ಭಾಗಮಂಡಲ(ಕೊಡಗು):ಹನಿಟ್ರ್ಯಾಪ್ ಸುಮ್ನೆ ಆಗುತ್ತೇನ್ರಿ, ನಾವು ಹಲೋ ಅಂದರೆ, ಅವರೂ ಹಲೋ ಎನ್ನುತ್ತಾರೆ, ನಾವು ಸಮ್ಮನಿದ್ದರೆ, ಏನೂ ಮಾಡಲಾಗದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ.
ಹನಿಟ್ರ್ಯಾಪ್ ಆದವರಿಗೆ ಮಾಡಿದ್ದುಣ್ಣೋ ಮಾರಾಯಾ ಎಂಬಂತಾಗಿದೆ, ಅವರವರ ನೋವನ್ನು ಅವರು ಹೇಳಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದರು.
ಪೋಲಿಸ್‌ಗೆ ದೂರು ನೀಡಲಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್‌ನಲ್ಲಿ ಸಿಲುಕಿದ್ದರೆ, ಪೋಲಿಸ್ ಠಾಣೆಗೆ ದೂರು ನೀಡಲಿ, ಬೇರೆಯವರು ಸುಮ್ಮನೆ ನಿಮ್ಮ ಹತ್ತಿರ ಬರ್ತಾರಾ, ಹನಿಟ್ರ್ಯಾಪ್ ಸುಮ್ಮನೆ ಆಗುತ್ತಾ, ನಾವು ಮಾಡಿದ್ರೆ ಆಗುತ್ತೆ.
ನೀವು ಹಲೋ ಅಂದ್ರೆ, ಅವರು ಹಲೋ ಅಂತಾರೆ, ನೀವು ಬಾಯ್ ಅಂದ್ರೆ ಅವರು ಬಾಯ್ ಅಂತಾರೆ.
ತನಿಖೆ ಮಾಡೋಣ
ಯಾರಿಗಾದರೂ ಹನಿಟ್ರ್ಯಾಪ್ ಆಗಿದ್ದರೆ, ಪೋಲಿಸ್ ಠಾಣೆಗೆ ಹೋಗಿ ದೂರು ಕೊಡಲಿ, ಆಗ ತನಿಖೆ ಮಾಡೋಣ.
ನಮ್ಮ ಮೇಲೆ ಏಕೆ ಆರೋಪ, ದೂರು ಕೊಡಿ, ತನಿಖೆ ಮಾಡೋಣ, ಎರಡೂ ಪಕ್ಷಗಳು ಒಬ್ಬರನ್ನೊಬ್ಬರು ಕೆಣಕುತ್ತಿದ್ದಾರೆ ಎಂದರು.