ಸಚಿವ ಎನ್.ಎಸ್ ಭೋಸರಾಜು
ರಾಯಚೂರು:ಇಂದಿನ ಜೀವನಶೈಲಿಯ ಒತ್ತಡದಲ್ಲಿ ಗುಣಮಟ್ಟದ ಆಹಾರ ಆಯ್ಕೆಯಲ್ಲಿ ವಿಫಲರಾಗಿ ಅನೇಕ ಕಾಯಿಲೆಗಳಿಗೆ ತುತ್ತಾಗುವುದನ್ನು ತಪ್ಪಿಸಲು ಸಿರಿಧಾನ್ಯಗಳಂತಹ ಪೌಷ್ಟಿಕಾಂಶದ ಆಹಾರಗಳನ್ನ ದಿನನಿತ್ಯದ ಭಾಗವನ್ನಾಗಿಸಿಕೊಳ್ಳವಲ್ಲಿ ಆದ್ಯತೆ ನೀಡಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಭೋಸರಾಜು ತಿಳಿಸಿದ್ದಾರೆ.
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾ ಗೃಹ ಸಭಾಂಗಣದಲ್ಲಿ ಇಂಡಿಯನ್ ಸೊಸೈಟಿ ಆಫ್ ಅಗ್ರಿಕಲ್ಚರಲ್ ಇಂಜಿನಿಯರ್ಸ್, ನವದೆಹಲಿ ಹಾಗೂ ಕೃಷಿ ವಿಶ್ವವಿದ್ಯಾಲಯ ಸಹಯೋಗದೊಂದಿಗೆ ಆಯೋಜಿಸಿದ್ದ ೫೭ನೇ ಭಾರತೀಯ ಕೃಷಿ ಅಭಿಯಂತರರ ವಾರ್ಷಿಕ ಸಮಾವೇಶ ಹಾಗೂ ಗುಣಮಟ್ಟದ ಆಹಾರ ಕುರಿತ ಅಂತರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ನಮ್ಮ ಪೂರ್ವಜರು ಗುಣಮಟ್ಟದ ಪೌಷ್ಟಿಕಾಂಶದ ಆಹಾರದಿಂದ ೧೦೦ ವರ್ಷಗಳವರೆಗೆ ದಷ್ಟಪುಷ್ಟವಾಗಿ ಬದುಕಿದ್ದನ್ನ ಕಂಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಕೃಷಿ ಸಚಿವರಾದ ಚಲುವನಾರಾಯಣ ಸ್ವಾಮಿ, ಶಾಸಕ ಹಂಪಯ್ಯ ನಾಯಕ್, ಯುಎಎಸ್ ಉಪಕುಲಪತಿ ಹನುಮಂತಪ್ಪ, ಜಿಲ್ಲೆಯ ಹಲವು ಹಿರಿಯ ಅಧಿಕಾರಿಗಳು ಯುಎಎಸ್ ಸಿಬ್ಬಂದಿ, ಇಂಜಿನಿಯರ್‌ಗಳು ಉಪಸ್ಥಿತರಿದ್ದರು.