ಬಿಜೆಪಿ ನಾಯಕರಿಗೆ ಪ್ರಧಾನಿ ಕಿವಿಮಾತು
ಬೆಂಗಳೂರು:ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಬೀದಿಗಿಳಿದು ಹೊರಾಟ ನಡೆಸಿ, ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚು ಸ್ಥಾನ ಗೆಲ್ಲಸಿ ಪಕ್ಷಕ್ಕೆ ಬಲ ತುಂಬಿ ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ನಾಯಕರಿಗೆ ಸೂಚಿಸಿದ್ದಾರೆ.
ಅಧಿಕೃತ ಕಾರ್ಯಕ್ರಮ ನಿಮಿತ್ತ ಶುಕ್ರವಾರ ರಾಜ್ಯಕ್ಕೆ ಆಗಮಿಸಿದ್ದ ಪ್ರಧಾನಿ ಅವರು, ದೆಹಲಿಗೆ ವಾಪಸಾಗುವ ಮುನ್ನ ವಿಮಾನ ನಿಲ್ದಾಣದಲ್ಲಿ ಬಿಜೆಪಿ ನಾಯಕರೊಂದಿಗೆ ಚುನಾವಣಾ ರಣತಂತ್ರ ಕುರಿತು ಚರ್ಚೆ ಮಾಡಿದ್ದಾರೆ.
ಒಗ್ಗಟ್ಟಿನಿಂದ ಹೋರಾಡಿ
ಕಳೆದ ಬಾರಿ ಕರ್ನಾಟಕದಲ್ಲಿ ಒಗ್ಗಟ್ಟಿನಿಂದ ಹೋರಾಡಿ, ಹಿಂದೆಂದಿಗಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಿ ನಮ್ಮ ಕೈ ಬಲ ಪಡಿಸಿದ್ದೀರಿ.
ಶ್ರೀಗಂಧ, ಬೀಟೆ, ತೇಗಕ್ಕೆ ಜಿಯೋ ಟ್ಯಾಗ್
ಪೂರ್ಣ ಪ್ರಮಾಣದ ಕಾಂಗ್ರೆಸ್ ಆಡಳಿತ ರಾಜ್ಯದಲ್ಲಿದ್ದು ಅವರೂ ಕರ್ನಾಟಕದಿಂದ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪ್ರಯತ್ನಿಸುವುದು ಸಹಜ, ನೀವೂ ಸಹಾ ಒಗ್ಗಟ್ಟನಿಂದ ಹೋರಾಟ ಮಾಡಿ ಕಳೆದ ಬಾರಿಗಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲು ಪ್ರಯತ್ನಿಸಿ ಎಂದಿದ್ದಾರೆ.
ವಿರೋಧಿಗಳ ವೈಯಕ್ತಿಕ ನಿಂದನೆ ಬೇಡ
ವೈಮಸ್ಯಗಳನ್ನು ಬಿಡಿ, ಚುನಾವಣೆ ಎದುರಿಸಲು ಈಗಿನಿಂದಲೇ ಸಂಘಟನಾತ್ಮಕವಾಗಿ ಹೋರಾಟ ನಡೆಸಿ, ವಿರೋಧಿಗಳನ್ನು ವೈಯಕ್ತಿಕವಾಗಿ ನಿಂದಿಸಬೇಡಿ. ಯಾವುದೇ ಜಾತಿ, ಮತ, ಧರ್ಮಗಳ ವಿರುದ್ಧ ಹೇಳಿಕೆಗಳನ್ನು ನೀಡಬೇಡಿ, ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವ ಕೆಲಸವಾಗಬೇಕು ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಮನೆ-ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದ್ದಾರೆ.
ಗುರಿ ಮುಟ್ಟಲು ಪಣ ತೊಡಿ
ನಮ್ಮಿಂದ ನಿಮಗೆ ಯಾವುದೇ ಸಹಕಾರ ನೀಡುತ್ತೇವೆ, ಅದನ್ನು ಸದುಪಯೋಗ ಪಡಿಸಿಕೊಂಡು ನೀವು ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಮುಟ್ಟಲು ಪಣ ತೊಡಿ ಎಂದಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ತಂಗಿದ್ದ ಸಂದರ್ಭದಲ್ಲೂ ಆ ಭಾಗಕ್ಕೆ ಸೇರಿದ ಪಕ್ಷದ ಮುಖಂಡರಿಗೂ ಇದೇ ಸಲಹೆ-ಸೂಚನೆಗಳನ್ನು ನೀಡಿದ್ದಾರೆ.
ರಾಮನಿಗೂ ಕರ್ನಾಟಕಕ್ಕೂ ಯುಗ-ಯುಗಾಂತರ ಸಂಬಂಧ
ವಿಮಾನ ನಿಲ್ದಾಣದಲ್ಲಿ ನಡೆದ ಸಭೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಆಹ್ವಾನವಿತ್ತು, ಆದರೆ ಅನಾರೋಗ್ಯದಿಂದಾಗಿ ಸಭೆಗೆ ಹಾಜರಾಗಲು ಆಗಲಿಲ್ಲ.
ಉಳಿದಂತೆ ವಿಧಾನಸಭೆಯಲ್ಲಿನ ಪ್ರತಿಪಕ್ಷದ ನಾಯಕ ಆರ್. ಅಶೋಕ್, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಡಿ.ವಿ. ಸದಾನಂದ ಗೌಡ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ವಿಧಾನಸಭೆ ಮತ್ತು ಪರಿಷತ್‌ನ ಕೆಲವು ಹಿರಿಯ ಸದಸ್ಯರು ಹಾಜರಿದ್ದರು.
ಸುಮಾರು 30 ರಿಂದ 40 ನಿಮಿಷಗಳ ಕಾಲ ಚುನಾವಣೆಗೆ ಸಂಬಂಧಿಸಿದಂತೆ ಪ್ರಧಾನಿ ಚರ್ಚೆ ನಡೆಸಿದ್ದಾರೆ.
2 comments
[…] ರಾಜಕೀಯ […]
[…] ರಾಜಕೀಯ […]