ಕಲಬುರಗಿ:ಬೆಂಗಳೂರಿನ ಸಂಜಯ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟ್ರಾಮಾ ಆಂಡ್ ಆರ್ಥೋಪೆಡಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಗಿರೀಶ್ಗೌಡ ಎಒಎಮ್ಎಸ್ಐನ 2025-29ರ ಅವಧಿಗೆ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು.
ಕಲಬುರಗಿಯಲ್ಲಿ ನಡೆದ ಭಾರತೀಯ ಒರಲ್ ಮತ್ತು ಮ್ಯಾಕ್ಸಿಲೋಫೇಷಿಯಲ್ ಶಸ್ತ್ರಚಿಕಿತ್ಸಕರ (ಎಒಎಮ್ಎಸ್ಐ) ಕರ್ನಾಟಕ ಚಾಪ್ಟರ್ನ 12ನೇ ರಾಜ್ಯಮಟ್ಟದ ಸಮ್ಮೇಳನದಲ್ಲಿ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಡಾ.ಗಿರೀಶ್ಗೌಡ ನೇಮಕಗೊಂಡರು.
ನಂತರ ಮಾತನಾಡಿದ ಅವರು, ರೋಗಿಗಳು, ಸಮಾಜ ಮತ್ತು ಸಂಘದ ಏಳಿಗೆ, ಬೆಳವಣಿಗೆ, ಸದಸ್ಯರ ಕಲ್ಯಾಣಕ್ಕೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಶಸ್ತ್ರಚಿಕಿತ್ಸಾ ಕೌಶಲ್ಯ ವೃದ್ಧಿ
ಸ್ನಾತಕೋತ್ತರ ಪದವೀಧರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಒರಲ್ ಮತ್ತು ಮ್ಯಾಕ್ಸಿಲೋಫೇಷಿಯಲ್ ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ಶಸ್ತ್ರಚಿಕಿತ್ಸಾ ಕೌಶಲ್ಯ ವೃದ್ಧಿ, ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಐ) ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಸಮ್ಮೇಳನದಲ್ಲಿ ವಿವಿಧ ಸಂವಾದ ಹಾಗೂ ಚರ್ಚಾ ಕಾರ್ಯಕ್ರಮಗಳು ನಡೆದವು, ಸುಧಾರಿತ ಚಿಕಿತ್ಸಾ ಕ್ರಮಗಳನ್ನು ಪ್ರಸ್ತುತ ಪಡಿಸಲಾಯಿತು.
ಸಮ್ಮೇಳನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಶಸ್ತ್ರಚಿಕಿತ್ಸಕರು, ಪ್ರಾಧ್ಯಾಪಕರು, ವೈದ್ಯಕೀಯ ಕಾಲೇಜುಗಳ ಪ್ರಮುಖರು ಹಾಗೂ ವಿದ್ಯಾರ್ಥಿಗಳು ಆಗಮಿಸಿದ್ದರು.

