ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : ಇಲ್ಲ
ಅಮೃತ ಘಳಿಗೆ : ಬೆಳಿಗ್ಗೆ 10 : 17 – 11 : 49
ಬುಧವಾರ, 6 ಮಾರ್ಚ್ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಮಾಘ
ಪಕ್ಷ : ಕೃಷ್ಣ
ತಿಥಿ : ಏಕಾದಶಿ
ನಕ್ಷತ್ರ : ಪೂರ್ವಾಷಾಢ
ಯೋಗ : ವ್ಯತೀಪಾತ
ಕರಣ : ಭವ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 32
ಸೂರ್ಯಾಸ್ತ : ಸಂಜೆ 06 : 29
ರಾಹುಕಾಲ : 12 : 31 – 02: 00
ಯಮಗಂಡ ಕಾಲ : 08 : 02 – 09: 32
ಗುಳಿಕಕಾಲ : 11 : 01 – 12 : 31
ರಾಶಿ ಫಲ
ಮೇಷ : ಮೇಲಾಧಿಕಾರಿಗಳಿಂದ ಸಲಹೆ ಪಡೆಯುತ್ತೀರಿ. ಆತ್ಮವಿಶ್ವಾಸದ ಕೊರತೆ ಕಂಡುಬರಲಿದೆ. ಬೇರೆಯವರಿಗೆ ಸಲಹೆ ನೀಡುವುದು ಸೂಕ್ತವಲ್ಲ.
ವೃಷಭ : ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಪ್ರೇಮಿಗಳಲ್ಲಿ ಮನಃಸ್ತಾಪ ಉಂಟಾಗಬಹುದು. ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನವಿರಲಿ.
ಮಿಥುನ : ಪೂರ್ವಿಕರ ಆಸ್ತಿಯಿಂದ ಲಾಭ ದೊರೆಯಲಿದೆ. ಕುಟುಂಬದಲ್ಲಿ ಸಂತೋಷ ನೆಲೆಸಲಿದೆ. ಸಮಯಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸುತ್ತೀರಿ.
ಕಟಕ : ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ರುಚಿಯಾದ ಭೋಜನ ಸವಿಯುವ ಅವಕಾಶವಿದೆ. ತರ್ಕ ಮಾಡುವುದನ್ನು ತಪ್ಪಿಸಿ.
ಸಿಂಹ : ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಶುಭವಾಗಲಿದೆ. ಹಣಕಾಸಿನ ಸಮಸ್ಯೆ ದೂರವಾಗಲಿದೆ. ದೇವಾಲಯಗಳಿಗೆ ಭೇಟಿ ನೀಡಬಹುದು.
ಕನ್ಯಾ : ಅಧಿಕ ರಕ್ತದೊತ್ತಡ ಕಂಡುಬರುವ ಸಾಧ್ಯತೆ ಇದೆ. ತಾಯಿಯ ಆರೋಗ್ಯದ ಬಗ್ಗೆ ಗಮನವಿರಲಿ. ಹಿತಶತ್ರುಗಳು ಅಧಿಕವಾಗಲಿದ್ದಾರೆ.
ತುಲಾ : ಖರ್ಚಿನ ಮೇಲೆ ನಿಯಂತ್ರಣವಿರಲಿ. ಹಳೆಯ ವಿಚಾರಗಳು ಸಮಸ್ಯೆಗಳಾಗಿ ಕಾಡಬಹುದು. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ.
ವೃಶ್ಚಿಕ : ವ್ಯಾಪಾರದಲ್ಲಿ ವಿಶೇಷ ಲಾಭವುಂಟು. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಸೋಮಾರಿತನದಿಂದ ಕೆಲಸ ಹದಗೆಡಲಿದೆ.
ಧನಸ್ಸು : ಮನೆಗೆ ಅತಿಥಿಗಳ ಆಗಮನವಾಗಬಹುದು. ಕುಟುಂಬದ ಜವಾಬ್ದಾರಿಗಳು ಅಧಿಕವಾಗಲಿವೆ. ಆರ್ಥಿಕ ವ್ಯವಹಾರದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವಿರಿ.
ಮಕರ : ಆಯಾಸ ಕಂಡುಬರಲಿದೆ. ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ಕೆಲಸದಲ್ಲಿ ತೊಂದರೆ ಕಾಡಬಹುದು.
ಕುಂಭ : ಬುದ್ಧಿವಂತ ಜನರ ಸಹವಾಸ ಮಾಡುತ್ತೀರಿ. ಮಕ್ಕಳ ಅಭಿವೃದ್ಧಿಯ ಬಗ್ಗೆ ಚಿಂತಿತರಾಗುವಿರಿ. ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ.
ಮೀನ : ದೇವರ ಕಾರ್ಯಗಳಲ್ಲಿ ನಿರತರಾಗುತ್ತೀರಿ. ಅನ್ಯರಿಗೆ ಉಪಕಾರ ಮಾಡುವ ಗುಣ ಬೆಳೆಸಿಕೊಳ್ಳುವಿರಿ. ಆರ್ಥಿಕ ಲಾಭ ಕಂಡುಬರಲಿದೆ.