ಬೆಂಗಳೂರು:ಸಂಖ್ಯಾಬಲದ ಆಧಾರದ ಮೇಲೆ ಆಡಳಿತಾರೂಢ ಕಾಂಗ್ರೆಸ್ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ನೋಟಿಸ್ ನೀಡಿದರೆ, ತಕ್ಷಣವೇ ಸ್ಥಾನ ತ್ಯಜಿಸುವುದಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತದಲ್ಲಿರುವ ಕಾಂಗ್ರೆಸ್‌ಗೆ ಪರಿಷತ್‌ನಲ್ಲಿ ಈಗ ಬಹುಮತವಿದೆ.
ಉಪಸಭಾಪತಿಯೂ ಸಿದ್ಧ
ಇಂತಹ ಸನ್ನಿವೇಶದಲ್ಲಿ ತಮ್ಮನ್ನು ಮತ್ತು ಉಪಸಭಾಪತಿ ಸ್ಥಾನದಿಂದ ಎಂ.ಕೆ.ಪ್ರಾಣೇಶ್ ಅವರನ್ನು ಕೆಳಗಿಳಿಸಲು ನೋಟಿಸ್ ನೀಡಿದರೆ, ನಾವು ಸ್ಥಾನ ತೊರೆಯಲು ಸಿದ್ಧ ಎಂದರು.
ಬಿಜೆಪಿ ಆಡಳಿತದಲ್ಲಿ ತಮ್ಮನ್ನು ಸಭಾಪತಿಯನ್ನಾಗಿ ಆಯ್ಕೆ ಮಾಡಲಾಗಿತ್ತು, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಈಗ ಕಾಂಗ್ರೆಸ್‌ಗೆ ಪರಿಷತ್‌ನಲ್ಲಿ ಬಹುಮತವಿದೆ.
ವಿಧಾನಮಂಡಲ ಅಧಿವೇಶನ
ಮಾರ್ಚ್ 3ರಿಂದ ಆರಂಭವಾಗಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ಜನರ ಸಮಸ್ಯೆಗಳಿಗೆ ಒತ್ತು ಕೊಟ್ಟು ಚರ್ಚಿಸುವ ಅವಶ್ಯಕತೆ ಇದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಅನೇಕ ಜ್ವಲಂತ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚರ್ಚೆಗೆ ಈಗಾಗಲೇ ಸದಸ್ಯರು ನೋಟಿಸ್ ನೀಡಿದ್ದಾರೆ, ಇಂತಹ ವಿಷಯಗಳು ಸದನದಲ್ಲಿ ಚರ್ಚೆಯಾದರೆ, ಸರ್ಕಾರದ ಕಣ್ಣು ತೆರೆಸಿ ಪರಿಹಾರ ಕಂಡುಕೊಳ್ಳಲು ದಾರಿಯಾಗಲಿದೆ ಎಂದರು.