Wednesday, May 21, 2025
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Wednesday, May 21, 2025
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ಅಂಕಣ

ಮಿತ್ರಕೂಟಕ್ಕೆ ಕುಮಾರಣ್ಣನೇ ದಂಡನಾಯಕ

by admin October 14, 2024
written by admin October 14, 2024 0 comments 5 minutes read
Share 0FacebookTwitterPinterestEmail
136

ಮೊನ್ನೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರಿಗೆ ಮಹತ್ವದ ವರದಿ ರವಾನೆಯಾಗಿದೆ, ಈ ವರದಿಯನ್ನು ರವಾನಿಸಿದವರು ಕರ್ನಾಟಕದ ಬಿಜೆಪಿ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್.

ವಸ್ತುಸ್ಥಿತಿ ಎಂದರೆ ಇಂತಹದೊಂದು ವರದಿಯನ್ನು ರವಾನಿಸಲು ಸ್ವತಃ ನಡ್ಡಾ ಅವರೇ ರಾಧಾ ಮೋಹನದಾಸ್ ಅಗರ್ವಾಲ್ ಅವರಿಗೆ ಸೂಚಿಸಿದ್ದರಂತೆ.

ರಾಜ್ಯ ಬಿಜೆಪಿಯ ಹಲವು ನಾಯಕರು ದಿಲ್ಲಿಗೆ ಬಂದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬೈ-ಎಲೆಕ್ಷನ್ ಟಿಕೇಟನ್ನು ನಮ್ಮ ಪಕ್ಷದವರಿಗೇ ಕೊಡಬೇಕು, ಯಾಕೆಂದರೆ ಅಲ್ಲಿ ಮಿತ್ರಕೂಟದ ಅಭ್ಯರ್ಥಿಯಾಗಿ ಗೆಲ್ಲುವ ಛಾನ್ಸಿರುವುದು ನಮಗೆ ಮಾತ್ರ ಎಂದಿದ್ದಾರೆ.

ಅವರ ಪ್ರಕಾರ, ಈ ಕ್ಷೇತ್ರದ ಟಿಕೇಟ್ ಬಿಜೆಪಿಗೆ ದಕ್ಕದಿದ್ದರೆ ಹಳೆ ಮೈಸೂರಿನ ಜಿಲ್ಲೆಗಳಲ್ಲಿ ಜೆಡಿಎಸ್ ನದ್ದೇ ಏಕಸ್ವಾಮ್ಯವಾಗಿ ಬಿಜೆಪಿಯ ಶಕ್ತಿ ಕುಸಿದು ಹೋಗುತ್ತದೆ, ಇದನ್ನು ತಡೆಯುವ ಸಲುವಾಗಿಯಾದರೂ ಚನ್ನಪಟ್ಟಣದ ಟಿಕೆಟ್ಟನ್ನು ಬಿಜೆಪಿ ಅಭ್ಯರ್ಥಿಗೆ ಕೊಡಬೇಕು.

ಅಂದ ಹಾಗೆ ನಮ್ಮ ಪಕ್ಷಕ್ಕೆ ಟಿಕೆಟ್ ದಕ್ಕಿದರೆ ಜೆಡಿಎಸ್ ಕಳೆದುಕೊಳ್ಳುವುದೇನೂ ಇಲ್ಲ, ಇನ್‌ಫ್ಯಾಕ್ಟ್ ಚನ್ನಪಟ್ಟಣದಲ್ಲಿ ಈ ಸಲ ಮಿತ್ರಕೂಟದ ಟಿಕೆಟ್ ಜೆಡಿಎಸ್ಸಿಗೆ ದಕ್ಕಿದರೆ ಅದರ ಕ್ಯಾಂಡಿಡೇಟ್ ಗೆಲ್ಲುವುದಿಲ್ಲ, ಹಾಗೇನಾದರೂ ಆದರೆ ಅದು ಕುಮಾರಸ್ವಾಮಿ ಅವರಿಗೆ ಡ್ರಾಬ್ಯಾಕು.

ಈ ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿಗೆ ಟಿಕೆಟ್ ಸಿಗದಿದ್ದರೆ ಬಿಜೆಪಿ-ಜೆಡಿಎಸ್ ಮಿತ್ರಕೂಟದಲ್ಲಿ ಒಡಕುಂಟಾಗುವುದು ಗ್ಯಾರಂಟಿ, ಹೀಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬುದು ರಾಜ್ಯ ಬಿಜೆಪಿಯ ಹಲ ನಾಯಕರ ಆತಂಕ, ಹೀಗಾಗಿ ಈ ಕುರಿತ ವಸ್ತುಸ್ಥಿತಿಯ ವಿವರವನ್ನು ಹೈಕಮಾಂಡ್ ನಿಮ್ಮಿಂದ ಬಯಸುತ್ತದೆ, ಅಂತ, ನಡ್ಡಾ ಅವರು ರಾಧಾ ಮೋಹನದಾಸ್ ಅಗರ್ವಾಲ್ ಅವರಿಗೆ ಸೂಚಿಸಿದ್ದಾರೆ.

ಯಾವಾಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಈ ಸೂಚನೆ ನೀಡಿದರೋ, ಇದಾದ ನಂತರ ರಾಧಾ ಮೋಹನದಾಸ್ ಅಗರ್ವಾಲ್ ವಿವರವಾದ ವರದಿಯೊಂದನ್ನು ಮೊನ್ನೆ ದಿಲ್ಲಿಗೆ ರವಾನಿಸಿದ್ದಾರೆ.

ಮೂಲಗಳ ಪ್ರಕಾರ ಈ ವರದಿಯಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಿರುವ ಅಗರ್ವಾಲ್, ಚನ್ನಪಟ್ಟಣದ ಟಿಕೆಟ್ ಜೆಡಿಎಸ್ಸಿಗೆ ಹೋದರೆ ಮಿತ್ರಕೂಟಕ್ಕೇನೂ ಹಾನಿಯಿಲ್ಲ, ಆದರೆ ಅದು ಜೆಡಿಎಸ್ ಪಕ್ಷದ ಕೈ ತಪ್ಪಿದರೆ ಮಿತ್ರಕೂಟಕ್ಕೆ ಘಾಸಿಯಾಗುವುದು ನಿಶ್ಚಿತ ಎಂದಿದ್ದಾರೆ.

ಕಾರಣ, ಕರ್ನಾಟಕದ ನೆಲೆಯಲ್ಲಿ ದಿನದಿಂದ ದಿನಕ್ಕೆ ಜೆಡಿಎಸ್ ಜತೆಗಿನ ಮೈತ್ರಿ ಬಿಜೆಪಿಗೇ ಹೆಚ್ಚು ಅನಿವಾರ್ಯವಾಗುತ್ತಿದೆ, ಯಾಕೆಂದರೆ ಇತ್ತೀಚಿನ ಬೆಳವಣಿಗೆಗಳು ಕರ್ನಾಟಕದಲ್ಲಿ ಬಿಜೆಪಿಯ ಶಕ್ತಿಯನ್ನು ಕುಗ್ಗಿಸುತ್ತಿದೆಯೇ ವಿನಃ ಜೆಡಿಎಸ್‌ನ ಶಕ್ತಿಯನ್ನಲ್ಲ.

ಇವತ್ತಿನ ಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ನೇತೃತ್ವದ ಕಾಂಗ್ರೆಸ್ ಅನ್ನು ಬಿಜೆಪಿಯ ಫ್ರಂಟ್‌ಲೈನ್ ಲೀಡರುಗಳಿಗಿಂತ ಪರಿಣಾಮಕಾರಿಯಾಗಿ ಎದುರಿಸುತ್ತಿರುವವರು ಹೆಚ್.ಡಿ.ಕುಮಾರಸ್ವಾಮಿ ಮಾತ್ರ.

ಒಂದು ಕಡೆಯಿಂದ ಸಿದ್ದರಾಮಯ್ಯ ಮತ್ತು ಡಿಕೆಶಿ ಪ್ರಯೋಗಿಸುತ್ತಿರುವ ಅಸ್ತ್ರಗಳಿಂದ ಬಿಜೆಪಿಯ ಬಹುತೇಕ ನಾಯಕರು ಅಸಹಾಯಕರಾಗಿದ್ದಾರೆ, ಆದರೆ ಕಾಂಗ್ರೆಸ್ ಅದೆಷ್ಟೇ ದಾಳಿ ಮಾಡಿದರೂ ಕುಮಾರಸ್ವಾಮಿ ಮಾತ್ರ ಜಗ್ಗುತ್ತಿಲ್ಲ, ಅರ್ಥಾತ್ ಮಿತ್ರಕೂಟದ ಮುಂಚೂಣಿಯಲ್ಲಿ ನಿಂತು ಕಾಂಗ್ರೆಸ್ ವಿರುದ್ಧ ಹೋರಾಡುವ ವಿಷಯದಲ್ಲಿ ಕುಮಾರಸ್ವಾಮಿ ಅವರೇ ಪವರ್‌ಫುಲ್ ಲೀಡರು, ಹೀಗಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ವಿರುದ್ಧ ಮಿತ್ರಕೂಟವನ್ನು ಮುನ್ನಡೆಸಲು ಕುಮಾರಸ್ವಾಮಿ ಅವರ ಶಕ್ತಿ ಅನಿವಾರ್ಯ, ಹೀಗಿರುವಾಗ ಚನ್ನಪಟ್ಟಣ ಕ್ಷೇತ್ರದ ಬೈ-ಎಲೆಕ್ಷನ್ ಟಿಕೆಟ್ಟು ಬಿಜೆಪಿಯ ಕೈ ತಪ್ಪಿದರೆ ಮಿತ್ರಕೂಟದಲ್ಲಿ ಬಿರುಕುಂಟಾಗುತ್ತದೆ ಎಂಬುದು ಸುಳ್ಳು.

ಇದೇ ರೀತಿ ಚನ್ನಪಟ್ಟಣ ಕ್ಷೇತ್ರದಲ್ಲಿ ಕಳೆದ ಬಾರಿ ಗೆದ್ದಿರುವುದು ಜೆಡಿಎಸ್ಸು, ಹೀಗಾಗಿ ಅದು ಜೆಡಿಎಸ್‌ನ ಕ್ಷೇತ್ರ, ನಮ್ಮ ಪವರ್ ಬೆಳೆಸಿಕೊಳ್ಳಲು ಆ ಕ್ಷೇತ್ರವನ್ನು ನಮಗೆ ಬಿಟ್ಟುಕೊಡಿ ಎಂದು ಹೇಳುವುದು ಮೈತ್ರಿಧರ್ಮಕ್ಕೆ ವಿರುದ್ಧವಾದುದು, ವಸ್ತುಸ್ಥಿತಿ ಎಂದರೆ ಬಿಜೆಪಿ ಜತೆಗಿನ ಹೊಂದಾಣಿಕೆಯ ನಂತರ ಜೆಡಿಎಸ್ ಪಕ್ಷ ಮೈತ್ರಿ ಧರ್ಮವನ್ನು ಉಲ್ಲಂಘಿಸಿಲ್ಲ.

ಲೋಕಸಭಾ ಚುನಾವಣೆಯಲ್ಲಿ ಅದು ಮೈತ್ರಿಧರ್ಮವನ್ನು ಉಲ್ಲಂಘಿಸಿದ್ದರೆ ಮಿತ್ರಕೂಟಕ್ಕೆ ಹತ್ತೊಂಬತ್ತು ಸೀಟು ದಕ್ಕಲು ಸಾಧ್ಯವೇ ಇರಲಿಲ್ಲ, ನಮ್ಮ ಶಕ್ತಿ ಹೆಚ್ಚಿರುವ ಉತ್ತರ ಕರ್ನಾಟಕದ ಕ್ಷೇತ್ರಗಳಲ್ಲಿ ನಾವು ಕಳೆದುಕೊಂಡಿದ್ದೇ ಹೆಚ್ಚು, ಆದರೆ ಜೆಡಿಎಸ್ ಪ್ರಾಬಲ್ಯ ಹೆಚ್ಚಿರುವ ಹಳೆ ಮೈಸೂರಿನ ಕ್ಷೇತ್ರಗಳಲ್ಲಿ ನಾವು ಪಡೆದುಕೊಂಡಿದ್ದು ಹೆಚ್ಚು, ಹೀಗಾಗಿ ಚನ್ನಪಟ್ಟಣದ ಟಿಕೆಟನ್ನು ನಿಮ್ಮಿಚ್ಚೆ ಬಂದವರಿಗೆ ಕೊಡಿ ಅಂತ ಜೆಡಿಎಸ್‌ಗೆ ಹೇಳುವುದೇ ಮೈತ್ರಿ ಧರ್ಮ ಅಂತ ರಾಧಾ ಮೋಹದಾಸ್ ಅಗರ್ವಾಲ್ ಅವರು ನಡ್ಡಾ ಅವರಿಗೆ ವಿವರಿಸಿದ್ದಾರೆ.

ಇ.ಡಿ. ಮಾಡುವ ಪವಾಡ ಏನು?

ಈ ಮಧ್ಯೆ ಮೂಡಾ ಪ್ರಕರಣಕ್ಕೆ ಸಂಬಂಧಿಸಿಧಂತೆ ಲೋಕಾಯುಕ್ತ ತನಿಖೆ ಆರಂಭವಾಗಿದ್ದರೂ ಬಿಜೆಪಿ-ಜೆಡಿಎಸ್ ಮಿತ್ರಕೂಟದ ನಾಯಕರು ಇ.ಡಿ. ಬಂದು ಪವಾಡ ಮಾಡಲಿದೆ ಎಂದು ನಿರೀಕ್ಷಿಸುತ್ತಿದ್ದಾರೆ.

ಸದ್ಯದ ಸ್ಥಿತಿಯಲ್ಲಿ ಲೋಕಾಯುಕ್ತ ತನಿಖೆಯ ಪ್ರೊಸೀಜರ್ರು ಸಿಎಂ ಸಿದ್ದರಾಮಯ್ಯ ಅವರನ್ನು ಮುಜುಗರಕ್ಕೆ ಸಿಲುಕಿಸುವುದು ಅನುಮಾನ, ಹೀಗಾಗಿ ಈ ಪ್ರಕರಣದಲ್ಲಿ ಇ.ಡಿ. ಮಾತ್ರ ಈಟಿ ಪ್ರಯೋಗಿಸಬಹುದು ಎಂಬುದು ಮಿತ್ರಕೂಟದ ಹಲ ನಾಯಕರ ಲೆಕ್ಕಾಚಾರ.
ಆದರೆ ಇ.ಡಿ. ಬಂದು ಮಾಡುವುದೇನು ಎಂಬ ವಿಷಯದಲ್ಲಿ ಯಾರಿಗೂ ಸ್ಪಷ್ಟತೆ ಇಲ್ಲ, ಒಂದು ವೇಳೆ ಮೂಡಾದಿಂದ ಪಡೆದ ಹದಿನಾಲ್ಕು ನಿವೇಶನಗಳನ್ನು ಸಿದ್ದರಾಮಯ್ಯ ಅವರ ಪತ್ನಿ ಹಿಂತಿರುಗಿಸದೆ ಇದ್ದರೆ, ಪ್ರಕರಣಕ್ಕೆ ಎಂಟ್ರಿ ಪಡೆದಿರುವ ಇ.ಡಿ. ನಿಶ್ಚಿತವಾಗಿ ಆ ನಿವೇಶನಗಳನ್ನು ಸೀಝ್ ಮಾಡಿಕೊಳ್ಳುತ್ತಿತ್ತು.

ಹೀಗೆ ಇ.ಡಿ. ಇಂತಹ ಕೆಲಸ ಮಾಡಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಜುಗರಕ್ಕೆ ಸಿಲುಕುತ್ತಿದ್ದರು, ಇಲ್ಲ, ತಮ್ಮ ಪತ್ನಿಯ ಹೆಸರಿನಲ್ಲಿದ್ದ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ಕಾರಣಕ್ಕಾಗಿ ಮೂಡಾ ಈ ನಿವೇಶನಗಳನ್ನು ನೀಡಿದೆ, ಅದೂ ಬಿಜೆಪಿ ಸರ್ಕಾರ ಇದ್ದ ಅವಧಿಯಲ್ಲಿ ನೀಡಿದೆ ಅಂತ ಸಿದ್ದರಾಮಯ್ಯ ಹೇಳಿಕೊಂಡರೂ ಇ.ಡಿ.ಯ ಕ್ರಮ ಅವರನ್ನು ಮುಜುಗರಕ್ಕೆ ಸಿಲುಕಿಸುತ್ತಿತ್ತು.

ಹೀಗಾಗಿಯೇ ಈ ಅಂಶವನ್ನು ಬೊಟ್ಟು ಮಾಡಿ ತೋರಿಸಿದ್ದ ಖ್ಯಾತ ನ್ಯಾಯವಾದಿ ಕಪಿಲ್ ಸಿಬಲ್ ಅವರು, ನ್ಯಾಯ ಸಿಎಂ ಪತ್ನಿಯ ಪರವಾಗಿದೆ ಎಂಬುದು ಬೇರೆ ಮಾತು, ಅದೇ ರೀತಿ ಮುಂದಿನ ದಿನಗಳಲ್ಲಿ ನ್ಯಾಯ ಕೋರಿ ಮೂಡಾದಿಂದ ಪರಿಹಾರ ಕೋರಿ ಸಿದ್ದರಾಮಯ್ಯ ಅವರ ಪತ್ನಿ ನ್ಯಾಯಾಲಯದ ಮೊರೆ ಹೋಗಬಹುದು.

ಆದರೆ ಈಗ ತಕ್ಷಣದ ದೃಷ್ಟಿಯಿಂದ, ಇ.ಡಿ. ಹೆಚ್ಚಿನದನ್ನೇನೂ ಮಾಡಬಾರದು ಎಂಬ ಕಾರಣಕ್ಕಾಗಿ ನಿವೇಶನಗಳನ್ನು ಮೂಡಾಗೆ ಹಿಂತಿರುಗಿಸುವುದು ಒಳ್ಳೆಯದು, ಆ ಮೂಲಕ ಸಿದ್ದರಾಮಯ್ಯ ಅವರನ್ನು ಮುಜುಗರದಿಂದ ಪಾರು ಮಾಡಬಹುದು ಎಂಬ ಸಂದೇಶ ರವಾನಿಸಿದ್ದರಂತೆ.

ಹೀಗಾಗಿ ಸಿದ್ದರಾಮಯ್ಯ ಅವರ ಪತ್ನಿ ನಿವೇಶನಗಳನ್ನು ಮೂಡಾಗೆ ಹಿಂತಿರುಗಿಸಿದರು ಎಂಬುದು ಕೈ ಪಾಳಯದ ಮಾತು, ಅಷ್ಟೇ ಅಲ್ಲ, ಈಗ ಮೂಡಾ ಪ್ರಕರಣದಲ್ಲಿ ಇ.ಡಿ. ಬಂದು ಮಾಡುವುದೇನು ಎಂಬುದು ಅದರ ಪ್ರಶ್ನೆ.

ಅದರ ಪ್ರಕಾರ, ಮೂಡಾ ಪ್ರಕರಣದ ಕಾವು ಕಡಿಮೆಯಾಗಿದೆಯಷ್ಟೇ ಅಲ್ಲ, ಸಿದ್ದರಾಮಯ್ಯ ಅವರ ಖುರ್ಚಿಯೂ ಗಟ್ಟಿಯಾಗಿದೆ.

ಕೈ ಪಾಳಯಕ್ಕೆ ಬಿಜೆಪಿ ಸಂದೇಶ

ಇನ್ನು ದಿಲ್ಲಿಯ ಬಿಜೆಪಿ ನಾಯಕರೊಬ್ಬರು ಸಿಎಂ ಸಿದ್ದರಾಮಯ್ಯ ಅವರಿಗೆ ಫೋನು ಮಾಡಿದ್ದರಂತೆ.

ತಮ್ಮ ವಿರುದ್ಧ ಮಿತ್ರಕೂಟ ನಡೆಸಿದ ದಾಳಿಯಿಂದ ಕೆಂಡಾಮಂಡಲಗೊಂಡ ಕೈ ಪಡೆ ಬಿಜೆಪಿ ಕಾಲದ ಹಗರಣಗಳನ್ನು ಕೆದಕುತ್ತಿದೆಯಲ್ಲ.
ಇದರ ಭಾಗವಾಗಿ ಕೊರೋನಾ ಕಾಲಘಟ್ಟದ ವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಎಸ್.ಐ.ಟಿ. ರಚಿಸಲಾಗಿದೆ, ಇದೇ ರೀತಿ ಇನ್ನೂ ಹಲವು ಪ್ರಕರಣಗಳನ್ನು ಕೆದಕುತ್ತಿರುವ ಅದು ಒಬ್ಬೊಬ್ಬರಾಗಿ ಬಿಜೆಪಿಯ ಹಲ ನಾಯಕರ ಸುತ್ತ ಚಕ್ರವ್ಯೂಹ ರಚಿಸುತ್ತಿದೆ, ಹೀಗಾಗಿ ಸರ್ಕಾರವನ್ನು ಟೀಕಿಸುವ ವಿಷಯದಲ್ಲಿ ಬಿಜೆಪಿ ನಾಯಕರಿಗೆ ಒಂದು ತಿಂಗಳ ಹಿಂದಿದ್ದ ಖದರ್ ಈಗ ಉಳಿದಿಲ್ಲ.

ಸಾಲದು ಎಂಬಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳನ್ನು ಕೆದಕಲು ಎಲ್ಲ ಬಗೆಯ ಮಾರ್ಗಗಳನ್ನು ಓಪನ್ ಮಾಡಿಕೊಳ್ಳುತ್ತಿರುವ ಸಿದ್ದು-ಡಿಕೆಶಿ ಇನ್ನು ಸ್ವಲ್ಪ ದಿನಗಳಲ್ಲಿ ರಾಜ್ಯ ಬಿಜೆಪಿಯನ್ನು ಅಸಹಾಯಕಗೊಳಿಸಲು ಸಜ್ಜಾಗಿದ್ದಾರೆ.

ಈ ಹಿನ್ನೆಲೆಯಲ್ಲೇ ಮೊನ್ನೆ ಸಿಎಂ ಸಿದ್ದರಾಮಯ್ಯ ಅವರಿಗೆ ಫೋನು ಮಾಡಿದ ದಿಲ್ಲಿ ಬಿಜೆಪಿಯ ಟಾಪ್ ಲೀಡರ್ ಒಬ್ಬರು, ನೀವೇನೇ ಮಾಡಿ, ಆದರೆ ನಮ್ಮ ಸೀನಿಯರ್ ಲೀಡರ್ ವಿಷಯದಲ್ಲಿ ಟಫ್ ಆಗಬೇಡಿ, ಯಾಕೆಂದರೆ ಅವರಿಗಾದರೂ ನಿಮ್ಮ ವಿರುದ್ಧ ಹೋರಾಡುವ ಆಸಕ್ತಿ ಇಲ್ಲ, ಹೀಗಾಗಿ ಅವರಿಗೇ ಆಗಲಿ, ನಮಗೇ ಆಗಲಿ, ಮುಜುಗರ ಮಾಡಬೇಡಿ ಎಂದಿದ್ದಾರಂತೆ.

ಮಂಗಳೂರು ಚೌಟಾ-ಕಟೀಲ್ ಕದನ

ಅಂದ ಹಾಗೆ ಹಿಂದುತ್ವದ ಪ್ರಯೋಗ ಶಾಲೆ ಅನ್ನಿಸಿಕೊಂಡ ಮಂಗಳೂರಿನಲ್ಲಿ ಹಾಲಿ ಸಂಸದ ಬ್ರಿಜೇಶ್ ಚೌಟಾ ಮತ್ತು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನಡುವಣ ಶೀತಲ ಸಮರಕ್ಕೆ ಸಂಘ ಪರಿವಾರ ಸುಸ್ತಾಗಿದೆ.

ಹಿಂದೆಲ್ಲ ಸ್ಥಳೀಯ ನಾಯಕರನ್ನು ನಿಯಂತ್ರಿಸುತ್ತಿದ್ದ ಜಿಲ್ಲೆಯ ಆರೆಸ್ಸೆಸ್ ಘಟಕ ಈಗ ಎರಡು ಬಣಗಳಾಗಿ ನಿಂತಿದೆ.

ಈ ಪೈಕಿ ಒಂದು ಬಣ ಸಂಸದ ಬ್ರಿಜೇಶ್ ಚೌಟಾ ಜತೆಗಿದ್ದರೆ, ಮತ್ತೊಂದು ಬಣ ನಳೀನ್ ಕುಮಾರ್ ಕಟೀಲ್ ಬೆನ್ನಿಗಿದೆ.

ಮೂಲಗಳ ಪ್ರಕಾರ, ನಳೀನ್‌ಕುಮಾರ್ ಕಟೀಲ್ ಸಂಸದರಾಗಿದ್ದಾಗ ಜಿಲ್ಲೆಯ ಬಿಜೆಪಿ ಕಾರ್ಯಚಟುವಟಿಕೆಗಳಲ್ಲಿ ಚೌಟಾ ಅವರನ್ನು ನಿರ್ಲಕ್ಷಿಸಿದ್ದರು.

ಅವತ್ತಿನ ನೋವನ್ನು ಮನಸ್ಸಿನಲ್ಲಿಟ್ಟುಕೊಂಡಿರುವ ಬ್ರಿಜೇಶ್ ಚೌಟಾ ಈಗ ನಳೀನ್ ಕುಮಾರ್ ಕಟೀಲ್ ಅವರನ್ನು ಪಕ್ಷದ ಚಟುವಟಿಕೆಗಳಿಂದ ದೂರವಿಡುತ್ತಿದ್ದಾರೆ.

ಇಷ್ಟಾದರೂ ಸಂಘ ಪರಿವಾರದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಕಟಾಕ್ಷವಿರುವ ಕಾರಣಕ್ಕಾಗಿ ಸ್ಥಳೀಯ ಆರೆಸ್ಸೆಸ್‌ನ ಒಂದು ಬಣ ಕಟೀಲರ ಹಿಂದೆ ನಿಂತಿದೆ.

ಉಳಿದಂತೆ ವಿಜಯೇಂದ್ರ ಪ್ಲಸ್ ಕಲ್ಲಡ್ಕ ಪ್ರಭಾಕರ ಭಟ್ಟರ ಕಟಾಕ್ಷ ಇರುವ ಕಾರಣಕ್ಕಾಗಿ ಚೌಟಾ ಅವರ ಬೆನ್ನಿಗೆ ಪಕ್ಷ ಮತ್ತು ಸಂಘ ಪರಿವಾರದ ಒಂದು ಬಣ ನಿಂತಿದೆ.

ಹೀಗೆ ಚೌಟಾ ಮತ್ತು ಕಟೀಲರ ನಡುವೆ ಪ್ರಾರಂಭವಾಗಿರುವ ಶೀತಲ ಸಮರದಲ್ಲಿ ಕಟೀಲ್ ಒಂದಷ್ಟು ಪ್ರತಿರೋಧ ತೋರುತ್ತಿದ್ದಾರಾದರೂ ಅದು ಎಷ್ಟು ದಿನ ನಡೆಯುತ್ತದೋ ಗೊತ್ತಿಲ್ಲ.

ಕಾರಣ, ಸಂತೋಷ್ ಇವತ್ತು ರಾಷ್ಟ್ರಮಟ್ಟದಲ್ಲಿ ಪ್ರಬಲರಾಗಿರುವುದರಿಂದ ಕಟೀಲ್ ಅವರಿಗೆ ಸ್ವಲ್ಪ ಶಕ್ತಿ ಇದೆ.

ಆದರೆ ಸಂತೋಷ್ ಅವರ ಪವರ್ ಕಡಿಮೆಯಾದರೆ ನೋ ಡೌಟ್, ಹಾಲಿ ಸಂಸದ ಬ್ರಿಜೇಶ್ ಚೌಟಾ ಪವರ್ ಹೆಚ್ಚಾಗುತ್ತದೆ, ಹಾಗೇನಾದರೂ ಆದರೆ ಕಟೀಲರು ಅಜ್ಞಾತವಾಸಕ್ಕೆ ತೆರಳಬಹುದು ಎಂಬುದು ಲೋಕಲ್ ಬಿಜೆಪಿಗರ ಮಾತು, ಮುಂದೇನಾಗುತ್ತದೋ?

ಲಾಸ್ಟ್ ಸಿಪ್

ಇಂಟರೆಸ್ಟಿಂಗ್ ಸಂಗತಿ ಎಂದರೆ ಮಂಗಳೂರಿನ ರಾಜಕಾರಣ ಬಿಜೆಪಿಯನ್ನು ಹೋಳು ಮಾಡಿದ್ದು ಒಂದು ಕಡೆಯಾದರೆ, ಮತ್ತೊಂದು ಕಡೆ ಆಡಳಿತಾರೂಢ ಕಾಂಗ್ರೆಸ್‌ನ ಕತೆಯೂ ಹಾಗೇ ಆಗಿದೆ.

ಅರ್ಥಾತ್, ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ನೇತೃತ್ವದ ಬಣ ಒಂದು ಕಡೆ ಇದ್ದರೆ, ಮಿಥುನ್ ರೈ, ರಮಾನಾಥ ರೈ, ಮಂಜುನಾಥ ಭಂಡಾರಿ ಸೇರಿದಂತೆ ಹಲ ಪ್ರಮುಖರ ಬಣ ಮತ್ತೊಂದು ಕಡೆ ನಿಂತಿದೆ.

ಈ ಎರಡು ಬಣಗಳ ನಡುವಣ ಹಾಲಿ ಕಾದಾಟಕ್ಕೆ ಮುಖ್ಯ ಕಾರಣ ಸರ್ಕಾರಿ ನೌಕರರ ವರ್ಗಾವಣೆ ಮತ್ತು ಆಡಳಿತಾತ್ಮಕ ವಿಷಯ.

ಈ ವಿಷಯದಲ್ಲಿ ಯು.ಟಿ.ಖಾದರ್ ಮೇಲುಗೈ ಸಾಧಿಸಿರುವುದು ಸಹಜವಾಗಿಯೇ ಮತ್ತೊಂದು ಬಣದವರನ್ನು ಕೆರಳಿಸಿದೆ.

ಹೀಗಾಗಿ ಜಿಲ್ಲೆಯ ರಾಜಕಾರಣದಲ್ಲಿ ಶುರುವಾಗಿರುವ ಉಭಯ ಬಣಗಳ ಕಚ್ಚಾಟ ಸದ್ಯದಲ್ಲೇ ಕೈ ಪಾಳಯಕ್ಕೆ ತಲೆನೋವಾಗುವುದು ನಿಶ್ಚಿತವಾಗಿದೆ.

ಆರ್.ಟಿ.ವಿಠ್ಠಲಮೂರ್ತಿ

Share this:

  • WhatsApp
  • Post
  • Tweet
  • Print
  • Email
bjpby vijayendrachannapattana by-electioncongreshd kumara swamyjdsjp nadda
Share 0 FacebookTwitterPinterestEmail
admin

previous post
ಚನ್ನಪಟ್ಟಣ ಉಪಚುನಾವಣೆ: ಎನ್‌ಡಿಎ ಗೆಲ್ಲಬೇಕು
next post
ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು

You may also like

ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ

May 19, 2025

ಇತಿಹಾಸ ಮರೆಯದ ಕೌತುಕದ ಕ್ಷಣಗಳು..

April 21, 2025

ಕೇಂದ್ರ ಮಂತ್ರಿ ಕುಮಾರಣ್ಣನ ಲೇಟೆಸ್ಟು ಸಂಕಟ

February 17, 2025

ಅಮಿತ್ ಷಾ ಆಟ ಬಲ್ಲವರಾರು?

February 3, 2025

ಬಿಜೆಪಿ ಭಿನ್ನರಿಗೆ ಚುನಾವಣೆಯ ಕನಸು?

January 27, 2025

ನಿಖಿಲ್ ಇಲ್ಲಿಗೆ ಕುಮಾರಣ್ಣ ದಿಲ್ಲಿಗೆ

January 20, 2025

ಕೊತ ಕೊತ ಕುದಿಯುತ್ತಿದ್ದಾರೆ ಜಾರ್ಕಿಹೊಳಿ

January 6, 2025

ವಿಜಯೇಂದ್ರ ಸೇಫ್ಟಿಗೆ ನಡ್ಡಾ ಬರುತ್ತಿದ್ದಾರೆ

December 23, 2024

ಕಾಂಗ್ರೆಸ್ ಹಡಗಿಗೆ ಕೃಷ್ಣ ಹತ್ತಿದ ಕತೆ

December 10, 2024

ಬಿಜೆಪಿ ಬೆಕ್ಕಿಗೆ ಗಂಟೆ ಕಟ್ಟುವುದು ಹೇಗೆ?

December 9, 2024

Leave a Comment Cancel Reply

Save my name, email, and website in this browser for the next time I comment.

Social Networks

Facebook Twitter Instagram Linkedin Youtube Email Rss

KMS Analysis

  • ಶತ್ರು ದೇಶದ ಕ್ಷೇಮಕ್ಕಾಗಿ ಕಾಂಗ್ರೆಸ್ ಮಿಡಿಯುತ್ತಿದೆ : ಹೆಚ್ ಡಿಕೆ ಟೀಕೆ

    May 16, 2025
  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025
  • ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಕಸರತ್ತು

    May 8, 2025
  • ಭಯೋತ್ಪಾದನೆ ನಿಗ್ರಹ: ಪ್ರಧಾನಿ ಮೋದಿಗೆ ಸಂಪೂರ್ಣ ಬೆಂಬಲ ಘೋಷಿಸಿದ ದೇವೇಗೌಡರು

    May 6, 2025
  • ಜಾತಿಗಣತಿ ವರದಿ ದತ್ತಾಂಶ ಮರುಪರಿಶೀಲನೆಗೆ ನಿರ್ಧಾರ

    April 18, 2025

Categories

  • Special Story (180)
  • ಅಂಕಣ (102)
  • ಉದ್ಯೋಗ (237)
  • ದಿನ ಭವಿಷ್ಯ (110)
  • ರಾಜಕೀಯ (1,583)
  • ರಾಜ್ಯ (1,872)
  • ರಾಷ್ಟ್ರ (1,844)
  • ವಿಶ್ಲೇಷಣೆ (183)
  • ಶಿಕ್ಷಣ (318)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಮುಖ್ಯಮಂತ್ರಿ ಗಾದಿಗೆ ಶಿವಕುಮಾರ್ ತಂತ್ರಗಾರಿಕೆ ಆರಂಭ

    May 19, 2025
  • ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ

    May 19, 2025
  • 93ನೇ ವರ್ಷಕ್ಕೆ ಕಾಲಿಟ್ಟಿ ದೇವೇಗೌಡರು, ಶುಭ ಕೋರಿದ ಪ್ರಧಾನಿ ಮೋದಿ, ಅಮಿತ್ ಶಾ

    May 18, 2025

KMS Special

  • ಮುಖ್ಯಮಂತ್ರಿ ಗಾದಿಗೆ ಶಿವಕುಮಾರ್ ತಂತ್ರಗಾರಿಕೆ ಆರಂಭ

    May 19, 2025
  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025
  • ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಕಸರತ್ತು

    May 8, 2025
  • Facebook
  • Twitter
  • Linkedin
  • Youtube
  • Email
  • Telegram
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ

May 19, 2025
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ