ಬೆಂಗಳೂರು ವಿವಿ ಎಂಸಿಎ ವಿಭಾಗದಲ್ಲಿರುವ ಖಾಲಿ ಹದ್ದೆಗಳು
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು, ಎಂ. ಸಿ. ಎ /ಎಂ. ಎಸ್. ಸಿ (ಗಣಕ ವಿಜ್ಞಾನ )/ಎಂ. ಟೆಕ್ (ಗಣಕ ವಿಜ್ಞಾನ ) ಪದವೀಧರರಿಂದ 7 ಅತಿಥಿ ಉಪನ್ಯಾಸಕರ ಹುದ್ದೆಗಳಿಗಾಗಿ ಒಂದು ವರ್ಷದ ಅವಧಿಗೆ ಕಾರ್ಯ ನಿರ್ವಹಿಸಲು ಅರ್ಜಿಗಳನ್ನು ಆಹ್ವಾನಿಸಿದೆ.
ಮೀಸಲಾತಿ ಪ್ರಕಾರ ( ರೋಸ್ಟರ್ ಪದ್ಧತಿ ಅಡಿಯಲ್ಲಿ, ಸರ್ಕಾರದ ಆದೇಶದ ಸಂಖ್ಯೆ – ಅಸಂ ಇ 08 ನೇ ಹಿಮ 95 ದಿನಾಂಕ 20ನೇ ಜೂನ್ 1995 ಪ್ರಕಾರ, ರೋಸ್ಟರ್ ಸೂಚ್ಯಾoಕ 9 ರಿಂದ 15): GM – 3, SC -2,2A -1,2B -1, ಎನ್ . ಇ. ಟಿ /ಎಸ್. ಎಲ್. ಇ. ಟಿ ಮತ್ತು ಪಿ. ಎಚ್. ಡಿ (ಗಣಕ ವಿಜ್ಞಾನ ) ಆದವರಿಗೆ ಆದ್ಯತೆ ಕೊಡಲಾಗುವುದು.
ಅಭ್ಯರ್ಥಿಗಳಿಗೆ ಗೌರವಧನವು 49,920 ರೂ. ಎನ್ . ಇ. ಟಿ /ಎಸ್. ಎಲ್. ಇ. ಟಿ ಮತ್ತು ಪಿ. ಎಚ್. ಡಿ (ಗಣಕ ವಿಜ್ಞಾನ ) ಆದವರಿಗೆ ಮತ್ತು 43,520 ರೂ. ಎನ್ . ಇ. ಟಿ /ಎಸ್. ಎಲ್. ಇ. ಟಿ ಮತ್ತು ಪಿ. ಎಚ್. ಡಿ (ಗಣಕ ವಿಜ್ಞಾನ ) ಇಲ್ಲದವರಿಗೆ.
ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಡಿ. 4 ರೊಳಗೆ ಸಲ್ಲಿಸತಕ್ಕದ್ದು . ಅಭ್ಯರ್ಥಿಗಳು ವಿವರಗಳಿಗೆ ಸಮನ್ವಯಾಧಿಕಾರಿ, ಎಂ. ಸಿ. ಎ ವಿಭಾಗ, ಸೈಕಾಲಜಿ ಕಟ್ಟಡ, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ ಈ ವಿಳಾಸವನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.