ಬೆಂಗಳೂರು:ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಕುರಿತು ವಸತಿ ಸಚಿವ ಜಮೀರ್ ಅಹಮದ್ ಖಾನ್ ನೀಡಿರುವ ಹೇಳಿಕೆ ನಾಗರಿಕ ಸಮಾಜ ಒಪ್ಪುವಂತಹದ್ದಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಗೌರವ ಎಂಬುದು ಇರುತ್ತದೆ, ಶ್ರೀಮಂತನಿರಲಿ, ಬಡವನಿರಲಿ, ಎಲ್ಲರಿಗೂ ಅವರದ್ದೇ ಆದ ಗೌರವ ಇರುತ್ತದೆ, ಯಾರೂ ಯಾರನ್ನೂ ಕೊಂಡುಕೊಳ್ಳಲು ಆಗುವುದಿಲ್ಲ, ಇದರ ಅರಿವು ಇರುವವರು ಯಾರೂ ಹೀಗೆ ಮಾತನಾಡುವುದಿಲ್ಲ ಎಂದರು.
ಕಾಂಗ್ರೆಸ್ ಆರೋಪ
ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿದ್ದ ಶೇಕಡ 40 ಕಮೀಷನ್ ಆರೋಪ ಕುರಿತ ಲೋಕಾಯುಕ್ತ ವರದಿ ಬಗ್ಗೆ ಮಾತನಾಡುವುದಿಲ್ಲ, ಬಿಜೆಪಿ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಮಾತನಾಡಿದ್ದಾರೆ, ಉಪಚುನಾವಣೆ ಫಲಿತಾಂಶ ನಂತರ ನಾನು ಮಾತನಾಡುತ್ತೇನೆ ಎಂದರು.
ಶೇಕಡ 40 ಕಮೀಷನ್ ಆರೋಪದಲ್ಲಿ ಯಾವುದು ಸತ್ಯ, ಯಾವುದು ಅಸತ್ಯ ಎಂಬ ಬಗ್ಗೆ ನವೆಂಬರ್ 23ರ ನಂತರ ನಾನು ಮಾತನಾಡುತ್ತೇನೆ.
ಬಿಜೆಪಿ ಆಡಳಿತ ವೇಳೆಯಲ್ಲಿನ ವಿಷಯಗಳ ತನಿಖೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿರುವ ಕುರಿತು ಉಪಚುನಾವಣಾ ಫಲಿತಾಂಶ ನಂತರ ಪ್ರತಿಕ್ರಿಯಸುವೆ ಎಂದರು.