600 ಚಿತ್ರಗಳಲ್ಲಿ ನಟಿಸಿದ್ದ ಮಹಾನ್ ನಟಿ, ಕನ್ನಡ ಚಿತ್ರರಂಗದ ಅಮ್ಮ
ಬೆಂಗಳೂರು: ಕನ್ನಡ ಚಿತ್ರರಂಗದ ಅಮ್ಮ ಎಂದೇ ಹೆಸರಾಗಿದ್ದ ಹಿರಿಯ ನಟಿ ಲೀಲಾವತಿ ಅವರು ಇನ್ನಿಲ್ಲ. ಪ್ರತಿ ಪಾತ್ರವನ್ನೂ ಲೀಲಾಜಾಲವಾಗಿ ಅಭಿನಯಿಸಿದ್ದ ಅವರು ಇಂದು ಸಂಜೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಅಗಲಿದ್ದಾರೆ.
ನಟಿಯಾಗಿ ಮಾತ್ರವಲ್ಲದೆ, ಅವರಿಗೆ 85 ವರ್ಷ ವಯಸ್ಸಾಗಿತ್ತು. ಪುತ್ರ ವಿನೋದ್ ರಾಜ್ ಅವರನ್ನು ಲೀಲಾವತಿ ಅವರು ಅಗಲಿದ್ದಾರೆ. ಅವರು ವಾಸ ಮಾಡುತ್ತಿದ್ದ ಸೂಲದೇವನಹಳ್ಳಿ ಸಮೀಪದ ನೆಲಮಂಗಲದ ಜ್ಯೂನಿಯರ್ ಕಾಲೇಜು ಎದುರಿನ ಅಂಬೇಡ್ಕರ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವರ ಪಾರ್ಥೀವ ಶರೀರವನ್ನು ಇಡಲಾಗಿದೆ.
ನೆಲಮಂಗಲದ ಸುತ್ತಮುತ್ತ ವಾಸಿಸುವ ಜನರ ಆರೋಗ್ಯ ಸೇವೆಗಾಗಿ ಸೋಲದೇವನಹಳ್ಳಿಯಲ್ಲಿ ಆಸ್ಪತ್ರೆಯೊಂದನ್ನು ಲೀಲಾವತಿ ಕಟ್ಟಿಸಿದ್ದಾರೆ. ಕೆಲ ದಿನಗಳ ಹಿಂದೆ ಆ ಆಸ್ಪತ್ರೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಉದ್ಘಾಟನೆ ಮಾಡಿದ್ದರು.
ಲೀಲಾವತಿ ಅವರು ದಕ್ಷಿಣ ಭಾರತದ ನಟಿ. ಕನ್ನಡದಲ್ಲಿ ಪ್ರಧಾನವಾಗಿ ನಟಿಸುವುದರೊಂದಿಗೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ ಸುಮಾರು 600 ಚಿತ್ರಗಳಲ್ಲಿ ನಟಿಸಿದ್ದಾರೆ. ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ತ್ಯುನ್ನತ ಪ್ರಶಸ್ತಿ ಡಾ. ರಾಜಕುಮಾರ್ ಪ್ರಶಸ್ತಿಯನ್ನು 1999-2000-ನೇ ಸಾಲಿನಲ್ಲಿ ಪಡೆದ ಲೀಲಾವತಿ ಅವರು, ‘ತುಮಕೂರು ವಿಶ್ವವಿದ್ಯಾಲಯ’ದ ಗೌರವ ಡಾಕ್ಟರೇಟ್ ಪದವಿಯನ್ನು 2008ರಲ್ಲಿ ಪಡೆದಿದ್ದರು.
ಲೀಲಾವತಿ ಅವರ ಮೂಲ ಹೆಸರು ಲೀಲಾ ಕಿರಣ್. ಅವರು ಹುಟ್ಟಿದ್ದು (1938) ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ. ನಾಟಕ, ರಂಗಭೂಮಿ ಬಗೆಗೆ ಚಿಕ್ಕವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದ ಲೀಲಾ ಅವರು ವೃತ್ತಿಜೀವನ ಆರಂಭಿಸಿದ್ದು ಮೈಸೂರಿನಲ್ಲಿ. ವೃತ್ತಿರಂಗಭೂಮಿಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಮುನ್ನ ಕೆಲವೆಡೆ ಮನೆ ಕೆಲಸವನ್ನೂ ಅವರು ನಿರ್ವಹಿಸಿದ್ದರು.
ಲೀಲಾವತಿ ಅವರ ಮಗ ವಿನೋದ್ ರಾಜ್ ಕನ್ನಡ ಚಿತ್ರರಂಗದ ಖ್ಯಾತ ನಟ. ಪ್ರಸ್ತುತ ತಾಯಿ-ಮಗ ಇಬ್ಬರೂ ತೋಟಗಾರಿಕೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.
ನಟನೆಯ ಮೇರು, ಲೀಲಾಜಾಲ ಅಭಿನಯ
ಲೀಲಾವತಿ ಅವರು 1949ರಲ್ಲಿ ಶಂಕರ್ ಸಿಂಗ್ ಅವರ ‘ನಾಗಕನ್ನಿಕ’ ಚಿತ್ರದಲ್ಲಿ ಸಖಿಯ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿದ್ದ ಲೀಲಾವತಿ ಅವರು ಕಯಾದುವಿನ ಸಖಿಯಾಗಿ ಅಭಿನಯಿಸಿದ್ದರು. ಮಹಾಲಿಂಗ ಭಾಗವತರ ನಾಟಕ ಸಂಸ್ಥೆಯನ್ನು ಸೇರಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದರು. ಸುಬ್ಬಯ್ಯ ನಾಯ್ಡು ಅವರ ‘ಭಕ್ತ ಪ್ರಹ್ಲಾದ’ದಲ್ಲಿ ಕೂಡ ಅಭಿನಯಿಸಿದರು. ಹಲವಾರು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಅಭಿನಯಿಸಿದರು.
ನಾಯಕಿಯಾಗಿ ಅವರು ಅಭಿನಯಿಸಿದ ಮೊದಲ ಚಿತ್ರ ‘ಮಾಂಗಲ್ಯ ಯೋಗ’. ಡಾ.ರಾಜ್ ಕುಮಾರ್ ಅವರೊಂದಿಗೆ ನಟಿಸಿದ ಮೊದಲ ಚಿತ್ರ ‘ರಣಧೀರ ಕಂಠೀರವ’.
‘ರಾಣಿ ಹೊನ್ನಮ್ಮ’ ಚಿತ್ರದ ಯಶಸ್ಸಿನ ನಂತರ ರಾಜ್ ಕುಮಾರ್ ಮತ್ತು ಲೀಲಾವತಿ ಅವರ ಜೋಡಿ ಜನಪ್ರಿಯವಾಯಿತು. ‘ಸಂತ ತುಕಾರಾಂ’, ‘ಕಣ್ತೆರೆದು ನೋಡು’, ‘ಕೈವಾರ ಮಹಾತ್ಮೆ’, ‘ಗಾಳಿ ಗೋಪುರ’, ‘ಕನ್ಯಾರತ್ನ’, ‘ಕುಲವಧು’, ‘ವೀರ ಕೇಸರಿ’, ‘ಮನ ಮೆಚ್ಚಿದ ಮಡದಿ’ ಹೀಗೆ ಹಲವಾರು ಚಿತ್ರಗಳ ನಾಯಕಿಯಾದರು. ಕೆಲಚಿತ್ರಗಳಲ್ಲಿ ನಾಯಕನಟರಿಗಿಂತ ಹೆಚ್ಚಿನ ಸಂಭಾವನೆ ಪಡೆಯುವ ನಾಯಕಿಯಾಗಿ ಗುರುತಿಸಿಕೊಂಡಿದ್ದರು.
70ರ ದಶಕದ ಬಳಿಕ ಪೋಷಕ ಪಾತ್ರಗಳಲ್ಲಿ ಲೀಲಾವತಿಯವರು ತಮ್ಮನ್ನು ತೊಡಗಿಸಿಕೊಂಡರು. ನಾಯಕಿಯಾಗಿ, ಅಮ್ಮನಾಗಿ, ಅಜ್ಜಿಯಾಗಿ ನಾನಾಬಗೆಯ ಪೋಷಕ ಪಾತ್ರಗಳಲ್ಲಿ ನಟಿಸಿದರು. ಅವುಗಳಲ್ಲಿ ‘ಗೆಜ್ಜೆಪೂಜೆ’, ‘ಸಿಪಾಯಿ ರಾಮು’, ‘ನಾಗರಹಾವು’, ‘ಭಕ್ತ ಕುಂಬಾರ’ ಮುಂತಾದ ಚಿತ್ರಗಳು ಪ್ರಮುಖವಾದವು.
ಪ್ರಶಸ್ತಿ-ಪುರಸ್ಕಾರ
2008 – ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್
2006- ಅತ್ತ್ಯುತ್ತಮ ಪೋಷಕನಟಿ ಫಿಲಂಫೇರ್ ಕನ್ನಡ – ಕನ್ನಡದ ಕಂದ
1999-2000 – ಡಾ. ರಾಜಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು:
ಅತ್ತ್ಯುತ್ತಮ ಪೋಷಕನಟಿ ಪ್ರಶಸ್ತಿ
ಆಯ್ದ ಚಿತ್ರಗಳ ಪಟ್ಟಿ
ಮದುವೆ ಮಾಡಿ ನೋಡು
ಸಂತ ತುಕಾರಾಂ
ತುಂಬಿದ ಕೊಡ
ಕಣ್ತೆರೆದು ನೋಡು
ರಾಣಿ ಹೊನ್ನಮ್ಮ
ಗೆಜ್ಜೆ ಪೂಜೆ
ಸಿಪಾಯಿರಾಮು
ನಾಗರಹಾವು
ಭಕ್ತ ಕುಂಬಾರ
ಬಿಳಿ ಹೆಂಡ್ತಿ
ನಾ ನಿನ್ನ ಮರೆಯಲಾರೆ
ಕಳ್ಳ ಕುಳ್ಳ
ಡಾಕ್ಟರ್ ಕೃಷ್ಣ
ಕನ್ನಡದ ಕಂದ
ವೀರ ಕೇಸರಿ
1960-70-ಗೆಜ್ಜೆಪೂಜೆ
1971-72-ಸಿಪಾಯಿ ರಾಮು
1989-90- ಡಾಕ್ಟರ್ ಕೃಷ್ಣ
1958 ಭಕ್ತ ಪ್ರಹ್ಲಾದ ಕನ್ನಡ
1958 ಮಾಂಗಲ್ಯ ಯೋಗ ಮೊದಲ ಚಿತ್ರ
1959 ರಾಜ ಮಲಯ ಸಿಂಹ
1959 ಅಬ್ಬಾ ಆ ಹುಡುಗೀ ಕನ್ನಡ
1959 ಧರ್ಮ ವಿಜಯ ಕನ್ನಡ
1960 ದಶಾವತಾರ
1960 ರಣಧೀರ ಕಂಠೀರವ
1960 ರಾಣಿ ಹೊನ್ನಮ್ಮ
1961 ಕೈವಾರ ಮಹಾತ್ಮೆ ಕನ್ನಡ
1961 ಕಂತೆರೆದು ನೋಡು ಕನ್ನಡ
1961 ಕಿತ್ತೂರು ಚೆನ್ನಮ್ಮ ಕನ್ನಡ ವೀರವ್ವ
1962 ಗಾಳಿ ಗೋಪುರ ಕನ್ನಡ
1962 ಕರುಣೆಯೇ ಕುಟುಂಬದ ಕಣ್ಣು ಕನ್ನಡ
1962 ಉದಯ ಕುಮಾರ್, ರಾಜಕುಮಾರ್, ಕಲ್ಯಾಣ್ ಕುಮಾರ್ ಅವರೊಂದಿಗೆ ಭೂದಾನ ಕನ್ನಡ
1962 ಮನ ಮೆಚ್ಚಿದ ಮಡದಿ
1962 ನಂದಾ ದೀಪ ಕನ್ನಡ ಉದಯಕುಮಾರ್, ರಾಜಕುಮಾರ್
1962 ಪತ್ತಿನಾಥರ್ ತಮಿಳು ಚಲನಚಿತ್ರ ಮೊದಲ ತಮಿಳು ಚಲನಚಿತ್ರ
1962 ರಾಣಿ ಚನಮ್ಮ
1962 ರತ್ನ ಮಂಜರಿ
1962 ಸುಮೈತಾಂಗಿ ತಮಿಳು
1962 ಶಿವಾಜಿ ಗಣೇಶನ್ ಜೊತೆ ವಾಲರ್ ಪಿರೈ ತಮಿಳು ಚಲನಚಿತ್ರ
1962 ವಿಧಿ ವಿಲಾಸ
1963 ಕುಲವಧು ಕನ್ನಡ
1963 ಕನ್ಯಾರತ್ನ ಕನ್ನಡ
1963 ಕಲಿತರು ಹೆಣ್ಣೆ ಕನ್ನಡ
1963 ಬೇವು ಬೆಲ್ಲ ಕನ್ನಡ
1963 ಜೀವನ ತರಂಗ ಕನ್ನಡ
1963 ಮಲ್ಲಿ ಮದುವೆ ಕನ್ನಡ
1963 ಮನ ಮೆಚ್ಚಿದ ಮಡದಿ ಕನ್ನಡ
1963 ಸಂತ ತುಕಾರಾಂ ಕನ್ನಡ ರಾಷ್ಟ್ರೀಯ ಪ್ರಶಸ್ತಿ, ರಾಜಕುಮಾರ್ ಅವರೊಂದಿಗೆ
1963 N. T. ರಾಮರಾವ್ ಅವರೊಂದಿಗೆ ವಾಲ್ಮೀಕಿ ತೆಲುಗು ಚಲನಚಿತ್ರ
1963 ವಾಲ್ಮೀಕಿ ಕನ್ನಡ
1963 ರಾಜ್‌ಕುಮಾರ್ ಜೊತೆ ವೀರ ಕೇಸರಿ ಕನ್ನಡ
1964 ಮರ್ಮಯೋಗಿ ತೆಲುಗು ಮೊದಲ ತೆಲುಗು ಚಲನಚಿತ್ರ
1964 ಶಿವರಾತ್ರಿ ಮಹಾತ್ಮೆ ಕನ್ನಡ
1964 ತುಂಬಿದ ಕೊಡ ಕನ್ನಡ ರಾಜ್ಯ ಪ್ರಶಸ್ತಿ
1965 ಚಂದ್ರಹಾಸ ಕನ್ನಡ
1965 ಇದೇ ಮಹಾಸುದಿನ ಕನ್ನಡ
1965 ಮದುವೆ ಮಡಿ ನೋಡು ಕನ್ನಡ ರಾಷ್ಟ್ರೀಯ ಪ್ರಶಸ್ತಿ, ರಾಜಕುಮಾರ್ ಅವರೊಂದಿಗೆ
1965 ನಾಗ ಪೂಜಾ ಕನ್ನಡ
1965 ವಾತ್ಸಲ್ಯ ಕನ್ನಡ
ಉದಯ ಕುಮಾರ್ ಜೊತೆ 1965 ವೀರ ವಿಕ್ರಮ ಕನ್ನಡ
1966 ಮೋಹಿನಿ ಭಸ್ಮಾಸುರ ಕನ್ನಡ
1966 ಪ್ರೇಮಮಯಿ ಕನ್ನಡ
1966 ಪಾದುಕಾ ಪಟ್ಟಾಭಿಷೇಕಮು
1966 ರಾಜಕುಮಾರ್ ಜೊತೆ ತೂಗು ದೀಪ ಕನ್ನಡ
1967 ಗಂಗೆ ಗೌರಿ ಕನ್ನಡ
1968 ಅಣ್ಣ ತಮ್ಮ ಕನ್ನಡ
1968 ಅತ್ತೆಗೊಂದು ಕಾಲ ಸೊಸೆಗೊಂದು ಕನ್ನಡ
ರಾಜ್‌ಕುಮಾರ್ ಜೊತೆ 1968 ಭಾಗ್ಯ ದೇವತೆ ಕನ್ನಡ
1968 ಮಮತೆ ಕನ್ನಡ
1969 ಕಲ್ಪ ವೃಕ್ಷ ಕನ್ನಡ
1969 ಬೃಂದಾವನ ಕನ್ನಡ
1969 ಗೆಜ್ಜೆ ಪೂಜೆ ಕನ್ನಡ ರಾಜ್ಯ ಪ್ರಶಸ್ತಿ
1970 ಆರು ಮೂರು ಒಂಭತ್ತು ಕನ್ನಡ
1970 ಬೋರೇಗೌಡ ಬೆಂಗಳೂರಿಗೆ ಬಂದ ಕನ್ನಡ
1970 ಅಪರಾಜಿತೆ ಕನ್ನಡ
1970 ಸುಖ ಸಂಸಾರ ಕನ್ನಡ
1971 ಸಿಗ್ನಲ್‌ಮ್ಯಾನ್ ಸಿದ್ದಪ್ಪ ಕನ್ನಡ
1972 ಸಿಪಾಯಿ ರಾಮು ಕನ್ನಡ ರಾಜ್ಯ ಪ್ರಶಸ್ತಿ ರಾಜಕುಮಾರ್ ಅವರೊಂದಿಗೆ
1971 ಸೋತು ಗೆದ್ದವಳು ಕನ್ನಡ
1971 ಶರಪಂಜರ ಕನ್ನಡ
1972 ಧರ್ಮಪತ್ನಿ ಕನ್ನಡ
1972 ವಿಷ್ಣುವರ್ಧನ್ ಜೊತೆ ನಾಗರಹಾವು ಕನ್ನಡ
1972 ಕಲ್ಪನಾ ಜೊತೆ ನಾ ಮೆಚ್ಚಿದ ಹುಡುಗ ಕನ್ನಡ
1973 ಮೂರೂವರೆ ವಜ್ರಗಳು ಕನ್ನಡ
1973 ಪ್ರೇಮಪಾಶ ಕನ್ನಡ
1973 ಸಹಧರ್ಮಿಣಿ ಕನ್ನಡ
1974 ಭಕ್ತ ಕುಂಬಾರ ಕನ್ನಡ ಸಹ ನಟ: ರಾಜಕುಮಾರ್
1974 ದೇವರ ಗುಡಿ ಕನ್ನಡ
1974 ಕಮಲ್ ಹಾಸನ್ ಜೊತೆ ಅವಳ್ ಒರು ಥೋಡರ್ ಕಥೈ ತಮಿಳು
1974 ಇದು ನಮ್ಮ ದೇಶ ಕನ್ನಡ
1974 ಮಗ ಮೊಮ್ಮಗ ಕನ್ನಡ
1974 ಮಹಾ ತ್ಯಾಗ ಕನ್ನಡ
1974 ಜೆಮಿನಿ ಗಣೇಶನ್ ಜೊತೆ ನಾನ್ ಅವನಿಲ್ಲೈ ತಮಿಳು
1974 ಪ್ರೊಫೆಸರ್ ಹುಚ್ಚುರಾಯ ಕನ್ನಡ
1974 ಆರತಿಯೊಂದಿಗೆ ಉಪಾಸನೆ ಕನ್ನಡ
1975 ಭಾಗ್ಯ ಜ್ಯೋತಿ ಕನ್ನಡ
1975 ಬಿಳಿ ಹೆಂಡ್ತಿ ಕನ್ನಡ
1975 ಹೆಣ್ಣು ಸಂಸಾರದ ಕಣ್ಣು ಕನ್ನಡ
1975 ಹೊಸಲು ಮೆಟ್ಟಿದ ಹೆಣ್ಣು ಕನ್ನಡ
1975 ಕೂಡಿ ಬಾಳೋಣ ಕನ್ನಡ
1975 ರಜನಿಕಾಂತ್ ಜೊತೆ ಕಥಾ ಸಂಗಮ ಕನ್ನಡ
1975 ಕಲ್ಲ ಕುಳ್ಳ ಕನ್ನಡ
1976 ಬಂಗಾರದ ಗುಡಿ ಕನ್ನಡ
1976 ಕಾಲೇಜು ರಂಗ ಕನ್ನಡ
1976 ಮಕ್ಕಳ ಭಾಗ್ಯ ಕನ್ನಡ
1976 ನಾ ನಿನ್ನ ಮರೆಯಲಾರೆ ಕನ್ನಡ
1976 ಫಲಿತಾಂಶ ಕನ್ನಡ
1977 ದೀಪ ಕನ್ನಡ
1977 ರಜನಿಕಾಂತ್ ಜೊತೆ ಅವರಗಲ್ ತಮಿಳು
1977 ಧನಲಕ್ಷ್ಮಿ ಕನ್ನಡ
1977 ಕುಂಕುಮ ರಕ್ಷೆ ಕನ್ನಡ
1977 ಮುಗ್ಧ ಮಾನವ ಕನ್ನಡ
1977 ಸೋಲಾ ಶುಕ್ರವಾರ್
1977 ವೀರ ಸಿಂಧೂರ ಲಕ್ಷ್ಮಣ ಕನ್ನಡ
1978 ದೇವದಾಸಿ ಕನ್ನಡ
1978 ಕಿಲಾಡಿ ಜೋಡಿ ಕನ್ನಡ
1978 ಗಮ್ಮತ್ತು ಗೂಡಚಾರುಲು
1978 ಹೊಂಬಿಸಿಲು ಕನ್ನಡ
1978 ಕಿಲಾಡಿ ಕಿಟ್ಟು ಕನ್ನಡ
1978 ಮಾತು ತಪ್ಪದ ಮಗ ಕನ್ನಡ
1978 ವಸಂತ ಲಕ್ಷ್ಮಿ ಕನ್ನಡ
1979 ಕಾರ್ತಿಕ ದೀಪಂ ತೆಲುಗು
1979 ಇದಿ ಕಥಾ ಕಾಡು ತೆಲುಗು
1979 ನಾ ನಿನ್ನ ಬಿಡಲಾರೆ ಕನ್ನಡ
1979 ಪಕ್ಕಾ ಕಲ್ಲ ಕನ್ನಡ
1979 ಸವತಿಯ ನೇರಳು ಕನ್ನಡ
1979 ವಿಜಯ್ ವಿಕ್ರಮ್ ಕನ್ನಡ
1980 ಭೂಮಿ ಪರ್ ಆಯೆ ಭಗವಾನ್
1980 ಜಾಥಾರ
1980 ಕುಳ್ಳ ಕುಲ್ಲಿ ಕನ್ನಡ
1980 ನನ್ನ ರೋಷ ನೂರು ವರುಷ ಕನ್ನಡ
1980 ನಮ್ಮ ಮನೆ ಸೊಸೆ ಕನ್ನಡ
1980 ನ್ಯಾಯ ನೀತಿ ಧರ್ಮ ಕನ್ನಡ
1980 ಸಿಂಹ ಜೋಡಿ ಕನ್ನಡ
1980 ಸುಬ್ಬಿ ಸುಬ್ಬಕ್ಕ ಸುವ್ವಳಲಿ ಕನ್ನಡ
1980 ವಸಂತ ಗೀತೆ ಕನ್ನಡ ರಾಜಕುಮಾರ್ ಜೊತೆ
1981 ಹಣ ಬಲವೋ ಜನ ಬಲವೋ ಕನ್ನಡ
1981 ಎಡೆಯೂರು ಸಿದ್ಧಲಿಂಗೇಶ್ವರ ಕನ್ನಡ
1981 ಕುಲ ಪುತ್ರ ಕನ್ನಡ
1981 ಗರ್ಜನೈ ತಮಿಳು
1981 ಗರ್ಜನೆ ಕನ್ನಡ
1981 ತಾಯಿಯ ಮಡಿಲಲ್ಲಿ ಕನ್ನಡ
1981 ಮರೆಯದ ಹಾಡು ಕನ್ನಡ
ಶಂಕರ್ ನಾಗ್ ಜೊತೆ 1982 ಆಟೋ ರಾಜ ಕನ್ನಡ
1982 ಮಾರೋ ಮಲುಪು ತೆಲುಗು
1983 ಎರಡು ನಕ್ಷತ್ರಗಳು ಕನ್ನಡ
1983 ಮುದುಡಿದ ತಾವರೆ ಅರಳಿತು ಕನ್ನಡ
1983 ಸಿದ್ದೆದ್ದ ಸಹೋದರ ಕನ್ನಡ
1983 ಸಮರ್ಪಣೆ ಕನ್ನಡ
1984 ಎಂದಿನ ರಾಮಾಯಣ ಕನ್ನಡ
1984 ಚಾಣಕ್ಯ ಕನ್ನಡ
1984 ಒಲವು ಮೂಡಿದಗ ಕನ್ನಡ
1984 ರಾಜ್‌ಕುಮಾರ್ ಜೊತೆ ಶ್ರವಣ ಬಂತು ಕನ್ನಡ
1985 ಅಜೆಯ ಕನ್ನಡ
1985 ಹೊಸ ಬಾಳು ಕನ್ನಡ
1985 ಬಾಳೊಂದು ಉಯ್ಯಾಲೆ ಕನ್ನಡ
1985 ನಾನು ನನ್ನ ಹೆಂಡ್ತಿ ಕನ್ನಡ
1986 ಬೆಟ್ಟದ ತಾಯಿ ಕನ್ನಡ
1986 ಕಥಾನಾಯಕ ಕನ್ನಡ
1986 ಕೆಡಿ ನಂ. 1 ಕನ್ನಡ
1986 ಮೃಗಾಲಯ ಕನ್ನಡ
1986 ಪುದಿರ್ ತಮಿಳು ಚಲನಚಿತ್ರ
1986 ಸೀಳು ನಕ್ಷತ್ರ ಕನ್ನಡ
1987 ಹುಲಿ ಹೆಬ್ಬುಲಿ ಕನ್ನಡ
1987 ಒಲವಿನ ಉಡುಗೋರೆ ಕನ್ನಡ
1987 ಪ್ರೇಮಲೋಕ ಕನ್ನಡ
1988 ರಾಮಣ್ಣ ಶಾಮಣ್ಣ ಕನ್ನಡ
1989 ಅಭಿಮಾನ ಕನ್ನಡ
1989 ಅತ್ಯುತ್ತಮ ಪೋಷಕ ನಟಿಗಾಗಿ ಡಾಕ್ಟರ್ ಕೃಷ್ಣ ಕನ್ನಡ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
1989 ಯುಗ ಪುರುಷ ಕನ್ನಡ
1989 ಗಗನ ಕನ್ನಡ
1990 ಅನಂತ್ ನಾಗ್ ಜೊತೆ ಗೋಲ್ಮಾಲ್ ರಾಧಾಕೃಷ್ಣ ಕನ್ನಡ
1990 ಟೈಗರ್ ಗಂಗೂ ಕನ್ನಡ
1991 ಗೋಲ್ಮಾಲ್ ರಾಧಾಕೃಷ್ಣ II ಕನ್ನಡ
1999 ಹಬ್ಬ ಕನ್ನಡ
2000 ಚಾಮುಂಡಿ ಕನ್ನಡ
2003 ಸ್ವಾತಿ ಎಂ
- ಲೀಲಾವತಿ ಅವರ ಚಿತ್ರಸಂಪುಟ / ಚಿತ್ರಕೃಪೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ