ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮತ್ತೊಂದು ಭೂ ಅಕ್ರಮ ಆರೋಪ ಎದುರಾಗಿದೆ.
ಗಣೇಶ್ ದೀಕ್ಷಿತ್ ಎಂಬುವವರಿಗೆ ಸೇರಿದ 4.11 ಎಕರೆ ಜಮೀನಿನಲ್ಲಿ ೨೦ ಗುಂಟೆ ಜಾಗವನ್ನು 1.85 ಕೋಟಿ ರೂ.ಗೆ ಪಾರ್ವತಿ ಅವರು ಖರೀದಿಸಿದ್ದರು.
ಮುಡಾ ಜಾಗ ನೋಂದಣಿ
ದೀಕ್ಷಿತ್ ಅವರು 8,998 ಚದರಡಿ ಜಾಗವನ್ನು ರಸ್ತೆ ಮತ್ತು ಪೈಪ್‌ಲೈನ್‌ಗೆ ಬಿಟ್ಟುಕೊಟ್ಟಿದ್ದರು, ಪಾರ್ವತಿ ಅವರು ಜಮೀನು ಖರೀದಿ ಮಾಡುವಾಗ ಮುಡಾಗೆ ಬಿಟ್ಟುಕೊಟ್ಟ ಜಾಗವನ್ನೂ ಸೇರಿಸಿ ನೋಂದಣಿ ಮಾಡಿಸಿಕೊಂಡಿದ್ದರು.
ಈ ಜಮೀನಿಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತರೊಬ್ಬರು ಆರ್‌ಟಿಐ ಅಡಿ ಮಾಹಿತಿ ಕೋರುತ್ತಿದ್ದಂತೆ ಎಚ್ಚೆತ್ತ ಮುಖ್ಯಮಂತ್ರಿ ಅವರ ಪತ್ನಿ ಕಳೆದ ಆಗಸ್ಟ್ 30ರಂದು ಮತ್ತೆ ತಿದ್ದುಪಡಿ ರಿಜಿಸ್ಟರ್ ಮಾಡಿಸಿ ಮುಡಾ ಸ್ಥಳವನ್ನು ಬಿಟ್ಟು ಇನ್ನುಳಿದ 12,782 ಚದರಡಿ ಜಾಗಕ್ಕೆ ಮಾತ್ರ ನೋಂದಣಿ ಮಾಡಿಸಿಕೊಂಡರು.
ಈ ಜಾಗ ಮೈಸೂರು ನಗರದ ಕೆಆರ್‌ಎಸ್ ರಸ್ತೆಯಲ್ಲಿ ಸರ್ವೆ ನಂಬರ್ 454ಕ್ಕೆ ಸೇರಿದ್ದು, ಇದು ವಾಣಿಜ್ಯ ಕೇಂದ್ರಕ್ಕೆ ಪ್ರಶಸ್ತವಾದ ಸ್ಥಳವಾಗಿದೆ.
ದುರುದ್ದೇಶದಿಂದ ಖರೀದಿ
ಹೆಚ್ಚುವರಿಯಾಗಿ ಮುಡಾ ಜಾಗ ದೊರೆಯುತ್ತದೆ ಎಂಬ ದುರುದ್ದೇಶದಿಂದ 20 ಗುಂಟೆ ಜಮೀನನ್ನು ಅದರ ಬದಿಯಲ್ಲೇ ಖರೀದಿಸಿ ಸರ್ಕಾರಿ ಭೂಮಿಯನ್ನೂ ಸೇರಿಸಿಕೊಂಡು ನೋಂದಣಿ ಮಾಡಿಸಿಕೊಂಡಿದ್ದರು.
ಮುಡಾ ಹಗರಣ ತಮ್ಮ ಕುಟುಂಬಕ್ಕೆ ಸಂಕಟ ತರುತ್ತದೆ ಎಂಬ ಹಿನ್ನೆಲೆಯಲ್ಲಿ ತಾವು ಪಡೆದಿದ್ದ 14 ನಿವೇಶನಗಳನ್ನು ಹಿಂತಿರುಗಿಸಿದ ಪಾರ್ವತಿ ಅವರು, ಇದೀಗ ಸರ್ಕಾರದ ಜಾಗವನ್ನು ಒತ್ತುವರಿ ಮಾಡಿ ನೋಂದಣಿ ಮಾಡಿಸಿಕೊಂಡಿದ್ದನ್ನು ಕೈಬಿಟ್ಟು ತಾವು ಖರೀದಿಸಿದ ಸ್ಥಳಕ್ಕಷ್ಟೇ ತೃಪ್ತಿ ಪಟ್ಟುಕೊಂಡಿದ್ದಾರೆ.