ಕರ್ನಾಟಕದ ಯೋಜನೆಯ ಕಡತಕ್ಕೆ ಮೊದಲ ಸಹಿ ಹಾಕಿದ ಹೆಚ್ ಡಿಕೆ
ನವದೆಹಲಿ: ನೆನೆಗುದಿಗೆ ಬಿದ್ದಿದ ಕುದುರೆ ಮುಖ ಕಬ್ಬಿಣದ ಅದಿರು ಕಂಪನಿಯನ್ನು ಪುನಶ್ಚೇತನಗೊಳಿಸುವ ಸಂಬಂಧ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಚಾಲನೆ ನೀಡಿದ್ದಾರೆ.
ಅಧಿಕಾರ ವಹಿಸಿಕೊಂಡ ಎರಡೇ ದಿನದಲ್ಲಿ ಬೃಹತ್ ಉದ್ದಿಮೆಗೆ ಸಂಬಂಧಿಸಿದ ಕಡತಕ್ಕೆ ಸಹಿ ಹಾಕಿದ್ದಾರೆ. ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದು ಧೂಳು ಹಿಡಿದಿದ್ದ ಕಡತವನ್ನು ತೆಗೆಸಿ ಸಹಿ ಹಾಕುವುದಲ್ಲದೆ, ಕೇಂದ್ರ ಸಂಪುಟದ ಮುಂದೆ ಇಟ್ಟಿದ್ದಾರೆ.
ಕುದುರೆಮುಖ ಕಬ್ಬಿಣ ಅದಿರು ಕಂಪನಿಗೆ ಅಗತ್ಯವಾದ ಅದಿರು ತೆಗೆಯಯವ ದೇವದಾರಿ ಕಬ್ಬಿಣ ಅದಿರು ಗಣಿಗಾರಿಕೆ ಯೋಜನೆಗೆ ಇಲಾಖೆ ವತಿಯಿಂದ ಅನುಮತಿ ದೊರಕಿಸಿದ್ದಾರೆ.
ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ಉದ್ದೇಶಿತ ದೇವದಾರಿ ಕಬ್ಬಿಣ ಅದಿರು ಗಣಿಗಾರಿಕೆ ಯೋಜನೆ ಇದಾಗಿದೆ.
ಉದ್ಯೋಗ ಭವನದ ಉಕ್ಕು ಸಚಿವಾಲಯದ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಹೆಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕಕ್ಕೆ ಸಂಬಂಧಿಸಿದ ಮೊದಲ ಕಡತಕ್ಕೆ ಸಹಿ ಹಾಕಿದ್ದಾರೆ.
ದೇವದಾರಿ ಕಬ್ಬಿಣ ಅದಿರು ಗಣಿಗಾರಿಕೆ ಯೋಜನೆಗೆ ಸಂಬಂಧಿಸಿದ ಕಡತಕ್ಕೆ ಸಹಿ ಹಾಕಿರುವುದಾಗಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಉದ್ದೇಶಿತ ಈ ಯೋಜನೆಗೆ ಲಕರ್ನಾಟಕ ಸರ್ಕಾರ ಕೂಡ ಒಪ್ಪಿಗೆ ಕೊಡಬೇಕು. ಈ ಕಡತ ಕೇಂದ್ರದ ಹಣಕಾಸು ಇಲಾಖೆ ಅನುಮೋದನೆಗೆ ಹೋಗಬೇಕಾಗಿದ್ದು, ಅದಕ್ಕೆ ಮುನ್ನ ಕಡತಕ್ಕೆ ಸಹಿ ಹಾಕಿದ್ದಾರೆ.
ಕುದುರೆಮುಖ ಕಬ್ಬಿಣ ಅದಿರು ಕಂಪನಿ KIOCL Limited ಜಾರಿ ಮಾಡಲಿರುವ ಯೋಜನೆ ಆಗಿದೆ.
ಬೃಹತ್ ಕೈಗಾರಿಕಾ ಇಲಾಖೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಆಟೋ ಮೊಬೈಲ್, ಮುಖ್ಯವಾಗಿ ವಿದ್ಯುತ್ ಚಾಲಿತ ವಾಹನಗಳನ್ನು ಉತ್ತೇಜಿಸುವ ಬಗ್ಗೆ ಸಚಿವರು ಚರ್ಚಿಸಿದರು.
ಪೆಟ್ರೋಲ್, ಡೀಸೆಲ್ ವಾಹನಗಳು ಅಗ್ಗ, ಎಲೆಕ್ಟ್ರಿಕ್ ವಾಹನಗಳು ದುಬಾರಿ. ಎಲೆಕ್ಟ್ರಿಕ್ ವಾಹನ ಖರೀದಿಗೆ ಹೆಚ್ಚು ಪ್ರೋತ್ಸಾಹ ಕೊಡಬೇಕಿದೆ ಎಂದು ಅಧಿಕಾರಿಗಳು ಸಲಹೆ ಮಾಡಿದರು.
ಉದ್ಯೋಗ ಸೃಷ್ಟಿ, ಉತ್ಪಾದನೆ ಪ್ರಮಾಣ ಹೆಚ್ಚಳ, ಉದ್ಯೋಗ ವಲಯದಲ್ಲಿ ಅವಕಾಶಗಳ ಹೆಚ್ಚಿಸುವ ಮಾಹಿತಿ ವಿನಿಮಯ ಮಾಡಿಕೊಂಡ ಸಚಿವರು, ಸಂಪುಟದ ಅನುಮೋದನೆ ಬೇಕಿರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
Telsa ಭಾರತಕ್ಕೆ ಬರುವುದಕ್ಕೆ ಒಲವು ತೋರಿದೆ, ಕೆಲ ರಿಯಾಯಿತಿಗಳನ್ನು ಕೇಳಿದೆ. ಅದಕ್ಕೆ ಅಗತ್ಯವಾದ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಎಂದು ಸಚಿವರಿಗೆ ಮಾಹಿತಿ ನೀಡಿದ ಅಧಿಕಾರಿಗಳು.
ತುಮಕೂರು ಇಂಡಿಸ್ಟ್ರಿಲ್ ಪಾರ್ಕ್, ಹೆಚ್ ಎಂಟಿ ಕಾರ್ಖಾನೆ ಪರಿಸ್ಥಿತಿ ಸೇರಿದಂತೆ ದೇಶಾದ್ಯಂತ ಇರುವ ರೋಗಗ್ರಸ್ತ, ಸುಸ್ಥಿತಿಯಲ್ಲಿ ನಡೆಯುತ್ತಿರುವ ಘಟಕಗಳ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವರು, ಸಾರ್ವಜನಿಕ ಸ್ವಾಮ್ಯದ ಉದ್ಯಮಿಗಳ ಮುಖ್ಯಸ್ಥರ ಸಭೆ ಶೀಘ್ರವೇ ಕರೆಯುವಂತೆ ಕಾರ್ಯದರ್ಶಿಗೆ ಸೂಚನೆ ನೀಡಿದರು.
ಭದ್ರಾವತಿ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯ ಬಗ್ಗೆಯೂ ಸಮಾಲೋಚನೆ ನಡೆಸಿದರು. ಉಕ್ಕು ಕ್ಷೇತ್ರದಲ್ಲಿ ಚೀನಾ ಒಡ್ಡುತ್ತಿರುವ ಪೈಪೋಟಿಯ ಬಗ್ಗೆ ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದರು.