ನೈಸ್ ಯೋಜನೆಗೆ ನೋಟಿಫೈ ಆಗಿದ್ದ 8 ಎಕರೆ ಭೂಮಿ ಕಬಳಿಸಿದ ಡಿ.ಕೆ.ಬ್ರದರ್ಸ್; ತಾವರೆಕೆರೆಯ ಒಂದೇ ಕಂಪೊಂಡಿನ 900 ಎಕರೆ ಭೂಮಿಯಲ್ಲಿ 350 ಎಕರೆ ಯಾರದು?
ಬೆಂಗಳೂರು: ಬಹಿರಂಗ ಚರ್ಚೆಗೆ ಬರುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಾಕಿರುವ ಸವಾಲನ್ನು ಸ್ವೀಕರಿಸಿದ್ದೇನೆ. ವಿಧಾನಸಭೆಯಲ್ಲಿಯೇ ಚರ್ಚೆ ಮಾಡಲು ನಾನು ತಯಾರಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು ಅವರು.
ಹೆಚ್ಚು ಟಿಆರ್ ಪಿ ಇರುವ ಚಾನೆಲ್ ನಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನನಗೆ ಬಹಿರಂಗ ಸವಾಲು ಹಾಕಿದ್ದಾರೆ. ಅದು ಹಾಗಿರಲಿ, ರಾಮನಗರ ಜಿಲ್ಲೆಯ ಅಭಿವೃದ್ಧಿಯನ್ನು ಯಾರು ಮಾಡಿದರು ಎಂಬ ವಿಷಯವೂ ಸೇರಿದಂತೆ; ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಬೆಂಗಳೂರು ಸುತ್ತ ಇರುವ ಭೂಮಿಗಳನ್ನು ಯಾರು ಕೊಳ್ಳೆ ಹೊಡೆಯಲು ಹೊರಟಿದ್ದಾರೆ ಎಂಬ ಬಗ್ಗೆಯೂ ಬಹಿರಂಗ ಚರ್ಚೆ ಸದನದಲ್ಲಿಯೇ ನಡೆಯಲಿ. ದಾಖಲೆ ಸಮೇತ ಚರ್ಚೆ ಮಾಡಲು ನಾನು ತಯಾರಿದ್ದೇನೆ ಎಂದು ಘೋಷಿಸಿದರು ಮಾಜಿ ಮುಖ್ಯಮಂತ್ರಿಗಳು.
ಕನಕಪುರ ಸೇರಿ ರಾಮನಗರ ಜಿಲ್ಲೆಯ ಭೂಮಿಯನ್ನು ಲೂಟಿ ಮಾಡಲು ಬೆಂಗಳೂರು ದಕ್ಷಿಣ ಜಿಲ್ಲೆ ಎನ್ನುತ್ತಿದ್ದಾರೆ. ಯಾರಿಗೆ ದಕ್ಷಣಿಯಾಗಿ ಕೊಡಲು ಬೆಂಗಳೂರು ದಕ್ಷಿಣ ಜಿಲ್ಲೆ ಮಾಡುತ್ತಿದ್ದಿರಿ? ಎಂದು ಅವರು ನೇರ ಪ್ರಶ್ನೆ ಕೇಳಿದ್ದಾರೆ.
ನೈಸ್ ಭೂಮಿ ಕಬಳಿಸಿದ ಡಿಕೆ ಬ್ರದರ್ಸ್
ನೈಸ್ ಜಮೀನನ್ನು ಅಕ್ರಮವಾಗಿ ಡಿ.ಕೆ.ಸುರೇಶ್ ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಹೊಸಕೆರೆಹಳ್ಳಿ ಬಳಿ 8 ಎಕರೆ ನೈಸ್ ಗೆ ಅಂತ ನೋಟಿಫಿಕೇಶನ್ ಆಗಿತ್ತು ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.
ಈ ಜಮೀನು ಡಿ.ಕೆ.ಸುರೇಶ್ ಖರೀದಿ ಮಾಡಿದ್ದಾರೆ. ಭಾಗ್ಯಲಕ್ಷಿ, ಅಮಾಸೆಗೌಡ ಎಂಬುವವರ ಹೆಸರಲ್ಲಿ ಈ ಭೂಮಿ ಇತ್ತು. ಇದನ್ನು ನೈಸ್ ಯೋಜನೆಗೆ ನೋಟಿಫೈ ಮಾಡಲಾಗಿತ್ತು. ಇದನ್ನು ಡಿ.ಕೆ.ಸುರೇಶ್ ಯಾವ ಆಧಾರದಲ್ಲಿ ಖರೀದಿ ಮಾಡುತ್ತಾರೆ ಎನ್ನುವುದು ನನ್ನ ಪ್ರಶ್ನೆ. ಅಧಿಕಾರಿಗಳು ಈ ಪ್ರಕರಣದಲ್ಲಿ ಶಾಮೀಲಾಗಿ ಡಿ.ಕೆ.ಸುರೇಶ್ ಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ 8 ಎಕರೆ ಜಾಗವನ್ನು ಶೋಭಾ ಡೆವಲಪರ್ ಗೆ ಕೊಡಲಾಗಿದೆ. ಅಲ್ಲಿ ಈಗಾಗಲೇ ಅಪಾರ್ಟ್ ಮೆಂಟ್ ಬಂದಿದೆ. ಇದರಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪಾತ್ರವೂ ಇದೆ ಎಂದು ಮಾಜಿ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.
ಈ ಎಂಟು ಎಕರೆ ಕರ್ಮಕಾಂಡದ ಬಗ್ಗೆ ನನ್ನ ಬಳಿ ದಾಖಲೆ ಇದೆ. ಈ ಬಗ್ಗೆಯೂ ಬಹಿರಂಗವಾಗಿ ಚರ್ಚೆ ಮಾಡೋಣ. ಅಧಿವೇಶನ ಕರೆಯಲಿ. ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ ಎಂದು ಅವರು ಸವಾಲು ಹಾಕಿದರು.
ತಾವರೆಕೆರೆ ಬಳಿ ಒಂದೇ ಕಂಪೊಂಡಿನಲ್ಲಿ 900 ಎಕರೆಯಷ್ಟು ಭೂಮಿ ಇದೆ. ಅದರಲ್ಲಿ 350 ಎಕರೆ ಯಾರದ್ದು? ಆ ಭೂಮಿಗೆ ಅಪ್ಪ ಅಮ್ಮ ಯಾರು? ಅಂತಹ ಪಾಪದ ಭೂಮಿಗಳ ಬೆಲೆ ಹೆಚ್ಚಿಸಿಕೊಂಡು ದುಡ್ಡು ಮಾಡುವುದಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ರಚನೆ ಮಾಡಬೇಕಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇಡೀ ಕರ್ನಾಟಕದವರು ಬೆಂಗಳೂರಿನಲ್ಲಿ ಇದ್ದಾರೆ. ಬೆಂಗಳೂರು ನಗರವು ಕರ್ನಾಟಕದ ಒಂದು ಭಾಗ. ನಮ್ಮ ಬ್ರ್ಯಾಂಡ್ ಬೆಂಗಳೂರು ಎನ್ನುವರಿಗೆ ಈ ನಗರವೇನು ಪಿತ್ರಾರ್ಜಿತ ಆಸ್ತಿಯೇ? ನಮ್ಮನ್ನು ವಲಸಿಗರು ಎನ್ನುವ ಇವರಿಗೆ ಅದು ಅರ್ಥ ಆಗಬೇಕು. ಡಿಕೆಶಿ ಬೆಂಗಳೂರಿನವರು ಅಲ್ಲ. ಅವರ ಮೂಲ ಬೆಂಗಳೂರು ಅಲ್ಲವೇ ಅಲ್ಲ ಎಂದು ಅವರು ಕಿಡಿಕಾರಿದರು.
ನನ್ನ ಬಳಿಯೂ ಸಾಕಷ್ಟು ಸರಕಿದೆ, ಉತ್ತರಿಸುತ್ತೇನೆ
ವಿಜಯದಶಮಿ ಆಸುಪಾಸಿನಲ್ಲಿ ಸಿಎಂ ಮತ್ತೆ ಡಿಸಿಎಂ ವೈಯಕ್ತಿಕವಾಗಿ ನನ್ನ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ದಾಖಲೆ ಸಮೇತ ಮಾತಾಡಲು ಬಂದಿದ್ದೇನೆ. ಟಿಆರ್ ಪಿ ಹೆಚ್ಚು ಇರುವ ಚಾನಲ್ ನಲ್ಲಿ ನಾನು ಚರ್ಚೆಗೆ ಸಿದ್ದ ಅಂದಿದ್ದಾರೆ ಡಿಸಿಎಂ. ಟಿಆರ್ ಪಿ ಇರುವ ಚಾನೆಲ್ ಇರಲಿ, ವಿಧಾನಸಭೆಯಲ್ಲಿಯೇ ಚರ್ಚೆಗೆ ನಾನು ಸಿದ್ಧನಿದ್ದೇನೆ. ಅವರು ಚರ್ಚೆಗೆ ಬರಲಿ. ನಾನು ಕೂಡ ಸವಾಲನ್ನು ಸ್ವೀಕಾರ ಮಾಡ್ತೀನಿ. ನನ್ನ ಬಳಿಯೂ ಸಾಕಷ್ಟು ಸರಕು ಇದೆ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಸವಾಲು ಹಾಕಿದರು.
ನಾನು ಬಿಡದಿಯಲ್ಲಿ ಖರೀದಿ ಮಾಡಿರುವ 44 ಎಕರೆ ಜಾಗ ರಾಜಕೀಯಕ್ಕೆ ಬರುವ ಮುನ್ನ ತೆಗೆದುಕೊಂಡಿದ್ದು. ಸಿನಿಮಾದಿಂದ ಬಂದ ಹಣದಲ್ಲಿ 4 ಸಾವಿರದಿಂದ 12 ಸಾವಿರ ಹಣ ಕೊಟ್ಟು ಖರೀದಿ ಮಾಡಿದ್ದ ಭೂಮಿ ಅದು. ಮಾಲ್ ಆರಂಭ ಮಾಡಿ ಬಿಸಿನೆಸ್ ಪ್ಯಾಶನ್ ಅಂತ ನಾನು ಹಣ ಸಂಪಾದನೆ ಮಾಡಿಲ್ಲ ಎಂದು ಅವರು ಹೇಳಿದರು.
1,400 ಕೋಟಿ ರೂ. ಹೇಗೆ ಸಂಪಾದನೆ ಮಾಡಿದಿರಿ?
ಡಿ.ಕೆ.ಶಿವಕುಮಾರ್ ಅವರೇ 1,400 ಕೋಟಿ ರೂಪಾಯಿ ಹೇಗೆ ಸಂಪಾದನೆ ಮಾಡಿದಿರಿ ಎಂದು ಹೇಳಿ. ನನಗೆ ನೀವು ಹೇಳುವುದು ಬೇಡ, ಕನಕಪುರದ ಜನತೆಗಾದರೂ ಹೇಳಿ, 1,400 ಕೋಟಿ ರೂಪಾಯಿ ಖರೀದಿ ಹೇಗೆ ಮಾಡಿದ್ದು ಅಂತ ತಿಳಿಸಿ. ನಿಮ್ಮ ಮತದಾರರಿಗಾದರೂ ಸತ್ಯ ಹೇಳಿ ಎಂದು ಅವರು ಒತ್ತಾಯ ಮಾಡಿದರು.

1 comment
[…] ರಾಜ್ಯ […]