ರಾಜ್ಯದ ಪಾರಂಪರಿಕ ಉತ್ಪನ್ನಗಳಿಗೆ ಉತ್ತೇಜನ
ಬೆಂಗಳೂರು: ರಾಜ್ಯ ಸರ್ಕಾರಿ ಕೈಗಾರಿಕಾ ಉತ್ಪನ್ನಗಳ ಮಾರಾಟ ಉತ್ತೇಜಿಸಲು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ “ಕಲಾಲೋಕ” ಹೆಸರಿನಲ್ಲಿ ಎರಡು ಮಾರಾಟ ಮಳಿಗೆಗಳನ್ನು ಬರುವ ಏಪ್ರಿಲ್ ವೇಳೆಗೆ ಆರಂಭಿಸಲಾಗುವುದು ಎಂದು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಇಂದಿಲ್ಲಿ ತಿಳಿಸಿದ್ದಾರೆ.
ವಿಮಾನ ನಿಲ್ದಾಣ ಅಧಿಕಾರಿಗಳ (ಬಿಐಎಎಲ್) ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಸ್ವಾಮ್ಯದ ಉದ್ಯಮಗಳಾದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆ-ಕೆಎಸ್‌ಡಿಎಲ್, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕೆಎಸ್‌ಐಸಿ (ಕರ್ನಾಟಕ ರೇಷ್ಮೆ ಉದ್ಯಮ ನಿಗಮ), ಕಾಫಿ ಬೋರ್ಡ್ ಮತ್ತು ಲಿಡ್ಕರ್ ಸಂಸ್ಥೆಗಳ ಉತ್ಪನ್ನಗಳನ್ನು “ಕಲಾಲೋಕ” ಮಳಿಗೆಗಳಲ್ಲಿ ಮಾರಾಟ ಮಾಡಲಾಗುವುದು ಎಂದರು.
ಚನ್ನಪಟ್ಟಣ ಆಟಿಕೆ, ಇಳಕಲ್ ಸೀರೆ
ಅಲ್ಲದೆ, ರಾಜ್ಯದ ಇತರ ಉತ್ಪನ್ನಗಳಾದ ಪಾರಂಪರಿಕ ಚನ್ನಪಟ್ಟಣ ಆಟಿಕೆ, ಇಳಕಲ್ ಸೀರೆ, ಲಂಬಾಣಿ ಕಸೂತಿ ಸೇರಿದಂತೆ ಹಲವು ದೇಶೀಯ ಉತ್ಪನ್ನಗಳೂ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಿರಲಿವೆ.
ಹೊಸದಾಗಿ ನಿರ್ಮಿಸಿರುವ ಟರ್ಮಿನಲ್-2ರ ದೇಶೀಯ ಮತ್ತು ಅಂತಾರಾಷ್ಟ್ರೀಯ ನಿರ್ಗಮನ ವಲಯದಲ್ಲಿ ತಲಾ 180 ಚದರ ಮೀಟರ್ ಜಾಗವನ್ನು ಮಳಿಗೆ ಸ್ಥಾಪನೆಗೆ ಗುರುತಿಸಲಾಗಿದೆ.
ವಿಮಾನ ನಿಲ್ದಾಣದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಬ್ರ್ಯಾಂಡಿಂಗ್‌ಗೆ ಗಮನಹರಿಸಲಾಗುವುದು ಎಂದರು.
1 comment
[…] ರಾಜ್ಯ […]