ಬಾಲ ರಾಮ ದೇವರ ಗರ್ಭ ಗುಡಿಗೆ ಬಂದಿದ್ದ ಕೋತಿ!
ಅಯೋಧ್ಯೆ: ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಿರುವ ರಾಮಮಂದಿರದಲ್ಲಿ ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಾದ ಮರು ದಿನವೇ ದೇವಾಲಯದಲ್ಲಿ ಅವಿಸ್ಮರಣೀಯವಾದ ಘಟನೆ ಜರುಗಿದೆ. ಶ್ರೀರಾಮನ ಪರಮ ಭಕ್ತ ಹನುಮಂತನ ಸ್ವರೂಪವೇ ಎಂದು ಭಾವಿಸಲಾಗಿರುವ ಕೋತಿಯು ದೇವಾಲಯ ಪ್ರವೇಶ ಮಾಡಿದೆ.
ಈ ಘಟನೆಯು ಶ್ರೀರಾಮ ದೇವರ ಭಕ್ತರಲ್ಲಿ ಭಕ್ತಿಯನ್ನು ಇಮ್ಮಡಿಗೊಳಿಸಿದೆ. ಜನವರಿ 22ರಂದು ಮಂದಿರದಲ್ಲಿ ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಾಗಿದ್ದರೆ; ಜನವರಿ 23ರಂದು ಕೋತಿಯ ಪ್ರವೇಶವಾಗಿದೆ. ಇದು ಭದ್ರತಾ ಸಿಬ್ಬಂದಿ ಮತ್ತು ಭಕ್ತರಲ್ಲಿ ಆಶ್ಚರ್ಯ ಮಿಶ್ರಿತ ಭಕ್ತಿಯನ್ನು ಹೆಚ್ಚಿಸಿದೆ.
ಮಂದಿರಕ್ಕೆ ಕೋತಿ ಪ್ರವೇಶ ಮಾಡಿದ್ದರೂ ಭದ್ರತಾ ಸಿಬ್ಬಂದಿಗಾಗಲಿ, ಭಕ್ತರಿಗಾಗಲಿ, ಮತ್ಯಾರಿಗೂ ಯಾವುದೇ ರೀತಿಯ ತೊಂದರೆ ಮಾಡದೇ ಶಾಂತವಾಗಿಯೇ ದೇವಾಲಯದಿಂದ ಹೊರ ಹೋಗಿದೆ ಇದೊಂದು ಅವಿಸ್ಮರಣೀಯವಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.
ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ವಿಚಾರವನ್ನು ಟ್ರಸ್ಟ್ ಹಂಚಿಕೊಂಡಿದೆ. ಕೋತಿ ಮಂದಿರಕ್ಕೆ ಬಂದು ಹೋಗಿರುವುದನ್ನು ನೋಡಿದರೆ ‘ಬಾಲರಾಮನ ದರ್ಶನಕ್ಕಾಗಿ ಶ್ರೀರಾಮನ ಪರಮ ಭಕ್ತನಾದ ಹನುಮಂತ ಬಂದಿರುವಂತೆ ಭಾಸವಾಗಿರುವುದಾಗಿ ಮಂದಿರದ ಭದ್ರತೆಗೆ ನಿಯೋಜಿತರಾಗಿರುವ ಸಿಬ್ಬಂದಿ ಹೇಳಿದ್ದಾರೆ. ಮಂದಿರದೊಳಗೆ ಕೋತಿಯೊಂದು ಬಂದು ಹೋಗಿರುವ ಘಟನೆಯು ಜನವರಿ 23ರ ರಾತ್ರಿ ಜರುಗಿದೆ’ ಎಂದು ಟ್ರಸ್ಟ್ ತಿಳಿಸಿದೆ.
ಕರ್ನಾಟಕಕ್ಕೆ 23 ಸಾವಿರ ಕೋಟಿ ರೂ. ಬಂಡವಾಳ
ಎಲ್ಲರಿಗೂ ತಿಳಿದಿರುವವಂತೆ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯು ಜನವರಿ 22ರಂದು ಮಧ್ಯಾಹ್ನ ಸಂಪನ್ನಗೊಂಡಿದೆ. ಜನವರಿ 23ರ ಸಂಜೆ ಕೋತಿಯೊಂದು ದಕ್ಷಿಣದ ಕಡೆಯಿಂದ ಪ್ರವೇಶ ಮಾಡಿದೆ. ಮಂದಿರಕ್ಕೆ ಬಂದ ಕೂಡಲೇ ನೇರವಾಗಿ ಗರ್ಭಗುಡಿ ತಲುಪಿದೆ.
ಬಳಿಕ ಗರ್ಭಗುಡಿಯಲ್ಲಿದ್ದ ಉತ್ಸವ ಮೂರ್ತಿ ಬಳಿ ಕೆಲ ಕಾಲ ಕುಳಿತಿದೆ. ಭದ್ರತಾ ಸಿಬ್ಬಂದಿ ಗಾಬರಿಯಾಗಿ ಜಾಗೃತರಾಗುವುದನ್ನು ಗಮನಿಸಿದ ಕೋತಿಯು, ಶಾಂತವಾಗಿಯೇ ಪೂರ್ವದ ಬಾಗಿಲ ಮೂಲಕ ಹೊರಗೆ ಹೋಗಿದೆ ಎಂದು ಟ್ರಸ್ಟ್ ಹೇಳಿದೆ.
ಪ್ರಾಣ ಪ್ರತಿಷ್ಠಾಪನೆ ಬೆನ್ನಲ್ಲೇ ಬಾಲರಾಮನ ದರ್ಶನ ಪಡೆಯಲು ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದರು. ಆ ಭಕ್ತರ ನಡುವೆಯೇ ಕೋತಿ ಹೋಗಿದ್ದರೂ ಯಾರಿಗೂ ಯಾವ ತೆರನಾದ ತೊಂದರೆಯನ್ನು ಉಂಟು ಮಾಡಿಲ್ಲ. ಹೀಗಾಗಿ ಬಾಲರಾಮನ ದರ್ಶನ ಪಡೆಯಲು ಸಾಕ್ಷಾತ್ ರಾಮನ ಭಕ್ತ ಹನುಮಂತನೇ ಬಂದಿರಬೇಕು ಎಂದು ಭಾವಿಸಿ ಭದ್ರತಾ ಸಿಬ್ಬಂದಿ ಸಂಭ್ರಮಿಸಿದ್ದಾರೆ ಎಂದು ಟ್ರಸ್ಟ್ ತಿಳಿಸಿದೆ.
ಹೆಣ್ಣು ಭ್ರೂಣಹತ್ಯೆ ತಡೆಗೆ ಕಠಿಣ ಕ್ರಮ
ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಗೂ ಮುಂಚೆ ರಾಮಲಲ್ಲಾನ ಪುಟ್ಟ ಮೂರ್ತಿಯನ್ನು ಪೂಜಿಸಲಾಗುತ್ತಿತ್ತು. ಆ ಮೂರ್ತಿಯನ್ನು ಉತ್ಸವ ಮೂರ್ತಿ ಎಂದು ಕರೆಯಲಾಗುತ್ತಿದ್ದು, ಅದನ್ನೂ ಮಂದಿರದ ನೂತನ ಗರ್ಭಗುಡಿಯಲ್ಲಿರಸಲಾಗಿದೆ.
3 comments
[…] ರಾಷ್ಟ್ರ […]
[…] ರಾಷ್ಟ್ರ […]
[…] ರಾಷ್ಟ್ರ […]