ಬೆಂಗಳೂರು:ಕಳೆದ ಮಾರ್ಚ್-ಏಪ್ರಿಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದರೆ, 625ಕ್ಕೆ 625 ಅಂಕ ಪಡೆದು 22 ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿದ್ದು, ಇವರಲ್ಲಿ ಇಬ್ಬರು ಸರ್ಕಾರಿ ಶಾಲೆ ಮಕ್ಕಳು ಸೇರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧುಬಂಗಾರಪ್ಪ, ಒಟ್ಟಾರೆ ಶೇ.66.14ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಎಂದರು.
5,23,075 ವಿದ್ಯಾರ್ಥಿಗಳು ತೇರ್ಗಡೆ
ಒಟ್ಟಾರೆ 7,90,890 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 5,23,075 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಶೇ.91.12ರಷ್ಟು ವಿದ್ಯಾರ್ಥಿಗಳ ತೇರ್ಗಡೆಯೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದರೆ, ಶೇ.42.43 ವಿದ್ಯಾರ್ಥಿಗಳ ತೇರ್ಗಡೆಯೊಂದಿಗೆ ಕಲಬುರಗಿ ಕೊನೆ ಸ್ಥಾನದಲ್ಲಿದೆ.
ಅನುತ್ತೀರ್ಣರಾದವರಿಗೆ 2ನೇ ಪರೀಕ್ಷೆಯನ್ನು ಮೇ 26ರಿಂದ ಜೂನ್ 2ರವರೆಗೆ, 3ನೇ ಪರೀಕ್ಷೆಯನ್ನು ಜೂನ್ 23ರಿಂದ 30ರವರೆಗೆ ನಡೆಸಲಾಗುತ್ತದೆ.
2ನೇ ಪರೀಕ್ಷೆಗೆ ನೋಂದಣಿ
2ನೇ ಪರೀಕ್ಷೆಗೆ ನೋಂದಣಿಗೆ ಮೇ 10 ಕಡೆಯ ದಿನವಾಗಿರುತ್ತದೆ, ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಮೊದಲ ಸ್ಥಾನದಲ್ಲಿ 22 ವಿದ್ಯಾರ್ಥಿಗಳಿದ್ದರೆ, 65 ವಿದ್ಯಾರ್ಥಿಗಳು 624 ಅಂಕ ಪಡೆಯುವ ಮೂಲಕ 2ನೇ ಸ್ಥಾನದಲ್ಲಿದ್ದಾರೆ, 108 ವಿದ್ಯಾರ್ಥಿಗಳು 623 ಅಂಕ, 189 ಮಂದಿ 622 ಅಂಕ, 259 ಮಂದಿ 621 ಹಾಗೂ 327 ವಿದ್ಯಾರ್ಥಿಗಳು 620 ಅಂಕ ಪಡೆದು 5ನೇ ಸ್ಥಾನ ಗಳಿಸಿದ್ದಾರೆ ಎಂದರು.
625ಕ್ಕೆ 625 ಅಂಕ ಪಡೆದವರು
625ಕ್ಕೆ 625 ಅಂಕ ಪಡೆದವರು: ಅಖೀಲ್ ಅಹ್ಮದ್ ನದಾಫ್-ಆಕ್ಸ್‌ಫರ್ಡ್ ಶಾಲೆ, ವಿಜಯಪುರ, ಭಾವನಾ-ನೀಲಗಿರೇಶ್ವರ ವಿದ್ಯಾನಿಕೇತನ ಶಾಲೆ, ದೇವನಹಳ್ಳಿ, ಎಂ.ಧನಲಕ್ಷ್ಮೀ-ಸೇಂಟ್ ಯಶ್ ಶಾಲೆ, ಬೆಂಗಳೂರು ಉತ್ತರ, ಎಸ್.ಧನುಷ್-ಮರಿಮಲ್ಲಪ್ಪ ಹೈಸ್ಕೂಲ್, ಮೈಸೂರು ಜಿಲ್ಲೆ, ಜೆ.ಧೃತಿ-ಸಾಹುಕಾರ್ ಚಿಕ್ಕನಗೌಡ ಶಾಲೆ, ಕೆ.ಆರ್.ಪೇಟೆ, ಮಂಡ್ಯ, ಎಸ್.ಎನ್.ಜಾಹ್ನವಿ-ವಿಜಯಭಾರತಿ ವಿದ್ಯಾಲಯ, ಬೆಂಗಳೂರು ದಕ್ಷಿಣ, ಮಧುಸೂಧನ್ ರಾಜ್-ಎಂಇಎಸ್ ಕಿಶೋರ ಕೇಂದ್ರ, ಬೆಂಗಳೂರು ಉತ್ತರ.
ಮೊಹಮ್ಮದ್ ಮಸ್ತೂರ್-ಚೇತನ ವಿದ್ಯಾಮಂದಿರ, ತುಮಕೂರು, ಮೌಲ್ಯ ಡಿ. ರಾಜ್-ರಾಷ್ಟ್ರೀಯ ಅಕಾಡೆಮಿ ಶಾಲೆ, ಚಿತ್ರದುರ್ಗ, ಕೆ.ನಮನ-ಪ್ರಿಯದರ್ಶಿನಿ ಹೈಸ್ಕೂಲ್, ಶಿವಮೊಗ್ಗ ಜಿಲ್ಲೆ, ನಮಿತಾ-ಮಾತಾ ನ್ಯಾಷನಲ್ ಇಂಗ್ಲಿಷ್ ಶಾಲೆ, ಬೆಂಗಳೂರು ದಕ್ಷಿಣ, ನಂದನ್-ರಾಷ್ಟ್ರೀಯ ಅಕಾಡೆಮಿ ಇಂಗ್ಲಿಷ್ ಶಾಲೆ, ಚಿತ್ರದುರ್ಗ, ನಿತ್ಯ ಎಂ.ಕುಲಕರ್ಣಿ-ರಾಮಕೃಷ್ಣ ಇಂಗ್ಲಿಷ್ ಶಾಲೆ, ಶಿವಮೊಗ್ಗ, ರಂಜಿತಾ-ಚಂದ್ರಶೇಖರನಾಥ ಸ್ವಾಮೀಜಿ ಶಾಲೆ, ಬೆಂಗಳೂರು ಗ್ರಾಮಾಂತರ, ರೂಪಾ ಪಾಟೀಲ್-ಸರ್ಕಾರಿ ಕಾಂಪೋಸಿಟ್ ಪಿಯು ಕಾಲೇಜು, ಬೆಳಗಾವಿ, ಸಹಿಷ್ಣು ಎನ್-ಆದಿಚುಂಚನಗಿರಿ ಹೈಸ್ಕೂಲ್, ಶಿವಮೊಗ್ಗ ಜಿಲ್ಲೆ, ಶಗುಫ್ತಾ ಅಂಜುಮ್-ಸರ್ಕಾರಿ ಕಾಂಪೋಸಿಟ್ ಉರ್ದು ಶಾಲೆ, ಶಿರಸಿ, ಸ್ವಸ್ತಿ ಕಾಮತ್-ಕಾರ್ಕಳ ಜ್ಞಾನಸುಧಾ ಇಂಗ್ಲಿಷ್ ಶಾಲೆ, ಉಡುಪಿ, ಆರ್.ಎನ್.ತಾನ್ಯಾ-ಬಿಕೆಎಸ್‌ವಿಬಿ ಶಾಲೆ, ವಿಜಯನಗರ, ಮೈಸೂರು, ಉತ್ಸವ್ ಪಟೇಲ್-ವಿಜಯ ಸ್ಕೂಲ್, ಚಿಕ್ಕಹೊನ್ನೇನಹಳ್ಳಿ, ಹಾಸನ, ಯಶ್ವಿತಾ ರೆಡ್ಡಿ-ಚಿರೆಕ್ ಪಬ್ಲಿಕ್ ಸ್ಕೂಲ್, ಮಧುಗಿರಿ, ತುಮಕೂರು, ಯುಕ್ತಾ ಎಸ್-ಹೋಲಿ ಚೈಲ್ಡ್ ಇಂಗ್ಲಿಷ್ ಶಾಲೆ, ಬೆಂಗಳೂರು ಉತ್ತರ.
