ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಗೂಡಿಗೆ
ಬೆಂಗಳೂರು: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ನಿರಾಕರಣೆಯಿಂದ ಬೇಸತ್ತು ಪಕ್ಷ ತೊರೆದಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿಗೆ ಹಿಂದಿರುಗಿದ್ದಾರೆ.
ಕಳೆದ ಮೂರು ವಾರಗಳಿಂದ ತೆರೆಮರೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ನಡೆಸಿದ ಆಪರೇಷನ್ ಫಲಪ್ರದವಾಗಿದೆ.
ಶೆಟ್ಟರ್ ಹಾದಿಯಲ್ಲೇ ಮಾಜಿ ಉಪ ಮುಖ್ಯಮಂತ್ರಿ ಲಕ್ಮಣ ಸವದಿ, ಗಣಿಧಣಿ ಹಾಗೂ ಶಾಸಕ ಜನಾರ್ಧನರೆಡ್ಡಿ ಸೇರಿದಂತೆ ಇನ್ನೂ ಹಲವು ಮುಖಂಡರು ಕಮಲದ ಕೈ ಹಿಡಿಯುವ ಹಾದಿಯಲ್ಲಿದ್ದಾರೆ.
ಲೋಕಾ ಚುನಾವಣೆಗೂ ಮುನ್ನ ದೊಡ್ಡ ರಾಜಕೀಯ ಬೆಳವಣಿಗೆ
ಕಾಂಗ್ರೆಸ್ ಸರ್ಕಾರದ ಬುಡ ಅಲ್ಲಾಡಿಸಲಿರುವ ಬಿಜೆಪಿ ವರಿಷ್ಠರು
ಶೆಟ್ಟರ್ ನಂತರ ಸವದಿ ಸೇರಿದಂತೆ ಕೆಲವು ಮುಖಂಡರು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಂತೆ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಬುಡವನ್ನು ಅಲ್ಲಾಡಿಸಲು ಬಿಜೆಪಿ ವರಿಷ್ಠರು ಮುಂದಾಗಲಿದ್ದಾರೆ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿ ಮತ್ತು ಜೆಡಿಎಸ್ ಶಾಸಕರನ್ನು ಸೆಳೆಯಲು ಮುಂದಾದ ಬೆನ್ನಲ್ಲೇ ಅವರ ಕಟ್ಟಾ ವಿರೋಧಿಗಳಾದ ಕುಮಾರಸ್ವಾಮಿ ಮತ್ತು ಜಾರಕಿಹೊಳಿ ಅವರಿಬ್ಬರೂ ಕೈಜೋಡಿಸಿ ರಾಜಕೀಯ ನಾಯಕರ ಆಪರೇಷನ್ ಗೆ ಇಳಿದಿದ್ದಾರೆ.
ಪ್ರೀತಿಯ ಹೂಮಳೆಯಲ್ಲಿ ಮುಳುಗಿಸಿದರು
ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣಪ್ರತಿಷ್ಠಾಪನೆಯ ಸಮಾರಂಭ ಮುಗಿಯುತ್ತಿದ್ದಂತೆ ಕಳೆದ ಜನವರಿ 23ರ ಕುಮಾರಸ್ವಾಮಿ ಹಾಗೂ ಜಾರಕಿಹೊಳ್ಳಿ ಅವರು ಶೆಟ್ಟರ್ ಅವರನ್ನು ದೆಹಲಿಗೆ ಕರೆದುಕೊಂಡು ತೆರಳಿದ್ದರು.
ಗೌಪ್ಯವಾಗಿಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿಸಿ ಕುಮಾರಸ್ವಾಮಿ ಅವರು ಜನವರಿ 24ರ ರಾತ್ರಿ ನಗರಕ್ಕೆ ಮರಳಿದ್ದರು.
ರಾಜಕೀಯ ಬೆಳವಣಿಗೆ ಅರಿಯದ ಕಾಂಗ್ರೆಸ್ ನಾಯಕರು
ಶೆಟ್ಟರ್ ದೆಹಲಿಗೆ ಧಾವಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ , ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ತೇಜಸ್ವಿ ಸೂರ್ಯ ಹಾಗೂ ಮಾಜಿ ಕೇಂದ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರನ್ನು ಜನವರಿ 24ರ ತಡರಾತ್ರಿ ದೆಹಲಿಗೆ ಕರೆಸಿಕೊಂಡ ಬಿಜೆಪಿ ನಾಯಕರು, ಕಾಂಗ್ರೆಸ್ ನಾಯಕರಿಗೆ ಏನಾಗುತ್ತಿದೆ ಎಂದು ತಿಳಿಯುವ ಮುನ್ನವೇ ಶೆಟ್ಟರ್ ಬಿಜೆಪಿ ಕಚೇರಿಗೆ ಧಾವಿಸಿದ್ದರು.
ಇತ್ತೀಚಿನವರೆಗೂ ಬಿಜೆಪಿಯನ್ನು ಟೀಕಿಸುತ್ತಿದ್ದ ಶೆಟ್ಟರ್, ಜನವರಿ 25ರ ಬೆಳಿಗ್ಗೆ ನಡ್ಡಾ ಅವರನ್ನು ಭೇಟಿಯಾದ ನಂತರ, ಕೇಂದ್ರ ಸಚಿವ ಹಾಗೂ ಚಾಣಾಕ್ಯ ರಾಜಕಾರಣಿ ಎಂದೆನಿಸಿಕೊಂಡಿರುವ ಭೂಪೇಂದ್ರಯಾದವ್ ಹಾಗೂ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರೊಂದಿಗೆ ಬಿಜೆಪಿ ಕಚೇರಿಗೆ ಆಗಮಿಸಿದ ಶೆಟ್ಟರ್, ಅಧಿಕೃತವಾಗಿ ಕಮಲವನ್ನು ಸೇರಿದರು.
ಮೇಲ್ಮನೆ ಮತ್ತು ಕಾಂಗ್ರಸ್ ಸದಸ್ಯತ್ವಕ್ಕೆ ಶೆಟ್ಟರ್ ಇ- ಮೇಲ್ ಮೂಲಕ ರಾಜೀನಾಮೆ
ಬಿಜೆಪಿ ಸೇರ್ಪಡೆಗೂ ಮುನ್ನ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ಪ್ರತ್ಯೇಕ ರಾಜೀನಾಮೆ ಪತ್ರಗಳನ್ನು ಇ- ಮೇಲ್ ಮೂಲಕ ಕಳುಸಿದ್ದರು.
ಅಷ್ಟೇ ಅಲ್ಲ, ಸಭಾಪತಿ ಅವರನ್ನು ಸಂಪರ್ಕಿಸಿ ತಮ್ಮ ವಿಧಾನ ಪರಿಷತ್ ಸದಸ್ಯತ್ವದ ರಾಜೀನಾಮೆ ಅಂಗೀಕರಿಸುವಂತೆ ಮನವಿ ಮಾಡಿಕೊಂಡರು. ಕಾಂಗ್ರೆಸ್ ಗೆ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಆ ಪಕ್ಷದ ಯಾವ ಮುಖಂಡರೊಂದಿಗೆ ಶೆಟ್ಟರ್ ಮಾತನಾಡಲಿಲ್ಲ.
ಡಿ.ಕೆ.ಶಿವಕುಮಾರ್ – ಲಕ್ಷ್ಮಣ ಸವದಿ ಮಾತುಕತೆ
ಹಠಾತ್ ನಡೆದ ಬೆಳವಣಿಗೆಯಲ್ಲಿ ಶೆಟ್ಟರ್ ಬಿಜೆಪಿ ಸೇರುತ್ತಿದ್ದಂತೆ ಎಚ್ಚೆತ್ತ ಡಿ.ಕೆ.ಶಿವಕುಮಾರ್ ಅವರು, ಲಕ್ಷ್ಮಣ ಸವದಿ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಚರ್ಚಿಸಿದರು.
ಇದೇ ಸಂದರ್ಭದಲ್ಲಿ ಜನಾರ್ಧನರೆಡ್ಡಿ ಸೇರಿದಂತೆ ಎರಡೂ ಕಡೆ ಪಾದ ಇಟ್ಟಿರುವ ಕೆಲವು ನಾಯಕರನ್ನು ಸಂಪರ್ಕಿಸಿ ಪ್ರಸಕ್ತ ರಾಜಕೀಯ ಬೆಳವಣಿಗೆ ಚರ್ಚಿಸಿದಲ್ಲದೆ, ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.
ಓಪಿಎಸ್ ಜಾರಿ ಹಿಂದೆ ಕಾಂಗ್ರೆಸ್ ಸರ್ಕಾರದ ರಾಜಕೀಯ ಹಿತಾಸಕ್ತಿ
ಬಿಜೆಪಿ ಸೇರ್ಪಡೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ರಾಷ್ಟ್ರದ ಭವಿಷ್ಯದ ದೃಷ್ಟಿಯಿಂದ ಮರಳಿ ಬಿಜೆಪಿಗೆ ಬಂದಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ನಮ್ಮೆಲ್ಲ ಕಾರ್ಯಕರ್ತರ ಅಪೇಕ್ಷೆಯಂತೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಮರುಸೇರ್ಪಡೆ ಆಗಿದ್ದಾರೆ.
ಜಗದೀಶ್ ಶೆಟ್ಟರ್ ಅವರು ಪಕ್ಷದ ಅನೇಕ ಜವಾಬ್ದಾರಿ ವಹಿಸಿದ್ದವರು. ಮುಖ್ಯಮಂತ್ರಿಯಾಗಿದ್ದವರು. ಶೆಟ್ಟರ್ ಸೇರ್ಪಡೆಯಿಂದ ಬಿಜೆಪಿಗೆ ಹೆಚ್ಚು ಶಕ್ತಿ ಬಂದಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ 28ರಲ್ಲಿ 25ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ತಿಳಿಸಿದರು.
ಬಾಲ ರಾಮ ದೇವರ ಗರ್ಭ ಗುಡಿಗೆ ಬಂದಿದ್ದ ಕೋತಿ!
2 comments
[…] Special Story […]
[…] ವಿಶ್ಲೇಷಣೆ […]