ಬೆಂಗಳೂರು:ಮೈಸೂರಿನ ಪಾರಂಪರಿಕ ಕಟ್ಟಡ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ನಿರ್ವಹಣೆ ಖಾಸಗಿಯವರಿಗೆ ವಹಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಅರಣ್ಯ, ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ ಈ ಹೋಟೆಲ್ ನಿರ್ವಹಣೆ ಮಾಡುತ್ತಿದೆ, ಇದೀಗ ಹೋಟೆಲ್ ಆಪರೇಟರ್‌ಗಳಿಗೆ ಇದರ ಉಸ್ತುವಾರಿ ನೀಡಲು ಸರ್ಕಾರ ನಿರ್ಧರಿಸಿದೆ.
ಉದ್ಯಮಪತಿಗಳ ಸುಪರ್ದಿಗೆ
ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹೋಟೆಲ್ ಖಾಸಗೀಕರಣ ಬಗ್ಗೆ ಸುದೀರ್ಘ ಚರ್ಚೆ ನಂತರ ಹೆಸರಾಂತ ಉದ್ಯಮಪತಿಗಳ ಸುಪರ್ದಿಗೆ ನೀಡಲು ತೀರ್ಮಾನಿಸಲಾಗಿದೆ.
ಯೂರೋಪ್ ಪ್ರವಾಸಿಗರು ಉಳಿದುಕೊಳ್ಳಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1930ರಲ್ಲಿ ಈ ಮಹಲ್ ನಿರ್ಮಿಸಿದ್ದರು.
ಲಂಡನ್ ಕಟ್ಟಡಗಳ ವಿನ್ಯಾಸ
ಲಂಡನ್ ಕಟ್ಟಡಗಳ ವಿನ್ಯಾಸ ಆಧಾರವಾಗಿ ಇಟ್ಟುಕೊಂಡು ಮಹಾರಾಜರು, 52 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿದರು.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಈ ಹೋಟೆಲ್ ನಿರ್ವಹಣೆಯನ್ನು ಮೊದಲಿಗೆ ಕೇಂದ್ರ ಸ್ವಾಮ್ಯದ ಐಟಿಡಿಸಿ ನಿರ್ವಹಿಸುತ್ತಿತ್ತು.
2018ರಲ್ಲಿ ಕರ್ನಾಟಕ ಸರ್ಕಾರಕ್ಕೆ ಇದನ್ನು ಹಸ್ತಾಂತರ ಮಾಡಲಾಯಿತು, ನಂತರ ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆ ಲಲಿತ ಮಹಲ್ ನಿರ್ವಹಣೆ ಮಾಡುತ್ತಿದೆ.
ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ತವರು ಜಿಲ್ಲೆಯಲ್ಲಿರುವ ಈ ಐತಿಹಾಸಿಕ ಹೋಟೆಲ್ ಖಾಸಗಿ ಸುಪರ್ದಿಗೆ ನೀಡಲು ಮುಂದಾಗಿದ್ದಾರೆ.