ಗಾಬರಿಯಾದ ಸಂಸತ್; ಕಲಾಪ ಮುಂದೂಡಿಕೆ
ನವದೆಹಲಿ: ಮೈಸೂರು ನಗರದ ಮನೋರಂಜನ್ ಎಂಬ ಯುವಕ ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಸದಸ್ಯರ ಆಸನಗಳತ್ತ ಜಿಗಿದು ಸದನದಲ್ಲಿ ಹಳದಿ ಪುಡಿಯನ್ನು ಎಸೆದು ಓಡಾಡಿದ ಘಟನೆ ಇಂದು ಲೋಕಸಭೆಯಲ್ಲಿ ಜರುಗಿ ರಾಷ್ಟ್ರವನ್ನೇ ಅಲ್ಲೋಲ-ಕಲ್ಲೋಲ ಮಾಡಿದೆ.
ಸಂಸತ್ ಭವನದ ಮೇಲೆ ನಡೆದ ದಾಳಿಯ 22 ವರ್ಷಗಳ ನಂತರ ನೂತನ ಸಂಸತ್ ಭವನದಲ್ಲಿ ಈ ಘಟನೆ ಜರುಗಿದೆ.
ಸದನ ಕಲಾಪ ಹಠಾತ್ ಮುಂದೂಡಿಕೆ
ಇದರಿಂದ ಗೊಂದಲ ವಾತಾವರಣ ನಿರ್ಮಾಣವಾಗಿ ಸದನ ಕಲಾಪವನ್ನು ಹಠಾತ್ ಮುಂದೂಡಲಾಯಿತು.
ಇದಕ್ಕೂ ಮುನ್ನ ಲೋಕಸಭೆಯ ವೀಕ್ಷಕರ ಗ್ಯಾಲರಿಯಿಂದ ಆಗಂತುಕ ವ್ಯಕ್ತಿ ಸದನದೊಳಗೆ ಜಿಗಿದು ಸದಸ್ಯರು ಕೂರುವ ಆಸನಗಳ ಮುಂದಿನ ಬೆಂಚ್‌ಗಳ ಮೇಲೆ ಘೋಷಣೆ ಕೂಗುತ್ತಾ ಓಡಾಡಿದ್ದಾನೆ.
ಇದೇ ಸಮಯದಲ್ಲಿ ತಮ್ಮ ಶೂನಲ್ಲಿದ್ದ ಹಳದಿ ರಾಸಾಯನವನ್ನು ಹೊರತೆಗೆದು ಸದನದಲ್ಲಿ ಗಾಳಿಯಲ್ಲಿ ತೂರಿ ಬಾಂಬ್ ಹಾಕಿದಂತ ದೃಶ್ಯವನ್ನು ಸೃಷ್ಠಿ ಮಾಡಿದ.
ಸದಸ್ಯರಲ್ಲಿ ಗಾಬರಿ ಪರಿಸ್ಥಿತಿ ನಿರ್ಮಾಣ
ಇದು ಒಂದು ರೀತಿ ಆಶ್ರುವಾಯು ಸಿಡಿಸಿದ ದೃಶ್ಯದಂತೆ ಕಂಡುಬಂದು ಸದಸ್ಯರಲ್ಲಿ ಗಾಬರಿಯ ಪರಿಸ್ಥಿತಿ ನಿರ್ಮಾಣ ಮಾಡಿತು. ಈ ಹಂತದಲ್ಲಿ ಆತಂಕಗೊಂಡ ಕೆಲವು ಸಂಸದರು ಸದನದಿಂದ ಹೊರಗೆ ಓಡಿದರೆ, ಇನ್ನು ಕೆಲವು ಸದಸ್ಯರು ಇಂತಹ ಪರಿಸ್ಥಿತಿಯಲ್ಲೂ ಧೈರ್ಯದಿಂದ ಆಗಂತುಕನನ್ನು ಹಿಡಿದು ಮಾರ್ಷಲ್‌ಗಳ ವಶಕ್ಕೆ ನೀಡಿದರು.
ಇದೇ ಸಮಯದಲ್ಲಿ ವೀಕ್ಷಕರ ಗ್ಯಾಲರಿಯಲ್ಲಿ ಘೋಷಣೆ ಕೂಗುತ್ತಿದ್ದ ವ್ಯಕ್ತಿಯನ್ನು ಹಾಗೂ ಸಂಸತ್ ಹೊರಗೆ ಮಹಿಳೆ ಸೇರಿದಂತೆ ಒಟ್ಟು ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.
ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಇಬ್ಬರಲ್ಲಿ ಒಬ್ಬ ಮಹಿಳೆಯನ್ನು ಅಮೂಲ್ ಸಿಂಧೆ ಎಂದು ಗುರುತಿಸಲಾಗಿದೆ.
3 comments
ಭದ್ರತಾ ಸಿಬ್ಬಂದಿ ಏನು ಮಾಡುತ್ತಿದ್ದರು?
[…] ರಾಜ್ಯ […]
[…] ರಾಜ್ಯ […]