ಬೆಂಗಳೂರು:ಯಾವುದೇ ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ತೀರ್ಮಾನ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ವಿಶ್ವ ವಿದ್ಯಾಲಯ ಕುರಿತ ಸಂಪುಟ ಉಪಸಮಿತಿ ವರದಿ ಇನ್ನೂ ಬಂದಿಲ್ಲ, ಇದಕ್ಕೂ ಮೊದಲೇ ಬಿಜೆಪಿಗೆ ಆತಂಕ ಏಕೆ ಎಂದರು.
ಸಂಪುಟದ ಮುಂದೆ ತೀರ್ಮಾನ
ವಿರೋಧ ಪಕ್ಷದ ಸದಸ್ಯರು ವ್ಯಕ್ತಪಡಿಸಿದ ಆತಂಕಕ್ಕೆ ಉತ್ತರಿಸಿದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಕೂಲಂಕಷ ಪರಿಶೀಲನೆ ನಡೆಸಲಾಗುತ್ತಿದೆ, ಉಪಸಮಿತಿ ವರದಿ ಬಾಕಿ ಇದೆ, ವರದಿ ಬಂದ ನಂತರ ಸಂಪುಟದ ಮುಂದೆ ತಂದು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ವರದಿ ಬರುವ ಮೊದಲೇ ವಿವಿಗಳನ್ನು ಮುಚ್ಚುತ್ತೇವೆ ಎನ್ನುವುದು ಸರಿಯಲ್ಲ, ಇಂತಹ ಯಾವುದೇ ತೀರ್ಮಾನ ನಮ್ಮಿಂದ ಆಗಿಲ್ಲ ಎಂದರು.