88
ಬೆಂಗಳೂರು:ಮೈಸೂರು ಶೈಲಿಯ ರುಚಿ ಉಪಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಳಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಸವಿದರು.
ಶಿವಕುಮಾರ್ ಆಹ್ವಾನದ ಮೇರೆಗೆ ಸದಾಶಿವನಗರದ ಮನೆಗೆ ಧಾವಿಸಿದ ಮುಖ್ಯಮಂತ್ರಿ, ನಾಟಿ ಕೋಳಿ ಸಾರು, ತಟ್ಟೆ ಇಡ್ಲಿ ಸೇರಿದಂತೆ ಇತರ ತಿನಿಸುಗಳನ್ನು ಸವಿದರು.
ಮೈಸೂರು ಬಾಣಸಿಗರಿಂದ ಸಿದ್ಧತೆ
ಮೈಸೂರಿನಿಂದ ಕರೆಸಿದ್ದ ಬಾಣಸಿಗರಿಂದ ಶಿವಕುಮಾರ್ ಉಪಹಾರ ಸಿದ್ಧಪಡಿಸಿದ್ದರು, ನಿಗದಿತ ಸಮಯಕ್ಕೆ ಧಾವಿಸಿದ ಸಿದ್ದರಾಮಯ್ಯ, ಮಾಜಿ ಸಂಸದ ಡಿ.ಕೆ.ಸುರೇಶ್, ವಿಧಾನಸಭಾ ಸದಸ್ಯ ರಂಗನಾಥ್ ಜೊತೆಗೂಡಿ ಉಪಹಾರ ಸೇವಿಸಿದರು.
ನಂತರ ಮುಖ್ಯಮಂತ್ರಿ ಹಾಗೂ ಶಿವಕುಮಾರ್ ಪ್ರತ್ಯೇಕ ಕೊಠಡಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪ್ರಸಕ್ತ ರಾಜಕಾರಣ, ಪಕ್ಷ ಸಂಘಟನೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಿ ಸುದ್ದಿಗಾರರೊಂದಿಗೆ ಮಾತನಾಡಲು ಹೊರಬಂದರು.

