ಬೆಂಗಳೂರು:ರಾಜ್ಯದಲ್ಲಿ ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಹೂಡಿಕೆ ಮಾಡಿರುವ ಜಾಗತಿಕ ಶ್ರೇಣಿಯ ಸ್ಯಾಫ್ರಾನ್ ಸಮೂಹ ಅಧ್ಯಕ್ಷ ರಾಸ್ ಮ್ಯಾಕಲ್ನೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದಿಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸಮ್ಮುಖದಲ್ಲಿ ನಡೆದ ಭೇಟಿ ವೇಳೆ, ರಾಜ್ಯದ ಕೈಗಾರಿಕಾಸ್ನೇಹಿ ನೀತಿ, ಹೂಡಿಕೆ ಕಾರ್ಯಪರಿಸರ, ವಿಷನ್ ಗ್ರೂಪ್ ಚಟುವಟಿಕೆಗಳ ಕುರಿತು ವಿಚಾರ ವಿನಿಮಯ ನಡೆಯಿತು.
ಬೆಂಗಳೂರಿನಲ್ಲಿ ಸ್ಯಾಫ್ರಾನ್ ಡೇಟಾ ಸಿಸ್ಟಮ್ಸ್ ಮತ್ತು ಸ್ಯಾಫ್ರಾನ್ ಹೆಲಿಕಾಪ್ಟರ್ ಎಂಜಿನ್ಸ್ ಕಚೇರಿ ಚಟುವಟಿಕೆಗಳ ಬಗ್ಗೆ ಸಭೆಗೆ ರಾಸ್ ಮಾಹಿತಿ ನೀಡಿದರು.