ಬೆಂಗಳೂರು:ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ ಸ್ಥಾಪನೆಗೆ ಕಾರಣೀಭೂತರಾದ ಹಿಂದಿನ ನಿರ್ದೇಶಕ ಡಾ.ಮಂಜುನಾಥ್ ಅವರನ್ನೇ ಸರ್ಕಾರ ಕಡೆಗಣಿಸಿ ಉದ್ಘಾಟನೆ ಮಾಡಿದೆ.
ಮಂಜುನಾಥ್ ಅವರು ನಿರ್ದೇಶಕರಾಗಿದ್ದ ಸಂದರ್ಭದಲ್ಲಿ 40 ಕೋಟಿ ರೂ.ಗಳನ್ನು ದಾನಿಗಳಿಂದ ಸಂಗ್ರಹಿಸಿ ಆಸ್ಪತ್ರೆ ಸ್ಥಾಪನೆಗೆ ಬುನಾದಿ ಹಾಕಿದರು.
ಬಿಜೆಪಿ ಸರ್ಕಾರ 128 ಕೋಟಿ ರೂ.
ನಂತರ ಎಚ್.ಡಿ.ಕುಮಾರಸ್ವಾಮಿ ಆಡಳಿತದಲ್ಲಿ ಆಸ್ಪತ್ರೆಗೆ ಅನುಮತಿ ಪಡೆದು ಶಿಲಾನ್ಯಾಸ ನಡೆಸಿದರು. ನಂತರ ಬಂದ ಬಿಜೆಪಿ ಸರ್ಕಾರ 128 ಕೋಟಿ ರೂ. ಬಿಡುಗಡೆ ಮಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೃದ್ರೋಗಿಗಳಿಗೆ ಚಿಕಿತ್ಸೆ ಕಲ್ಪಿಸಲು ಆಸ್ಪತ್ರೆ ತಲೆ ಎತ್ತುವಂತೆ ಮಾಡಿದರು.
ಮೈಸೂರು ನಂತರ ಕಲಬುರಗಿಯಲ್ಲಿ ನಿನ್ನೆ ಜಯದೇವ ಹೃದ್ರೋಗ ಆಸ್ಪತ್ರೆ ಕಾರ್ಯಾರಂಭ ಮಾಡಿದೆ.
ನಿನ್ನೆ ಲೋಕಾರ್ಪಣೆ
ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಸರ್ಕಾರ ನಿನ್ನೆ ದೊಡ್ಡ ಮಟ್ಟದಲ್ಲೇ ಉದ್ಘಾಟನಾ ಸಮಾರಂಭ ಏರ್ಪಡಿಸಿತ್ತು, ಆದರೆ, ಆಸ್ಪತ್ರೆ ಸ್ಥಾಪನೆಗೆ ಕಾರಣರಾದ ಡಾ.ಮಂಜುನಾಥ್ ಅವರನ್ನೇ ಆಹ್ವಾನಿಸದಷ್ಟು ಅನಾಗರಿಕತೆ ಪ್ರದರ್ಶಿಸಿದೆ.