Saturday, March 14, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, March 14, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyರಾಜಕೀಯರಾಜ್ಯರಾಷ್ಟ್ರ

ಸಂಪುಟ ಪುನರ್ ರಚನೆಗೆ ಹಿರಿಯ ಶಾಸಕರ ಆಗ್ರಹ

by KM Shivaraju March 13, 2026
written by KM Shivaraju March 13, 2026 0 comments 1 minutes read
0FacebookTwitterPinterestEmail
5

ಬೆಂಗಳೂರು:ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಬಲಿತರೂ ಸೇರಿದಂತೆ ಪಕ್ಷದ ಹಿರಿಯ ಶಾಸಕರು, ಸಚಿವ ಸಂಪುಟ ಪುನರ್ ರಚಿಸಿ ಮಂತ್ರಿಮಂಡಲದಲ್ಲಿ ತಮಗೆ ಅವಕಾಶ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.

ಗುರುವಾರ ರಾತ್ರಿ ನಗರದ ಖಾಸಗಿ ಕ್ಲಬ್ ಒಂದರಲ್ಲಿ ಶಿವಕುಮಾರ್ ಆಪ್ತ ಬಣಕ್ಕೆ ಸೇರಿದ ಎನ್.ಎ.ಹ್ಯಾರಿಸ್ ಹಾಗೂ ಮಾಗಡಿ ಬಾಲಕೃಷ್ಣ ಆಯೋಜಿಸಿದ್ದ ಸಭೆಯಲ್ಲಿ 25ಕ್ಕೂ ಹೆಚ್ಚು ಹಿರಿಯ ಸದಸ್ಯರು ಭಾಗವಹಿಸಿದ್ದರು.

ಶಿವಕುಮಾರ್ ಬೆಂಬಲಿತರಿಂದ ಒತ್ತಾಯ

ಶಿವಕುಮಾರ್ ಬೆಂಬಲಿತರೇ ಸಂಪುಟ ಪುನರ್ ರಚನೆಗೆ ಒತ್ತಾಯಿಸುತ್ತಿರುವ ಉದ್ದೇಶ ಏನೆಂಬ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಗೆ ಎಡೆ ಮಾಡಿದೆ.

ಬಜೆಟ್ ಅಧಿವೇಶನ ಮುಗಿದ ಬಳಿಕ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಸಂಪುಟ ಪುನರ್ ರಚನೆಗೆ ಒತ್ತಾಯಿಸಲು ಹಿರಿಯ ಶಾಸಕರು ಸಭೆಯಲ್ಲಿ ನಿರ್ಧರಿಸಿದ್ದಾರೆ.

ಸರ್ಕಾರ ರಚನೆ ವೇಳೆಯೇ ಎರಡೂವರೆ ವರ್ಷಗಳ ಬಳಿಕ ಸಂಪುಟ ಪುನಾರಚನೆ ಮಾಡುವುದಾಗಿ ವರಿಷ್ಠರು ಹೇಳಿದ್ದರು, ಆದರೆ, ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವರಿಷ್ಠರ ಭೇಟಿ

ಆದಷ್ಟು ಬೇಗ ಸಚಿವ ಸಂಪುಟ ಪುನಾರಚನೆ ಮಾಡಬೇಕು, ವರಿಷ್ಠರನ್ನು ಭೇಟಿ ಮಾಡುವುದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಶಿವಕುಮಾರ್ ಅವರನ್ನು ಈ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಲಿದೆಯಂತೆ.

ಹ್ಯಾರಿಸ್ ಏರ್ಪಡಿಸಿದ್ದ ಔತಣಕೂಟದಲ್ಲಿ ಬಾಲಕೃಷ್ಣ ಅಲ್ಲದೆ, ಬಸವರಾಜ ನೀಲಣ್ಣನವರ್, ಎ.ಆರ್.ಕೃಷ್ಣಮೂರ್ತಿ, ಶಿವಲಿಂಗೇಗೌಡ, ಯು.ಬಿ.ಬಣಕಾರ್, ಹಂಪನಗೌಡ ಬಾದರ್ಲಿ, ಟಿ.ಬಿ.ಜಯಚಂದ್ರ, ಅಶೋಕ್ ಪಟ್ಟಣ್, ಬೇಳೂರು ಗೋಪಾಲಕೃಷ್ಣ, ಎಸ್.ಷಡಕ್ಷರಿ, ಮಹಂತೇಶ್ ಕೌಜಲಗಿ, ಪುಟ್ಟರಂಗಶೆಟ್ಟಿ, ಯಶವಂತರಾಯಗೌಡ ವಿಠಲಗೌಡ ಪಾಟೀಲ್, ಲಕ್ಷ್ಮಣ ಸವದಿ, ವೈ.ನಾರಾಯಣಸ್ವಾಮಿ, ಎಂ.ವೈ.ಪಾಟೀಲ್ ಸೇರಿದಂತೆ 25ಕ್ಕೂ ಹೆಚ್ಚು ಹಿರಿಯ ಸದಸ್ಯರು ಭಾಗವಹಿಸಿದ್ದರು.

ಇವರೆಲ್ಲರೂ ನಾಲ್ಕರಿಂದ ಏಳು ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ, ಇದರಲ್ಲಿ ಕೆಲವರು ಪ್ರಮುಖ ನಿಗಮ ಮತ್ತು ಮಂಡಳಿಗಳ ಅಧ್ಯಕ್ಷ ಸ್ಥಾನದಲ್ಲಿದ್ದಾರೆ.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
cabinetcm siddaramaiahdcm d k shivakumarMLAs
0 FacebookTwitterPinterestEmail
KM Shivaraju

previous post
ಕರ್ನಾಟಕದಲ್ಲಿ ಗೃಹ ಬಳಕೆ ಎಲ್‌ಪಿಜಿಗೆ ಆತಂಕ ಬೇಡ

You may also like

ಕರ್ನಾಟಕದಲ್ಲಿ ಗೃಹ ಬಳಕೆ ಎಲ್‌ಪಿಜಿಗೆ ಆತಂಕ ಬೇಡ

March 11, 2026

ಮುಖ್ಯಮಂತ್ರಿ ಪಟ್ಟದ ಸನಿಹಕ್ಕೆ ಡಿ.ಕೆ.ಶಿವಕುಮಾರ್

March 10, 2026

ಕುಡಿಯುವ ನೀರು ಪೂರೈಕೆಗೆ ನಿರಂತರ ವಿದ್ಯುತ್

March 9, 2026

ಅಧಿಕಾರ ತ್ಯಾಗಕ್ಕೆ ಸಿದ್ದರಾಮಯ್ಯ ಮಾನಸಿಕ ಸಿದ್ಧತೆ

March 7, 2026

1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

March 6, 2026

ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

March 4, 2026

ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

March 2, 2026

ಜಾತಿ ವ್ಯವಸ್ಥೆಗೆ ಸಿದ್ದರಾಮಯ್ಯ ತೀವ್ರ ಕಳವಳ

February 28, 2026

ಶಿವಕುಮಾರ್‌ಗೆ ಪಟ್ಟ ಕಟ್ಟಲು ಹೈಕಮಾಂಡ್ ನಿರ್ಧಾರ

February 27, 2026

ಅಮೆರಿಕದ ಫಿಲಡೆಲ್ಫಿಯಾದಲ್ಲಿ ’ಅಕ್ಕ’ ಬೆಳ್ಳಿ ಹಬ್ಬ

February 27, 2026

Social Networks

Facebook Twitter Instagram Linkedin Youtube Email Rss

KMS Analysis

  • ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

    March 2, 2026
  • ಬಿಹಾರ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ದೆಹಲಿಗೆ

    October 25, 2025
  • ಜಾತಿಗಣತಿ ವೇಳೆ ಒಕ್ಕಲಿಗ ಎಂದೇ ಬರೆಸಲು ಶ್ರೀಗಳ ಕರೆ

    October 6, 2025
  • ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

    June 17, 2025
  • ಕರ್ನಾಟಕದಲ್ಲಿ ಹೊಸದಾಗಿ ಜಾತಿಗಣತಿ

    June 12, 2025

Categories

  • Special Story (409)
  • ಅಂಕಣ (109)
  • ಉದ್ಯೋಗ (315)
  • ದಿನ ಭವಿಷ್ಯ (110)
  • ರಾಜಕೀಯ (1,907)
  • ರಾಜ್ಯ (2,218)
  • ರಾಷ್ಟ್ರ (2,188)
  • ವಿಶ್ಲೇಷಣೆ (189)
  • ಶಿಕ್ಷಣ (381)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಸಂಪುಟ ಪುನರ್ ರಚನೆಗೆ ಹಿರಿಯ ಶಾಸಕರ ಆಗ್ರಹ

    March 13, 2026
  • ಕರ್ನಾಟಕದಲ್ಲಿ ಗೃಹ ಬಳಕೆ ಎಲ್‌ಪಿಜಿಗೆ ಆತಂಕ ಬೇಡ

    March 11, 2026
  • ಮುಖ್ಯಮಂತ್ರಿ ಪಟ್ಟದ ಸನಿಹಕ್ಕೆ ಡಿ.ಕೆ.ಶಿವಕುಮಾರ್

    March 10, 2026

KMS Special

  • ಸಂಪುಟ ಪುನರ್ ರಚನೆಗೆ ಹಿರಿಯ ಶಾಸಕರ ಆಗ್ರಹ

    March 13, 2026
  • ಕರ್ನಾಟಕದಲ್ಲಿ ಗೃಹ ಬಳಕೆ ಎಲ್‌ಪಿಜಿಗೆ ಆತಂಕ ಬೇಡ

    March 11, 2026
  • ಮುಖ್ಯಮಂತ್ರಿ ಪಟ್ಟದ ಸನಿಹಕ್ಕೆ ಡಿ.ಕೆ.ಶಿವಕುಮಾರ್

    March 10, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಕರ್ನಾಟಕದಲ್ಲಿ ಗೃಹ ಬಳಕೆ ಎಲ್‌ಪಿಜಿಗೆ ಆತಂಕ ಬೇಡ

March 11, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ