www.kmskannada.com
ಇದು ನೈಜ, ವಿಶ್ವಾಸಾರ್ಹ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ಪ್ರಕಟಣೆಯ ವೆಬ್ʼತಾಣ. ಕರ್ನಾಟಕದ ಪ್ರಚಲಿತ ವಿದ್ಯಮಾನ, ರಾಜಕೀಯ, ನಾಡು-ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಒತ್ತು ಕೊಡುವ ಸುದ್ದಿತಾಣ.
ನಾಡಿಗೆ ಸಂಬಂಧಿಸಿದ ಪ್ರಮುಖ ವಿಚಾರಗಳಿಗೆ ಆದ್ಯತೆ ಕೊಡುವುದು, ಅಂದರೆ; ಕೃಷಿ, ತೋಟಗಾರಿಕೆ, ಹವಾಮಾನ, ನೀರಾವರಿ, ರಾಜಕೀಯ ಸೇರಿ ಹಲವು ಕ್ಷೇತ್ರಗಳ ವೈವಿಧ್ಯಮಯ ಸುದ್ದಿಗಳನ್ನು ಓದುಗರಿಗೆ ತಲುಪಿಸುವುದು ಈ ತಾಣದ ಆಶಯ.
ರಾಷ್ಟ್ರೀಯ, ಅಂತಾರಾಷ್ಟ್ರೀಯ ಬೆಳವಣಿಗೆಗಳ ಜತೆಗೆ; ಆರೋಗ್ಯ, ಉದ್ಯೋಗ, ಆಹಾರ ವಲಯಗಳಲ್ಲಿ ಜನರಿಗೆ ಅಗತ್ಯವಿರುವ ಸಾಮಾನ್ಯ ಸುದ್ದಿ-ಸಮಾಚಾರಗಳ ಹೂರಣವನ್ನು ವೇಗವಾಗಿ ಒದಗಿಸುವ ಗುರಿ ನಮ್ಮದು.
ವಾಸ್ತವಿಕ ವಿಚಾರಗಳಿಗೆ ಹೆಚ್ಚು ಒತ್ತು ನೀಡಿ ಅವಸರವಿಲ್ಲದೆ, ಎಲ್ಲಾ ಆಯಾಮಗಳಲ್ಲೂ ಪರಾಮರ್ಶಿಸಿ ವಿಶ್ಲೇಷಣಾತ್ಮಕ ಸುದ್ದಿಗಳನ್ನು ಒದಗಿಸುವುದು, ಸುದ್ದಿಯಲ್ಲಿ ತಾಜಾತನ, ಗುಣಮಟ್ಟ ಕಾಯ್ದುಕೊಳ್ಳುವ ಗುರಿ ನಮ್ಮದು. ಕಳೆದ ಮೂರು ದಶಕಗಳ ದೀರ್ಘ ಅನುಭವವುಳ್ಳ ಪತ್ರಕರ್ತರ ತಂಡವೇ ಕಟ್ಟಿರುವ ಅಂತರ್ಜಾಲ ಸುದ್ದಿತಾಣ ಇದು.
ಮಾಧ್ಯಮ ಕ್ಷೇತ್ರ ಸಾಕಷ್ಟು ಬದಲಾವಣೆ, ತಲ್ಲಣಗಳನ್ನು ಕಂಡಿದೆ. ನವನವೀನ ತಂತ್ರಜ್ಞಾನಕ್ಕೆ ತನ್ನನ್ನು ತಾನು ಒಗ್ಗಿಸಿಕೊಳ್ಳುತ್ತಾ ಮುನ್ನಡೆದಿದೆ. ಬದಲಾವಣೆ ನಿರಂತರ ಪ್ರಕ್ರಿಯೆ. ಪತ್ರಕರ್ತರೂ ನಿಂತ ನೀರಾಗದೆ, ಚಲನಶೀಲನರಾಗಿ ಕಾಲದ ಜತೆ ಓಡಬೇಕಿದೆ. ಅಂಥಹ ಮೌಲಿಕ ಮಾಧ್ಯಮಕ್ಕೆ www.kmskannada.com ಒಂದು ನಾಂದಿ.
ಮುದ್ರಣ, ಶ್ರವ್ಯ, ದೃಶ್ಯ ಮಾಧ್ಯಮಗಳ ನಡುವೆಯೇ ಹೆಚ್ಚು ಪ್ರಚಲಿತವಾಗುತ್ತಿರುವುದು ಡಿಜಿಟಲ್ ಮಾಧ್ಯಮಕ್ಕೆ ಈಗ ಮಹತ್ವ ಹೆಚ್ಚು. ಅಂಗೈನಲ್ಲಿರುವ ಮೊಬೈಲ್ ಮೂಲಕವೇ ಹತ್ತು-ಹಲವು ಸೇವೆಗಳು ನಡೆಯುತ್ತಿವೆ. ಇಂಟರ್ನೆಟ್ ಯುಗದಲ್ಲಿ ನಗರ, ಗ್ರಾಮೀಣ, ಗುಡ್ಡಗಾಡು ಎಂಬ ಬೇಧವಿಲ್ಲ. ಇದ್ದಲ್ಲೇ ಜಗತ್ತನ್ನು ಅರಿಯುವ ಕಾಲವಿದು. ಅದಕ್ಕೆ ತಕ್ಕಂತೆ ನಾವು ಅಣಿಯಾಗುವುದು ಅನಿವಾರ್ಯ. ತಲೆಮಾರು ಕಳೆದಂತೆ ಬದಲಾವಣೆ ಬೇಕೆನ್ನುವ ಈ ಹೊತ್ತಿನಲ್ಲಿ ಸುದ್ದಿ ಆಸಕ್ತರು ಮುದ್ರಣದಿಂದ ಡಿಜಿಟಲ್ ಮಾಧ್ಯಮಕ್ಕೆ ಬಹುತೇಕ ಹೊರಳಿದ್ದಾರೆ. ನಮ್ಮ ಈ ಪ್ರಯತ್ನಕ್ಕೆ ಈ ಬದಲಾವಣೆಯೇ ಪ್ರೇರಣೆ. kmsnews ನಮ್ಮ ಮಾತೃಸಂಸ್ಥೆ.
- ಕೆ.ಎಂ.ಶಿವರಾಜು
ಸಂಸ್ಥಾಪಕ & ಪ್ರಧಾನ ಸಂಪಾದಕ
www.kmskannada.com
- K.M.SHIVARAJU
No.1913, 5th Cross, 18th A main, JP Nagara, 2nd phase, Bengaluru – 560 078
Mobile: +919844046761
e mail: kmshivaraju@gmail.com / kmskannadanews@gmail.com