ರಾಜ್ಯದ ರಾಮ ಮಂದಿರಗಳ ಪುನರುಜ್ಜೀವಕ್ಕೆ 250 ಕೋಟಿ ರೂ.
ಬೆಂಗಳೂರು:ಮುಜರಾಯಿ ಹಾಗೂ ಖಾಸಗಿ ಒಡೆತನದಲ್ಲಿರುವ ರಾಜ್ಯದ ರಾಮ ಮಂದಿರಗಳನ್ನು 250 ಕೋಟಿ ರೂ. ವೆಚ್ಚದಲ್ಲಿ ಪುನರುಜ್ಜೀವಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾಗಿ ಬಾಲರಾಮನ ಪ್ರಾಣ ಪ್ರತಿಷ್ಠೆಯಾಗುತ್ತಿದ್ದಂತೆ ಇಡೀ ರಾಷ್ಟ್ರದ ರಾಜಕಾರಣದ ಪಥವೇ ಬದಲಾಗಿದೆ.
ಹೊಸ ಕಾರ್ಯಕ್ರಮಗಳ ಘೋಷಣೆ
ಇದನ್ನರಿತ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಾವು ಬಿಜೆಪಿಗಿಂತ ಕಡಿಮೆ ಇಲ್ಲ ಎಂಬುದನ್ನು ತೋರ್ಪಡಿಸಲು ಮತ್ತೆ ಮೂರು ಹೊಸ ಕಾರ್ಯಕ್ರಮಗಳ ಘೋಷಣೆಗೆ ಮುಂದಾಗಿದೆ.
ಹೆಣ್ಣು ಭ್ರೂಣಹತ್ಯೆ ತಡೆಗೆ ಕಠಿಣ ಕ್ರಮ
ಮಠ-ಮಾನ್ಯಗಳಿಗೆ ದೇಣಿಗೆ ನೀಡಲು ಸದಾ ವಿರೋಧಿಸುತ್ತಿದ್ದ ಕಾಂಗ್ರೆಸ್ ಇದೀಗ ರಾಜ್ಯದ ಎಲ್ಲಾ ಮಠ-ಮಾನ್ಯಗಳಿಗೆ ಆರ್ಥಿಕವಾಗಿ ಶಕ್ತಿ ತುಂಬಲು ಯೋಜನೆ ರೂಪಿಸಿದೆ.
ಮುಜರಾಯಿ ವ್ಯಾಪ್ತಿಗೆ ಬರುವ ಎಲ್ಲಾ ರಾಮ ಮಂದಿರಗಳನ್ನು ನಿಗದಿತ ವೇಳೆಯಲ್ಲಿ ಜೀರ್ಣೋದ್ಧಾರಗೊಳಿಸಿ, ದಿನನಿತ್ಯ ಪೂಜೆ-ಪುನಸ್ಕಾರಗಳಿಗೆ ಒತ್ತು ನೀಡುತ್ತಿದೆ.
ಖಾಸಗಿಯವರು ರಾಮ ಮಂದಿರ ನಿರ್ಮಾಣ ಮಾಡಿ ಅವುಗಳನ್ನು ನಿರ್ಲಕ್ಷ್ಯ ಮಾಡಿದ್ದರೆ ಅಂತಹ ಮಂದಿರಗಳ ಮಾಹಿತಿಯನ್ನು ತಹಸೀಲ್ದಾರ್ ಅವರಿಂದ ಪಡೆದು ಅವುಗಳಿಗೂ ಅನುದಾನ ನೀಡಲಿದೆ.
ಯಾವ ಮಂದಿರಕ್ಕೆ ಎಷ್ಟು ಹಣ
ಈಗಾಗಲೇ ಯಾವ ಮಂದಿರಕ್ಕೆ ಎಷ್ಟು ಎಂಬ ಕ್ರಿಯಾ ಯೋಜನೆ ಸಿದ್ಧಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಫೆಬ್ರವರಿ 16 ರಂದು ಮಂಡಿಸಲಿರುವ 2024-25 ರ ಮುಂಗಡಪತ್ರದಲ್ಲಿ ಘೋಷಣೆ ಮಾಡಲಿದ್ದಾರೆ.
ಕರ್ನಾಟಕಕ್ಕೆ 23 ಸಾವಿರ ಕೋಟಿ ರೂ. ಬಂಡವಾಳ
ಇದೇ ಸಂದರ್ಭದಲ್ಲಿ ಮಠ-ಮಾನ್ಯಗಳಿಗೂ ಆರ್ಥಿಕ ನೆರವು ನೀಡುವುದನ್ನು ಘೋಷಿಸಿ, ಮತದಾರರ ಮನ ಗೆಲ್ಲಲು ಸಿದ್ದರಾಮಯ್ಯ ಹೊರಟಿದ್ದಾರೆ.
ಭಗವಾನ್ ಶ್ರೀರಾಮ್ ಎಲ್ಲರ ಆರಾಧ್ಯ ದೈವ, ಈತ ಯಾವುದೇ ಪಕ್ಷ ಅಥವಾ ಸಂಘಟನೆಗೆ ಸೀಮಿತವಲ್ಲ ಎಂದು ಕಾಂಗ್ರೆಸ್ ನಾಯಕರು ಪ್ರತಿಪಾದಿಸುತ್ತಿರುವ ಬೆನ್ನಲ್ಲೇ ಸರ್ಕಾರ ರಾಮನ ಕುರಿತು ತನ್ನ ಪ್ರೀತಿಯನ್ನು ತೋರ್ಪಡಿಸಲು ಮುಂದಾಗಿದೆ.
ಬಾಲರಾಮ ದೇವಾಲಯ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನವಿದ್ದರೂ ಅಯೋಧ್ಯೆಗೆ ಹೋಗದಿರುವುದು, ಜೊತೆಗೆ ಅಂದು ಸರ್ಕಾರ ರಜೆ ಘೋಷಣೆ ಮಾಡದಿರುವುದಕ್ಕೆ ಜನರಿಂದ ವಿರೋಧ ವ್ಯಕ್ತವಾಗಿದೆ.
ಎಲ್ಲಾ ಮಠಗಳಿಗೆ ಒಟ್ಟು 300 ಕೋಟಿ ರೂ. ವಿಶೇಷ ಅನುದಾನ
ರಾಜ್ಯದ ಎಲ್ಲಾ ಮಠಗಳ ಅಭಿವೃದ್ಧಿ, ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಶೇಷ ಅನುದಾನವಾಗಿ ಸುಮಾರು 300 ಕೋಟಿ ರೂ. ನೀಡಲು ಸಿದ್ಧತೆ ಮಾಡಿದೆ. ರಾಜ್ಯದ ವಿವಿಧ ಸಮುದಾಯಗಳ ಮಠಗಳಿಗೆ ಜಾತಿವಾರು ಜನಸಂಖ್ಯೆ ಆಧರಿಸಿ ಆರ್ಥಿಕ ನೆರವು ನೀಡಲು ರೂಪರೇಷೆ ಸಿದ್ಧಪಡಿಸಲಾಗಿದೆ.
ಅದ್ದೂರಿ ಗಣರಾಜ್ಯೋತ್ಸವಕ್ಕೆ ಬೆಂಗಳೂರು ಸಿದ್ಧ
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ವಿವಿಧ ಮಠಗಳಿಗೆ ಆರ್ಥಿಕ ನೆರವು ಘೋಷಿಸಿದ್ದರು, ಇದು ಅವರಿಗೆ ರಾಜಕೀಯವಾಗಿ ಸಾಕಷ್ಟು ಬಲ ತಂದು ಕೊಟ್ಟಿತ್ತು.
ತದನಂತರ ಮಠ-ಮಾನ್ಯಗಳಿಗೆ ಹೇಳಿಕೊಳ್ಳುವಂತಹ ಅನುದಾನ ಸರ್ಕಾರದಿಂದ ದೊರೆಯಲಿಲ್ಲ. ಅಯೋಧ್ಯೆಯ ಬಿರುಗಾಳಿ ಹೊಡೆತದಿಂದ ತಪ್ಪಿಸಿಕೊಂಡು ಲೋಕಸಭಾ ಚುನಾವಣೆ ಎದುರಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಠ ಮತ್ತು ರಾಮ ಜಪಕ್ಕೆ ಮುಂದಾಗಿದೆ.
1 comment
[…] All ರಾಜಕೀಯ Special Story […]