂವಿಯ ಮತ ಬ್ಯಾಂಕುಗಳನ್ನು ಸ್ಪರ್ಶಿಸುತ್ತಾ ಹೋದರೆ, ’ಯೇ ಅಷ್ಟು ಸುಲಭವಾಗಿ ಭರತ್ ಬೊಮ್ಮಾಯಿ ಗೆಲ್ಲಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬರುತ್ತವೆ.

ಅದರ ಪ್ರಕಾರ, ಈ ಸಲ ಕಾಂಗ್ರೆಸ್ ಪಕ್ಷ ತಮ್ಮವರಿಗೆ ಟಿಕೆಟ್ ಕೊಡದೆ ಇರುವುದರಿಂದ ಪಂಚಮಸಾಲಿ ಸಮುದಾಯಕ್ಕೆ ಅಸಮಾಧಾನವಾಗಿದೆ ಎಂಬುದೇನೋ ನಿಜ, ಆದರೆ, ಇದೊಂದೇ ಕಾರಣಕ್ಕೆ ಪಂಚಮಸಾಲಿ ಮತದಾರರು ಭರತ್ ಬೊಮ್ಮಾಯಿ ಜತೆ ನಿಲ್ಲುತ್ತಾರೆ ಅಂತಲ್ಲ, ಕಾರಣ, ತಮ್ಮ ಸಮುದಾಯದವರೊಬ್ಬರು ಶಾಸಕರಾಗಿ ದಶಕಗಳೇ ಕಳೆದಿವೆ, ಹೀಗಿರುವಾಗ ಈ ಸಲ ಬೊಮ್ಮಾಯಿ ಕುಟುಂಬದ ಕುಡಿಯ ಜತೆ ನಿಂತರೆ ಮುಂದೆ ಇನ್ನಷ್ಟು ಕಾಲ ಪಂಚಮಸಾಲಿಗಳಿಗೆ ಅನ್ಯಾಯವಾಗುವುದು ಗ್ಯಾರಂಟಿ, ಹೀಗಾಗಿ ಇಂತಹ ಅಪಾಯ ತಪ್ಪಬೇಕು ಎಂದರೆ ಈ ಸಲ ಕಾಂಗ್ರೆಸ್ ಜತೆ ನಿಂತು ಭರತ್ ಬೊಮ್ಮಾಯಿ ಅವರನ್ನು ಸೋಲಿಸಬೇಕು ಎಂಬ ಭಾವನೆ ಪಂಚಮಸಾಲಿ ಸಮುದಾಯದಲ್ಲಿದೆ.

ಇನ್ನು ಕ್ಷೇತ್ರದಲ್ಲಿರುವ ಸಾದ ಲಿಂಗಾಯತರಲ್ಲೂ ಬೊಮ್ಮಾಯಿ ಪಾಲಿಟಿಕ್ಸ್ ಬಗ್ಗೆ ಅಸಮಾಧಾನವಿದೆ, ಯಾಕೆಂದರೆ ಇತ್ತೀಚಿನ ವರ್ಷಗಳಲ್ಲಿ ಸಾದ ಲಿಂಗಾಯತರಿಗೆ ಬಸವರಾಜ ಬೊಮ್ಮಾಯಿ ಅವರಿಂದಾದ ಅನುಕೂಲ ಅಷ್ಟಕ್ಕಷ್ಟೇ, ’ಯೇ ಬಿಡ್ರೀ, ನಾವು ಅವರ ಮನೆ ಹತ್ರಾನೇ ಹೋಗದಿಲ್ಲ, ಕ್ಷೇತ್ರದಲ್ಲಿ ಕಂಟ್ರಾಕ್ಟು ಕೆಲಸಗಳಿಂದ ಹಿಡಿದು ಯಾವ ಕೆಲಸವೇ ಇದ್ದರೂ ಅವರು ನಮಗೆ ಪ್ರಾಮಿನೆನ್ಸು ಕೊಡುವುದಿಲ್ಲ, ಹೀಗಿರುವಾಗ ನಾವೇಕೆ ಅವರ ಜತೆ ಹೋಗಬೇಕು’ ಎಂಬ ಮಾತು ಈ ಕ್ಯಾಂಪಿನಲ್ಲಿ ಕೇಳುತ್ತದೆ.

ಅರ್ಥಾತ್, ಈವರೆಗೂ ಬೊಮ್ಮಾಯಿ ಅವರ ಕೈ ಹಿಡಿಯುತ್ತಿದ್ದ ಲಿಂಗಾಯತ ಮತ ಬ್ಯಾಂಕ್ ಈ ಸಲ ಅಷ್ಟು ಸಾಲಿಡ್ಡಾಗಿ ಭರತ್ ಬೊಮ್ಮಾಯಿ ಜತೆ ನಿಲ್ಲುವುದಿಲ್ಲ.

ಇದೇ ರೀತಿ ಮುಸ್ಲಿಂ, ಕುರುಬ ಮತ ಬ್ಯಾಂಕಿನ ಮೇಲೆ ಪ್ರಭಾವ ಬೀರಿ ಹತ್ತು, ಹನ್ನೆರಡು ಪರ್ಸೆಂಟಿನಷ್ಟು ಮತ ಕೀಳುತ್ತಿದ್ದ ಬೊಮ್ಮಾಯಿಗೆ ಈ ಬಾರಿ ನಿರಾಸೆ ಕಾದಿದೆ, ಕಾರಣ, ಈ ಮತ ಬ್ಯಾಂಕಿನ ಮೇಲೆ ಸಿಎಂ ಸಿದ್ದರಾಮಯ್ಯ ಅವರಿಗಿರುವ ಪ್ರಭಾವ, ಕೈ ಅಭ್ಯರ್ಥಿಗೆ ಪ್ಲಸ್ ಆಗಿ, ಬಿಜೆಪಿ ಅಭ್ಯರ್ಥಿಗೆ ಮೈನಸ್ ಆಗಲಿದೆ ಎಂಬುದು ಖುದ್ದು ಕಾಂಗ್ರೆಸ್ಸಿಗರ ವಾದ, ಆ ದೃಷ್ಟಿಯಿಂದ ನೋಡಿದರೆ ಭರತ್ ಬೊಮ್ಮಾಯಿ ಗೆಲುವು ಕಷ್ಟ ಅನ್ನಿಸುವುದು ಸಹಜ.

ಮ್ಯಾಜಿಕ್ ಮಾಡಲಿದ್ದಾರೆ ಬಸಣ್ಣ

ಹೀಗೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರ ಮೈನಸ್ಸು, ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಅವರಿಗಿರುವ ಪ್ಲಸ್ ಪಾಯಿಂಟುಗಳ ಬಗ್ಗೆ ಏನೇ ಮಾತುಗಳಿರಲಿ, ಆದರೆ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ತೋರಿಸಲಿರುವ ಮ್ಯಾಜಿಕ್ಕಿನ ಬಗ್ಗೆ ಹಲವರಿಗೆ ಕುತೂಹಲವಿದೆ.

ಬೊಮ್ಮಾಯಿ ಮ್ಯಾಜಿಕ್ಕಿನ ಬಗ್ಗೆ ಹೇಳುವವರು, ಭರತ್ ಬೊಮ್ಮಾಯಿ ಗೆಲ್ಲುವುದು ನಿಶ್ಚಿತ ಎನ್ನುತ್ತಾರೆ.

ಅವರ ಪ್ರಕಾರ, ಕ್ಷೇತ್ರದ ಪಂಚಮಸಾಲಿ ಮತ ಬ್ಯಾಂಕು ಭರತ್ ಬೊಮ್ಮಾಯಿ ಜತೆ ನಿಲ್ಲುವುದು ಶತಃಸ್ಸಿದ್ಧ.
ಕಾರಣ, ಕ್ಷೇತ್ರದಲ್ಲಿ ನಡೆಯುವ ಬಹುತೇಕ ಕಾಮಗಾರಿಗಳ ಕಂಟ್ರಾಕ್ಟುಗಳಲ್ಲಿ ಪಂಚಮಸಾಲಿಗಳಿಗೆ ಹೆಚ್ಚು ಆದ್ಯತೆ ಸಿಗುತ್ತಿದೆ, ಇದೇ ರೀತಿ ಆ ಸಮುದಾಯದ ಹೆಣ್ಣು ಮಗಳೊಬ್ಬರನ್ನು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಸ್ಥಾನದಲ್ಲಿ ಕೂರಿಸಿದವರು ಬೊಮ್ಮಾಯಿ, ಹೀಗೆ ನೋಡುತ್ತಾ ಹೋದರೆ ಪಂಚಮಸಾಲಿ ಸಮುದಾಯದ ಶಾಸಕರಿದ್ದರೆ ಆ ಕ್ಷೇತ್ರದ ಪಂಚಮಸಾಲಿಗಳಿಗೆ ಎಷ್ಟು ಅನುಕೂಲವಾಗುತ್ತಿತ್ತೋ, ಅದಕ್ಕಿಂತ ಹೆಚ್ಚಿನ ಅನುಕೂಲ ಬಸವರಾಜ ಬೊಮ್ಮಾಯಿ ಅವರಿಂದಾಗಿದೆ.

ಹೀಗಾಗಿ ಬೊಮ್ಮಾಯಿ ಆಳ್ವಿಕೆಯಲ್ಲಿ ಕ್ಷೇತ್ರದ ಪಂಚಮಸಾಲಿ ಲಿಂಗಾಯತರಿಗೆ ಹೆಚ್ಚು ಅನುಕೂಲವಾಗಿದೆ, ಇದೇ ರೀತಿ ತಮಗಿಂತ ಪಂಚಮಸಾಲಿ ಸಮುದಾಯಕ್ಕೇ ಬೊಮ್ಮಾಯಿ ಆದ್ಯತೆ ಕೊಡುತ್ತಾರೆ ಎಂಬ ಭಾವನೆ ಸಾದ ಲಿಂಗಾಯತರಲ್ಲಿದ್ದರೂ, ಅದು ಭರತ್ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಜತೆ ನಿಲ್ಲುವ ಮಟ್ಟದಲ್ಲಿಲ್ಲ.

ಇದೇ ರೀತಿ ಬೊಮ್ಮಾಯಿ ಜನತಾ ಪರಿವಾರದ ಹಿನ್ನೆಲೆಯಿಂದ ಬಂದವರಾದ್ದರಿಂದ ಸೆಕ್ಯುಲರ್ ಫೇಸ್‌ಕಟ್ಟನ್ನು ಉಳಿಸಿಕೊಂಡು ಬಂದಿದ್ದಾರೆ, ಹೀಗಾಗಿ ಮುಸ್ಲಿಂ ಮತ ಬ್ಯಾಂಕಿನಲ್ಲೂ ಪಾಲು ಪಡೆಯುವ ಚಾಕಚಕ್ಯತೆ ಅವರಿಗಿದೆ.

ಇದೇ ರೀತಿ ಕ್ಷೇತ್ರದಲ್ಲಿರುವ ವಾಲ್ಮೀಕಿ ಮತದಾರರು ಅವರ ಜತೆ ದೊಡ್ಡ ಮಟ್ಟದಲ್ಲಿ ನಿಂತಿದ್ದಾರೆ, ಹೀಗಾಗಿ ಅವರ ಈ ಮ್ಯಾಜಿಕ್ಕು ಭರತ್ ಬೊಮ್ಮಾಯಿ ಅವರಿಗೆ ಪ್ಲಸ್ ಆಗುವುದು ನಿಶ್ಚಿತ ಎಂಬುದು ಬಹುತೇಕರ ಮಾತು.

ಸಂಡೂರಿನಲ್ಲಿ ಸಂತೋಷ್ ಲಾಡ್ ಪವರ್

ಈ ಮಧ್ಯೆ ಉಪಚುನಾವಣೆ ನಡೆಯುವ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಅನ್ನಪೂರ್ಣ ಮುಂದಿದ್ದಾರೆ.

ಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರು ಕ್ಷೇತ್ರದ ಲಿಂಗಾಯತ, ವಾಲ್ಮೀಕಿ ಮತ ಬ್ಯಾಂಕನ್ನು ಕ್ರೋಢೀಕರಿಸಿ ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ಕಮಲ ಪಾಳಯದಲ್ಲಿದ್ದರೂ ಅದು ಸರಳವಾಗಿಲ್ಲ.

ಕಾರಣ, ಕ್ಷೇತ್ರದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹವಾ ಹೇಗಿದೆ ಎಂದರೆ, ಅದರ ಬಿರುಸಿಗೆ ಬಿಜೆಪಿ ಸುಸ್ತೆದ್ದು ಹೋಗಿದೆ.
ಕ್ಷೇತ್ರದಲ್ಲಿ ಲಿಂಗಾಯತ, ವಾಲ್ಮೀಕಿ, ಮುಸ್ಲಿಂ ಸೇರಿದಂತೆ ಎಲ್ಲ ವರ್ಗದ ಮತದಾರರಲ್ಲಿ ಲಾಡ್ ಪರ ಒಲವಿದ್ದು, ಈ ಅಂಶವೇ ಕಾಂಗ್ರೆಸ್ ಅಭ್ಯರ್ಥಿಯ ಪಾಲಿಗೆ ಪ್ಲಸ್ ಆಗಲಿದೆ.

ಈ ಮಧ್ಯೆ ಬಿಜೆಪಿ ಪಾಳಯದಲ್ಲೇ ಹೇಳಿಕೊಳ್ಳುವ ಒಗ್ಗಟ್ಟು ಕಾಣುತ್ತಿಲ್ಲ, ಮೊದಲನೆಯದಾಗಿ ಅಭ್ಯರ್ಥಿ ಬಂಗಾರು ಹನುಮಂತು ಹಿಂದೆ ಗಣಿಧಣಿ ಜನಾರ್ಧನ ರೆಡ್ಡಿ ನಿಂತಿರುವುದರಿಂದ ಮಾಜಿ ಸಚಿವ ಬಿ.ಶ್ರೀರಾಮುಲು ತಟಸ್ಥರಾಗಿದ್ದಾರೆ, ಇದೇ ರೀತಿ ಪಕ್ಷದ ಟಿಕೆಟ್ಟನ್ನು ದೇವೇಂದ್ರಪ್ಪ ಅವರಿಗೆ ನೀಡದಿರುವುದರಿಂದ ಮುನಿಸಿಕೊಂಡ ಕಾರ್ತಿಕ್ ಘೋರ್ಪಡೆ ದೂರ ಉಳಿದಿದ್ದಾರೆ, ಪರಿಣಾಮ, ಅವರ ಕಾರ್ಖಾನೆಯಲ್ಲಿ ಕೆಲಸ ಮಾಡುವ ಮೂವತ್ತು ಸಾವಿರದಷ್ಟು ಮತಗಳು ಏನಾಗಲಿವೆ ಎಂಬ ಆತಂಕ ಬಿಜೆಪಿ ಪಾಳಯದಲ್ಲಿದೆ.

ಈ ಮಧ್ಯೆ ಸಂಡೂರಿನ ಮತದಾರರು ಸ್ಥಳೀಯರಿಗೆ ಪ್ರಾಮಿನೆನ್ಸು ಎಂಬ ಮನಃಸ್ಥಿತಿಯಲ್ಲಿದ್ದು ಈ ಅಂಶವೇ ಬಂಗಾರು ಹನುಮಂತು ಅವರಿಗೆ ಕಿರಿಕಿರಿ ಮಾಡುವ ಲಕ್ಷಣಗಳಿವೆ, ಕಾರಣ, ಬಂಗಾರು ಹನುಮಂತು ವಿಜಯನಗರ ಜಿಲ್ಲೆಯವರು.

ಎಲ್ಲಕ್ಕಿಂತ ಮುಖ್ಯವಾಗಿ ಸಂಡೂರಿನ ಗಣಿ ಲಾಬಿಗೆ ಈ ಹಿಂದೆ ಬಿಜೆಪಿ ಅವಧಿಯಲ್ಲಾದ ಕಹಿ ನೆನಪು ಮಾಸಿಲ್ಲ, ಇನ್ನು ಸ್ಥಳೀಯ ಕಂಟ್ರಾಕ್ಟರುಗಳ ವಿಷಯದಲ್ಲಿ ಸಚಿವ ಸಂತೋಷ್ ಲಾಡ್ ಸದಾ ಕಾಲ ಮೃದುವಾಗಿದ್ದಾರೆ.

ಈ ಮಧ್ಯೆ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಿದ್ದು, ಈ ಅಂಶ ಕಾಂಗ್ರೆಸ್ಸಿನ ಅಭ್ಯರ್ಥಿ ಅನ್ನಪೂರ್ಣ ಅವರಿಗೆ ಪ್ಲಸ್ ಆಗುವ ಲಕ್ಷಣಗಳು ಹೆಚ್ಚಿವೆ.

ಇಷ್ಟೆಲ್ಲದರ ನಡುವೆ ಜಾತಿ ಸಮೀಕರಣವನ್ನು ಬಳಸಿಕೊಂಡು ಗೆಲ್ಲುವ ಲೆಕ್ಕಾಚಾರ ಬಿಜೆಪಿಯಲ್ಲಿದ್ದರೂ ಅದು ಸರಳ ಅನ್ನಿಸುತ್ತಿಲ್ಲ.

ವಿಜಯೇಂದ್ರ ಲೆಮನ್ ಟೆಕ್ನಿಕ್?

ಈ ಮಧ್ಯೆ ಚನ್ನಪಟ್ಟಣದ ಕಣದಲ್ಲಿ ’ಕೆ.ಆರ್.ಪೇಟೆ ಲೆಮನ್ ಟೆಕ್ನಿಕ್’ ಬಳಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಿರ್ಧರಿಸಿದ್ದಾರಂತೆ.

ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಕೆ.ಆರ್.ಪೇಟೆ ಕ್ಷೇತ್ರದ ಉಪಚುನಾವಣೆ ನಡೆಯಿತಲ್ಲ, ಆ ಸಂದರ್ಭದಲ್ಲಿ ಸಣ್ಣ-ಪುಟ್ಟ ಜಾತಿಗಳ ಮತಗಳನ್ನು ಕ್ರೋಡೀಕರಿಸಿ ಪಕ್ಷದ ಕ್ಯಾಂಡಿಡೇಟನ್ನು ಗೆಲ್ಲಿಸಿದ್ದೇ ವಿಜಯೇಂದ್ರ ಅವರ ಲೆಮನ್ ಟೆಕ್ನಿಕ್.

ಈಗ ಚನ್ನಪಟ್ಟಣದ ಕಣದಲ್ಲಿ ಅದನ್ನು ಜಾರಿ ಮಾಡುವುದು, ಮಿತ್ರಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವುದು ವಿಜಯೇಂದ್ರ ಥಿಂಕಿಂಗು.

ಆರ್.ಟಿ.ವಿಠ್ಠಲಮೂರ್ತಿ

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
bjpchannapattanacongresjdsmuslimobcpanchamasalisanduruShiggavithree by-electionvokkaliga
0 FacebookTwitterPinterestEmail
admin

previous post
ಉಪಚುನಾವಣೆ: ರಾಜ್ಯ ಕಾಂಗ್ರೆಸ್ ಸರ್ಕಾರದ ದಬ್ಬಾಳಿಕೆ
next post
ಲ್ಯಾಂಡ್ ಜಿಹಾದ್ ಕುರಿತು ಸಿದ್ದರಾಮಯ್ಯ ಉತ್ತರಿಸಲಿ

You may also like

ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

March 2, 2026

ಅರಸು, ಕೃಷ್ಣ, ಯಡಿಯೂರಪ್ಪ ಅವರಿಗೆ ನಸೀಬು ಇತ್ತು

September 15, 2025

ಇತಿಹಾಸದ ಪುಟಗಳಲ್ಲಿ ರಾಚಯ್ಯ ನೆಲೆಸಿದ ಕತೆ

September 13, 2025

ವಿಜಯೇಂದ್ರ – ನಿಖಿಲ್ ಈಗ ಜೋಡೆತ್ತುಗಳು

September 8, 2025

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

August 25, 2025

ಆರ್‌ಸಿಬಿ ತಂಡಕ್ಕೆ ಬೆಂಗಳೂರಿನಲ್ಲಿ ಭವ್ಯ ಸ್ವಾಗತ

June 4, 2025

ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ

May 19, 2025

ಇತಿಹಾಸ ಮರೆಯದ ಕೌತುಕದ ಕ್ಷಣಗಳು..

April 21, 2025

ಕೇಂದ್ರ ಮಂತ್ರಿ ಕುಮಾರಣ್ಣನ ಲೇಟೆಸ್ಟು ಸಂಕಟ

February 17, 2025

ಅಮಿತ್ ಷಾ ಆಟ ಬಲ್ಲವರಾರು?

February 3, 2025

Social Networks

Facebook Twitter Instagram Linkedin Youtube Email Rss

KMS Analysis

  • ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

    March 2, 2026
  • ಬಿಹಾರ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ದೆಹಲಿಗೆ

    October 25, 2025
  • ಜಾತಿಗಣತಿ ವೇಳೆ ಒಕ್ಕಲಿಗ ಎಂದೇ ಬರೆಸಲು ಶ್ರೀಗಳ ಕರೆ

    October 6, 2025
  • ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

    June 17, 2025
  • ಕರ್ನಾಟಕದಲ್ಲಿ ಹೊಸದಾಗಿ ಜಾತಿಗಣತಿ

    June 12, 2025

Categories

  • Special Story (404)
  • ಅಂಕಣ (108)
  • ಉದ್ಯೋಗ (315)
  • ದಿನ ಭವಿಷ್ಯ (110)
  • ರಾಜಕೀಯ (1,902)
  • ರಾಜ್ಯ (2,213)
  • ರಾಷ್ಟ್ರ (2,183)
  • ವಿಶ್ಲೇಷಣೆ (189)
  • ಶಿಕ್ಷಣ (381)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026

KMS Special

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

March 2, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ