ಪ್ರತಿ ಮನೆಯಲ್ಲೂ ಗೃಹಲಕ್ಷ್ಮೀ
ಬೆಳಗಾವಿ: ಹೆಚ್ಚುತ್ತಿರುವ ಹೆಣ್ಣು ಭ್ರೂಣ ಹತ್ಯೆ ತಡೆಗೆ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳಕರ್ ಇಂದಿಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಆಯೋಜಿಸಿದ್ದ “ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ – 2024” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ, ಸುರಕ್ಷತೆಗೆ ಸರ್ಕಾರ ಹೆಚ್ಚಿನ ಅದ್ಯತೆ ನೀಡಿದೆ, ಪ್ರತಿ ಮನೆಯಲ್ಲೂ ಗೃಹಲಕ್ಷ್ಮೀಯಾದ ಹೆಣ್ಣು ಮಗಳು ಇರಬೇಕೆನ್ನುವುದು ಸರ್ಕಾರದ ಆಶಯವಾಗಿದೆ ಎಂದರು.
ಕರ್ನಾಟಕಕ್ಕೆ 23 ಸಾವಿರ ಕೋಟಿ ರೂ. ಬಂಡವಾಳ
ಮನುಷ್ಯ ಮನುಷ್ಯತ್ವದಿಂದ ವರ್ತಿಸಬೇಕು, ಪರಸ್ಪರ ಪ್ರೀತಿ-ವಿಶ್ವಾಸ-ಭಾತೃತ್ವದಿಂದ ಬದುಕಬೇಕು, ಸಮಾಜದಲ್ಲಿ ಜನರ ಜೀವನ, ದುಃಖ-ದುಮ್ಮಾನ, ಜೀವನದ ಸವಾಲುಗಳನ್ನು ತಂದೆ ತಾಯಿಯಂದಿರು ಮಕ್ಕಳಿಗೆ ತಿಳಿ ಹೇಳಬೇಕು.
ಜೀವನದಲ್ಲಿ ಯಶಸ್ಸು ಸಾಧಿಸಬೇಕು
ಹೆಣ್ಣು ಮಕ್ಕಳು ಬದುಕಿನಲ್ಲಿ ಹಿಂಜರಿಯಬಾರದು, ಎಲ್ಲ ಕ್ಷೇತ್ರಗಳಲ್ಲೂ ದಾಪುಗಾಲು ಹಾಕಬೇಕು, ಮೊದಲಿಗೆ ಹೆತ್ತವರಿಗೆ ಒಳ್ಳೆಯ ಹೆಸರು ತರಬೇಕು, ಜೀವನದಲ್ಲಿ ಯಶಸ್ಸು ಸಾಧಿಸಬೇಕು.
ಅದ್ದೂರಿ ಗಣರಾಜ್ಯೋತ್ಸವಕ್ಕೆ ಬೆಂಗಳೂರು ಸಿದ್ಧ
ಬದುಕಿನಲ್ಲಿ ಬರೀ ಓದು ಮುಖ್ಯವಲ್ಲ, ಬದುಕಿನ ಪಾಠವನ್ನು ಕಲಿಯಬೇಕು, ಎಲ್ಲರಿಗಿಂತ ಭಿನ್ನವಾಗಿ ಅಲೋಚನೆ ಮಾಡಬೇಕು, ಹಾಗಾದಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.
2 comments
[…] ರಾಜಕೀಯ […]
[…] ರಾಜಕೀಯ […]