ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬಿಡಿ ನಿವೇಶನಗಳ ಹಂಚಿಕೆ ಪ್ರಕರಣ ತನಿಖೆಯನ್ನು ಸಿಬಿಐ ನಡೆಸಲಿದೆ ಎಂಬ ಆತಂಕ ತಮಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ವಿಚಾರವನ್ನು ರಾಜಕೀಯ ಮಾಡಲಾಗುತ್ತಿದೆ, ಇದರ ಹಿಂದೆ ಬಿಜೆಪಿ ಇದೆ ಎಂಬುದು ಜಗಜ್ಜಾಹೀರಾಗಿದೆ.
ತೀರ್ಪು ಕಾಯ್ದಿರಿಸಲಾಗಿದೆ
ಪ್ರಕರಣವನ್ನು ಸಿಬಿಐಗೆ ವಹಿಸುವ ಸಂಬಂಧ ನ್ಯಾಯಾಲಯ ವಾದ-ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿದೆ.
ಇದರಲ್ಲಿ ನಮಗೆ ನ್ಯಾಯ ದೊರಕುತ್ತದೆ ಎಂಬ ವಿಶ್ವಾಸವಿದೆ, ತೀರ್ಪು ಕಾಯ್ದಿರಿಸಿರುವಾಗ ಸಿಬಿಐ ತನಿಖೆ ಬಗ್ಗೆ ಉತ್ತರಿಸಲಾಗದು ಎಂದರು.
ಜಾರಿ ನಿರ್ದೇಶನಾಲಯ (ಇ.ಡಿ.) ನೋಟಿಸ್ ನೀಡಿ ವಿಚಾರಣೆಗೆ ಆತುರವೇಕೆ ಎಂದು ನ್ಯಾಯಾಲಯವೇ ತಡೆಯಾಜ್ಞೆ ನೀಡಿದೆ.
ನ್ಯಾಯಪೀಠವೇ ಪ್ರಶ್ನಿಸಿದೆ
ಸಿಬಿಐಗೆ ವಹಿಸುವ ಅರ್ಜಿ ವಿಚಾರಣೆ ಹಂತದಲ್ಲಿ ಇರುವಾಗ ತನಿಖೆಗೆ ಆತುರ ಏಕೆ ಎಂದು ನ್ಯಾಯಪೀಠವೇ ಪ್ರಶ್ನಿಸಿದೆ.
ಹೀಗಿರುವಾಗ ನಾನು ಏತಕ್ಕೆ ಆತಂಕ ಪಟ್ಟುಕೊಳ್ಳಲಿ, ನಾವೇನು ತಪ್ಪು ಮಾಡಿದ್ದೇವೆಯೇ ಎಂದು ಪ್ರಶ್ನಿಸಿದರು.
