ಬಿಜೆಪಿ- ಜೆಡಿಎಸ್ ಮುಖಂಡರು ಭಾಗಿ
ಬೆಂಗಳೂರು:ಬಿಜೆಪಿ-ಜೆಡಿಎಸ್ ಮೈತ್ರಿ ನಂತರ ಉಭಯ ಪಕ್ಷಗಳ ಕಾರ್ಯಕರ್ತರ ನಡುವಿನ ಗೊಂದಲ ನಿವಾರಿಸಲು ಮಾರ್ಚ್ 29 ರಂದು ಜಂಟಿಯಾಗಿ ಮುಖಂಡರ ಸಭೆ ಕರೆದಿದ್ದಾರೆ.
ಉತ್ತರ ಕರ್ನಾಟಕಕ್ಕಿಂತ ಹಳೆ ಮೈಸೂರು ಭಾಗದಲ್ಲಿ ಇರುವ ಗೊಂದಲವನ್ನು ನಿವಾರಿಸುವ ಉದ್ದೇಶದಿಂದ ಉಭಯ ಪಕ್ಷಗಳ ನಾಯಕರು ಇಂತಹ ತೀರ್ಮಾನ ಕೈಗೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಆ ಪಕ್ಷದ ಮುಖಂಡರು, ಜೆಡಿಎಸ್‌ನಿಂದ ಎಚ್.ಡಿ.ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಸೇರಿದಂತೆ ಹಲವು ನಾಯಕರು ಸಭೆ ನಡೆಸಲಿದ್ದಾರೆ.
ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಜಂಟಿಯಾಗಿ ಕರೆದಿರುವ ಈ ಸಭೆಯಲ್ಲಿ ಪ್ರತಿ ಜಿಲ್ಲೆಯಿಂದ ಉಭಯ ಪಕ್ಷಗಳ ತಲಾ ಇಬ್ಬರು ನಾಯಕರಿಗೆ ಆಹ್ವಾನ ನೀಡಲಾಗಿದೆ.
ತುಮಕೂರಿನಲ್ಲಿ ನಿನ್ನೆ ಮಾಜಿ ಸಚಿವ ವಿ.ಸೋಮಣ್ಣ ಅವರ ಪ್ರಚಾರ ವೇದಿಕೆಯಲ್ಲೇ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ನಡುವೆ ನಡೆದ ವಾಗ್ವಾದ ಹಾಗೂ ಮಂಡ್ಯ ಮತ್ತು ಹಾಸನ ಜಿಲ್ಲೆಯಲ್ಲಿ ಬಿಜೆಪಿ ನಾಯಕರಲ್ಲಿರುವ ಅಸಮಾಧಾನದ ಬೆನ್ನಲ್ಲೇ ಈ ಸಭೆ ಕರೆಯಲಾಗಿದೆ.
ಕಾಂಗ್ರೆಸ್ ಕಪಾಳಕ್ಕೆ ಜನ ಹೊಡೆಯುತ್ತಾರೆ
ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡುವ ಉದ್ದೇಶದಿಂದ ನಾವು ಕರ್ನಾಟಕದಲ್ಲಿ 28 ಕ್ಕೆ 28 ಕ್ಷೇತ್ರಗಳನ್ನೂ ಗೆಲ್ಲಲೇ ಬೇಕು, ಇದಕ್ಕಾಗಿ ನಮ್ಮಲ್ಲಿರುವ ವೈಮನಸ್ಸನ್ನು ಹೋಗಲಾಡಿಸಿ, ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡಬೇಕು.
ಮೈತ್ರಿ ಧರ್ಮ ಪಾಲನೆ ಮಾಡುವಂತೆ ರಾಜ್ಯ ನಾಯಕರಿಂದ ಉಭಯ ಪಕ್ಷಗಳ ಕಾರ್ಯಕರ್ತರಿಗೆ ಸ್ಪಷ್ಟ ಸೂಚನೆ ಸಭೆಯಲ್ಲಿ ನೀಡಲಿದ್ದಾರೆ.
ಮೈತ್ರಿಯಲ್ಲಿ ಚ್ಯುತಿ ಬಂದರೆ ಅಥವಾ ನೀವು ಕಾರ್ಯಕರ್ತರು ಅಪಸ್ವರ ಎತ್ತಿದರೆ, ಅದನ್ನು ಕಾಂಗ್ರೆಸ್ ರಾಜಕೀಯವಾಗಿ ಲಾಭ ಪಡೆಯುತ್ತದೆ.
ದೇವೇಗೌಡರ ಮಗ-ಮೊಮ್ಮಗ ಲೋಕಾ ಕಣಕ್ಕೆ
ಆ ಪಕ್ಷದ ಮುಖಂಡರು ಇದನ್ನೇ ಬಂಡವಾಳ ಮಾಡಿಕೊಂಡು ನಿಮ್ಮನ್ನು ಖರೀದಿ ಮಾಡುವ ಯತ್ನ ನಡೆದಿರುವುದೂ ನಮ್ಮ ಗಮನಕ್ಕೆ ಬಂದಿದೆ.ಜನ ಮೋದಿ ಪರ ಇದ್ದಾರೆ, ನೀವು ಕಾಂಗ್ರೆಸ್ ಮುಖಂಡರ ಆಮಿಷಗಳಿಗೆ ಬಲಿಯಾಗಬೇಡಿ, ನಮ್ಮಲ್ಲಿ ಯಾರೇ ಅಭ್ಯರ್ಥಿಯಾಗಿದ್ದರೂ ನಿಮ್ಮ ವೈಮನಸ್ಸು ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಿ.
ವೈಯಕ್ತಿಕ ವಿಚಾರಗಳಿಗೆ ಪ್ರಾಮುಖ್ಯತೆ ನೀಡಬೇಡಿ, ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸುವ ವಿಷಯದಲ್ಲಿ ಪ್ರಾಮಾಣಿಕವಾಗಿರಿ ಎಂದು ಜಿಲ್ಲಾ ಮುಖಂಡರಿಗೆ ನಾಯಕರು ಸ್ಪಷ್ಟ ಸಂದೇಶ ನೀಡಲಿದ್ದಾರೆ.
ಡಿ.ಕೆ.ಸುರೇಶ್ ಉಡುಗೊರೆ: ತನಿಖೆಗೆ ಕೇಂದ್ರ ಚುನಾವಣಾ ಆಯೋಗ ಸೂಚನೆ
ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಇಬ್ಬರೂ ಒಂದೇ ನಿಲುವನ್ನು ಹೊಂದಿ ಚುನಾವಣಾ ಹೋರಾಟ ನಡೆಸುತ್ತೇವೆ, ಈ ಸರ್ಕಾರದ ವೈಫಲ್ಯಗಳೇ ನಮಗೆ ಅಸ್ತ್ರ, ಅವುಗಳನ್ನು ನೀವು ಜನತೆಗೆ ಮುಟ್ಟಿಸಿ.
ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಈಗಾಗಲೇ ಒಂದು ಸುತ್ತಿನ ಪ್ರಚಾರ ಮುಗಿಸಿರುವ ಜೊತೆಗೆ ಮತದಾರರಿಗೆ ಉಡುಗೊರೆಗಳನ್ನು ಮನೆ ಬಾಗಿಲಿಗೆ ತಲುಪಿಸಿದೆ.
ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡು ದಬ್ಬಾಳಿಕೆಯಲ್ಲಿ ಚುನಾವಣೆ ನಡೆಸಲು ಮುಂದಾಗಿದೆ.
ನೀವು ಒಂದಾಗಿ ಹೋರಾಟ ನಡೆಸಿದರೆ ಇಂತಹ ದಬ್ಬಾಳಿಕೆ ನಡೆಯುವುದಿಲ್ಲ, ಈಗಾಗಲೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರು ಇಂತಹ ದಬ್ಬಾಳಿಕೆಯನ್ನು ಮೆಟ್ಟಿ ನಿಂತಿದ್ದಾರೆ, ಇದೇ ಉಳಿದ ಕ್ಷೇತ್ರಗಳಲ್ಲೂ ಒಗ್ಗಟ್ಟಿನಿಂದ ಎದುರಿಸಿ ಎಂಬ ಸಂದೇಶವನ್ನು ನೀಡಲಿದ್ದಾರೆ.
1 comment
[…] Special Story […]