ಬೆಂಗಳೂರು:ಅತಿ ಹೆಚ್ಚು ಉದ್ಯೋಗ ಅವಲಂಬನೆ ಕೃಷಿ ಕ್ಷೇತ್ರದಲ್ಲಿ ಇರುವುದರಿಂದ, ರೈತರ ಬೇಡಿಕೆಗಳ ಈಡೇರಿಕೆ ಪ್ರಥಮ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಭರವಸೆ ನೀಡಿದ್ದಾರೆ.
ತಾವೂ ರೈತ ಕುಟುಂಬದಿಂದ ಬಂದಿದ್ದು, ಸದಾ ಕೃಷಿಕರ ಪರವಾಗಿ ಇರುವುದಲ್ಲದೆ, ರೈತಾಪಿ ಜನರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುತ್ತಲೇ ಬಂದಿರುವುದಾಗಿ ತಿಳಿಸಿದರು.
ರೈತರ ಹಿತ ಕಾಯಲು ಬದ್ಧ
ವಿಧಾನಸೌಧದದಲ್ಲಿ ನಡೆದ 2025-26ನೇ ಸಾಲಿನ ರಾಜ್ಯ ಆಯವ್ಯಯ ಕುರಿತ ಪೂರ್ವಭಾವಿ ಸಭೆ ವೇಳೆ ವಿವಿಧ ರೈತ ಸಂಘದ ಮುಖಂಡರುಗಳ ಬೇಡಿಕೆಗಳ ಮನವಿಪತ್ರ ಸ್ವೀಕರಿಸಿ ಮಾತನಾಡಿದ ಅವರು, ರೈತರ ಹಿತ ಕಾಪಾಡಲು ಸರ್ಕಾರ ಸದಾ ಬದ್ಧವಾಗಿದೆ ಎಂದರು.
ರೈತರನ್ನು ತೀವ್ರ ಸಂಕಷ್ಟಕ್ಕೆ ದೂಡುತ್ತಿರುವ ಹಾಗೂ ಭೂಮಿ, ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿರುವ ಮೈಕ್ರೋ ಫೈನಾನ್ಸ್‌ಗಳ ಬಲವಂತದ ಸಾಲ ವಸೂಲಾತಿಗೆ ಸುಗ್ರೀವಾಜ್ಞೆ ಮೂಲಕ ಕಡಿವಾಣ ಹಾಕಿದ್ದಕ್ಕಾಗಿ ರೈತ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.