ಪರಿಹಾರವೇನು ಗೊತ್ತೆ?
ಬೆಂಗಳೂರು: ಚಳಿಗಾಲದಲ್ಲಿ ಬಂದಿತ್ತೆಂದರೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಮಾಗಿಯ ಮೈ ಕೊರೆಯುವ ಚಳಿ ಒಂದೆಡೆಯಾದರೆ, ಮತ್ತೊಂದೆಡೆ ರೋಗಗಳು ಬಾಧಿಸುತ್ತವೆ. ಒಂದಲ್ಲ ಒಂದು ರೀತಿಯ ಸಮಸ್ಯೆಯನ್ನು ಪ್ರತಿಯೊಬ್ಬರು ಅನುಭವಿಸಿಯೇ ಇರುತ್ತಾರೆ. ಶೀತ, ಕಫ, ಕೆಮ್ಮ, ಜ್ವರ ಹೀಗೆ ನಾನಾ ರೀತಿಯ ಸಮಸ್ಯೆಗಳು ಉಂಟಾಗುತ್ತವೆ.
ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರು ಮುಖ್ಯವಾಗಿ ಆಹಾರ ಸೇವನೆಯಲ್ಲಾಗುವ ಪರಿಣಾಮ ಗಮನಿಸುವುದು ಉತ್ತಮ. ಕೆಲವರಿಗೆ ಕೆಲವೊಂದು ಆಹಾರ, ಹಣ್ಣು, ತರಕಾರಿ ಒಗ್ಗುವುದಿಲ್ಲ. ಅಂಥವುಗಳ ಬಗ್ಗೆ ಜಾಗೃತರಾಗಿ ಕಡಿಮೆ ಮಾಡುವುದೇ ಪರಿಹಾರ. ಚಳಿಗಾಲದ ಸಮಸ್ಯಗಳೂ ಕೂಡ ಇದರಿಂದ ಹೊರತಾಗಿಲ್ಲ. ವಾತಾ, ಪಿತ್ತ, ಕಫ ಇವುಗಳಲ್ಲಿ ನಿಯಂತ್ರಣ ಸಾಧಿಸಿದರೆ ದೇಹಾರೋಗ್ಯ ಕಾಪಾಡಿದಂತೆಯೇ.
ಈ ಕಾಲದಲ್ಲಿ ಪ್ರಮುಖವಾಗಿ ಎಲ್ಲರನ್ನೂ ಕಾಡುವ ಸಮಸ್ಯೆ ಎಂದರೆ ಚರ್ಮದ ತುರಿಕೆ. ಚಳಿ ಹೆಚ್ಚಾದಷ್ಟು ಇದರ ಸಮಸ್ಯೆ ಹೆಚ್ಚಾಗುತ್ತದೆ. ಬಹುತೇಕರ ಅಭಿಪ್ರಾಯದಂತೆ ಈ ತುರಿಕೆ ಸಮಸ್ಯೆಗೆ ಪೂರ್ಣ ಪರಿಹಾರ ಎಂಬುದಿಲ್ಲ. ಒಣ ಚರ್ಮದ ಶರೀರವುಳ್ಳವರಿಗೆ ಸಮಸ್ಯೆಯೂ ತೀವ್ರ. ಇದಕ್ಕೆ ಹಲವು ಕಾರಣಗಳಿವೆ. ತುರಿಕೆಯ ಉಪಶಮನಕ್ಕೆ ಜೀವನ ಶೈಲಿಯೇ ಪರಿಹಾರ ಎಂಬುದು ಹಲವರ ಅಭಿಪ್ರಾಯ.
ಸಾಮಾನ್ಯವಾಗಿ ನವೆಂಬರ್ ನಿಂದ ಡಿಸೆಂಬರ್ ವರೆಗೆ ಚಳಿಗಾಲವಿರುತ್ತದೆ. ಆದರೆ, ಈ ವರ್ಷ ಪ್ರತಿಕೂಲ ವಾತಾವರಣದಿಂದ ಸರಿ ಸುಮಾರು ಒಂದೂವರೆ ತಿಂಗಳು ಚಳಿಯ ತೀವ್ರತೆ ಗೊತ್ತಾಗಲೇ ಇಲ್ಲ. ಇನ್ನೂ ಕನಿಷ್ಠ ಉಷ್ಣಾಂಶ ಗಣನೀಯವಾಗಿ ಇಳಿಕೆಯಾಗಿಲ್ಲ. ಆದರೂ ಡಿಸೆಂಬರ್ ಮತ್ತು ಜನವರಿ ತಿಂಗಳು ಹೆಚ್ಚು ಚಳಿ ಇರುವ ಮಾಸಗಳು.
ಚರ್ಮ ಸಂಬಂಧಿ ರೋಗಗಳು ಹೆಚ್ಚು
ಚಳಿಗಾಲದಲ್ಲಿ ಚರ್ಮ ಸಂಬಂಧಿ ರೋಗಗಳು ಹೆಚ್ಚು ಕಾಡುತ್ತವೆ. ಬಹುತೇಕರು ಚಳಿಯಿಂದಾಗಿ ಸಾಕಷ್ಟು ನೀರನ್ನು ಸೇವಿಸುವುದಿಲ್ಲ. ಬೆಳಿಗ್ಗೆ-ಸಂಜೆ ಮನೆಯಿಂದ ಹೊರಗೆ ಬರುವುದನ್ನೇ ಹಲವರು ಇಷ್ಟಪಡುವುದಿಲ್ಲ. ಧನರ್ಮಾಸದಲ್ಲಿ ಸಮಸ್ಯೆಯ ತೀವ್ರತೆ ಹೆಚ್ಚಾಗಿರುವುದು. ನೀರು ಕುಡಿಯಬೇಕು ಎಂಬ ದಾಹವೂ ಆಗುವುದಿಲ್ಲ. ಹೀಗಾಗಿ ನೀರಿನ ಮಿತ ಬಳಕೆಯಿಂದ ದೇಹದಲ್ಲಿ ಸಮತೋಲನ ತಪ್ಪುತ್ತದೆ. ಚರ್ಮಕ್ಕೆ ಸಾಕಷ್ಟು ತೇವಾಂಶವಿಲ್ಲದೆ, ಚರ್ಮ ಒಣಗುತ್ತದೆ. ಒಣಗಿದ ಚರ್ಮ ನವೆ ಶುರು ಮಾಡುತ್ತದೆ. ತುರಿಕೆ ಶಮನಕ್ಕೆ ಹತ್ತು ಹಲವು ಲೋಷನ್, ಕ್ರೀಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವುಗಳನ್ನು ನಿತ್ಯ ಬಳಸಿದರೆ ಮಾತ್ರ ಪರಿಹಾರ ಪಡೆಯಬಹುದು. ಇಲ್ಲದಿದ್ದರೆ ಸಮಸ್ಯೆಗೆ ಪರಿಹಾರವಿಲ್ಲ ಎಂಬಂತಾಗಿದೆ.
ಹಿಜಾಬ್ ನಿಷೇಧ ವಾಪಾಸ್ ಗೆ ಹೇಳಿದ್ದೀನಿ :ಸಿದ್ದು
ದೇಹ ಬೆಚ್ಚಗಿರಲೆಂದು ಬೆಚ್ಚಗಿನ ಉಡುಪುಗಳ ಮೊರೆ ಹೋಗುವುದಷ್ಟೇ ಅಲ್ಲ; ಶರೀರದಲ್ಲಿನ ಉಷ್ಣತೆ ಹೆಚ್ಚಿಸಿಕೊಳ್ಳಲು ಬಹಳಷ್ಟು ಜನರು ಬಿಸಿ ನೀರು, ಬಿಸಿಯಾದ ಪಾನೀಯ ಕುಡಿಯುತ್ತಾರೆ. ಮುಖ್ಯವಾಗಿ ಹೆಚ್ಚು ಬೆಚ್ಚನಗಿನ ಆಹಾರ ಸೇವಿಸುತ್ತಾರೆ. ಬಿಸಿಯಾದ ತಾಜಾ ಆಹಾರ ಸೇವನೆ ಉತ್ತಮ. ಅದಕ್ಕೆ ತಕ್ಕಂತೆ ದ್ರವ ಪದಾರ್ಥಗಳನ್ನು ಬಳಸಬೇಕು. ದ್ರವರೂಪದ ಆಹಾರ ಕಡಿಮೆ ಮಾಡುವುದು ಕೂಡ ಚರ್ಮ ಸಮಸ್ಯೆಗೆ ದಾರಿ ಮಾಡಿಕೊಡಲಿದೆ.
ತುಂಬಾ ಬಿಸಿಯಾದ ನೀರು ಸ್ನಾನಕ್ಕೆ ಬಳಸುವುದು ಒಳ್ಳೆಯದಲ್ಲ. ಇದರಿಂದ ತಾತ್ಕಾಲಿಕವಾಗಿ ಚಳಿಯಿಂದ ಮುಕ್ತಿ ನೀಡಿದರೂ ಚರ್ಮ ಒಣಗಲು ಅವಕಾಶ ಮಾಡಿಕೊಡುತ್ತದೆ. ಅಗತ್ಯಕ್ಕಿಂತ ಹೆಚ್ಚು ಸಾಬೂನು ಬಳಸುವುದು ಕೂಡ ಒಳ್ಳೆಯದಲ್ಲ. ಬೆಚ್ಚಗಿನ ನೀರು ಸ್ನಾನಕ್ಕೆ ಬಳಸುವುದು ಸೂಕ್ತ. ಚಳಿಗಾಲದಲ್ಲಿ ಮುಂಜಾನೆ ಮಂಜಿನ ವಾತಾವರಣ ಹಾಗೂ ಇಬ್ಬನಿ ಬೀಳುವುದು ಸಹಜ. ಆ ಸಮಯದಲ್ಲಿ ಮನೆಯಿಂದ ಹೊರಗಿರುವ, ಇಲ್ಲವೆ, ಹೊರಗಡೆ ಸದಾ ಕಾರ್ಯ ನಿರ್ವಹಿಸುವವರಿಗೆ ಹೆಚ್ಚು ಈ ಸಮಸ್ಯೆಯಾಗುತ್ತದೆ.
ಮುಖ್ಯಮಂತ್ರಿಗಳ ಐಷಾರಾಮಿ ವಿಮಾನ ಯಾತ್ರೆ-ಬಿಜೆಪಿ ಕೆಂಡ
ಕೈ, ಕಾಲುಗಳು ಮಾತ್ರವಲ್ಲ, ಮುಖದಲ್ಲೂ ಸಮಸ್ಯೆ ಉಂಟಾಗುತ್ತದೆ. ತುಟಿಗಳು ಬಿರುಕು ಬಿಡುತ್ತವೆ. ಕೈ, ಕಾಲುಗಳಲ್ಲಿ ಚರ್ಮ ಬಿರುಕು ಬಿಟ್ಟು ದದ್ದುಗಳಾಗುತ್ತವೆ. ಅತಿಯಾದರೆ ಕೆಲವೊಮ್ಮೆ ಬಿರುಕುಗಳಲ್ಲಿ ಸಣ್ಣ ಪ್ರಮಾಣದಲ್ಲಿ ರಕ್ತ ಶ್ರವಿಸುವುದು ಉಂಟು. ಹಾಗೆಯೇ ಹಿಮ್ಮಡಿಗಳಲ್ಲೂ ಕೂಡ.
ಪರಿಸರ ಮಾಲಿನ್ಯವೂ ಸಮಸ್ಯೆಗೆ ಕಾರಣ
ಈ ರೀತಿಯ ಸಮಸ್ಯೆಗಳಿಗೆ ನಾವು ಸೇವಿಸುವ ಆಹಾರವೂ ಪರೋಕ್ಷವಾಗಿ ಕಾರಣವಾಗುತ್ತದೆ. ಚಳಿ ನಿಯಂತ್ರಿಸಲು ಎಣ್ಣೆಯಲ್ಲಿ ಕರಿದ ತಿಂಡಿ-ತಿನಿಸು ಸೇವಿಸುವುದು ವಾಡಿಕೆ. ಕಡಲೆ ಬೀಜ, ಬಟಾಣಿ ಸೇರಿದಂತೆ ಹುರಿದ ದ್ವಿದಳ ಧಾನ್ಯಗಳನ್ನು ಹೆಚ್ಚು ಸೇವಿಸಲಾಗುತ್ತದೆ. ಇವು ಹೆಚ್ಚು ನೀರನ್ನು ಬಯಸುತ್ತವೆ. ದೇಹದಲ್ಲಿ ಸಾಕಷ್ಟು ನೀರಿನ ಅಂಶವಿಲ್ಲದೆ, ಕೊರತೆ ಉಂಟಾದಾಗ ಇವು ಇನ್ನಷ್ಟು ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತವೆ. ಉಷ್ಣ ಮತ್ತು ಶೀತ ಸಂಬಂಧಿ ಆಹಾರವನ್ನು ಸಮತೋಲನವಾಗಿ ಸೇವಿಸುವುದು ಎಲ್ಲಾ ಕಾಲಕ್ಕೂ ಒಳ್ಳೆಯದು.
ಚಳಿಗಾಲವಾದ್ದರಿಂದ ತಂಪು ಪಾನೀಯಗಳ ಬದಲಿಗೆ ಅತಿಯಾಗಿ ಬಿಸಿಯ ಪಾನೀಯಗಳನ್ನು ಬಳಸಲಾಗುತ್ತದೆ. ಯಾವುದೇ ಆದರೂ ಮಿತಿಯಲ್ಲಿರಬೇಕು ಅಷ್ಟೇ. ಈ ರೀತಿಯ ಸಮಸ್ಯೆಗಳು ಕೇವಲ ನಗರವಾಸಿಗಳಿಗೆ ಅಷ್ಟೇ ಅಲ್ಲ; ಗ್ರಾಮೀಣ ಭಾಗದಲ್ಲೂ ಸರ್ವೇ ಸಾಮಾನ್ಯ.
ಮಾಗಿಯ ಚಳಿಗಾಲದಲ್ಲಿ ಅಲರ್ಜಿಯೂ ಹೆಚ್ಚು. ವಾತಾವರಣದಲ್ಲಿ ಆಗಿರುವ ಮಾಲಿನ್ಯದಿಂದ ಚರ್ಮ ಸಂಬಂಧಿ ರೋಗಗಳು ಕಂಡುಬರುತ್ತವೆ. ವಾಹನಗಳು, ಕಾರ್ಖಾನೆಗಳು ಹೊರಸೂಸುವ ಹೊಗೆಯೂ ಕಾರಣ. ಚಳಿಗಾಲದಲ್ಲಿ ಬಹುತೇಕ ಮರಗಳ ಎಲೆಗಳು ಹಣ್ಣಾಗಿ ಉದುರುತ್ತವೆ. ಹಲವು ದಿನಗಳಿಂದ ಎಲೆಗಳ ಮೇಲೆ ಕುಳಿತಿದ್ದ ಧೂಳು ಎಲೆ ಉದುರುವಾಗ ಗಾಳಿಯೊಂದಿಗೆ ಬೆರೆಯುತ್ತದೆ. ಈ ರೀತಿಯ ಧೂಳು ಕೂಡ ಚರ್ಮ ಸಂಬಂಧಿ ಸಮಸ್ಯೆಗೆ ಎಡೆಮಾಡಿ ಕೊಡಲಿದೆ. ಚಳಿಗಾಲದಲ್ಲಿ ಮಳೆ ಬೀಳದಿರುವುದರಿಂದ ಸಹಜವಾಗಿ ಗಾಳಿಯಲ್ಲಿ ಧೂಳಿನ ಕಣಗಳು ಹೆಚ್ಚಾಗಿರುತ್ತವೆ.
ರಾಜನಾಥ್ ಸಿಂಗ್-ಕುಮಾರಸ್ವಾಮಿ ಭೇಟಿ
ಚಳಿಯಿಂದ ಉಂಟಾಗುವ ತುರಿಕೆ ಸಮಸ್ಯೆಗೆ ಕಾರಣಗಳನ್ನು ಹುಡುಕುತ್ತಾ ಹೋದರೆ ಹತ್ತಾರು ಸಿಗುತ್ತವೆ. ಪರಿಹಾರವೂ ನಮ್ಮ ಕೈಯಲ್ಲೇ ಇರುತ್ತದೆ. ಅದನ್ನು ಅರಿಯಬೇಕು ಅಷ್ಟೆ. ಅನಾದಿಕಾಲದಿಂದ ಪರಿಹಾರೋಪಾಯಗಳನ್ನು ಕಂಡು ಕೊಳ್ಳಲಾಗುತ್ತಿದೆ. ಅವು ಕಾಲದಿಂದ ಕಾಲಕ್ಕೆ ಬದಲಾಗುತ್ತವೆ. ದೇಹ ಬೆಚ್ಚಗಿಡುವ ಉಲ್ಲನ್, ಖಾದಿ, ಅರಳೆಯಂತಹ ಉಡುಪುಗಳಷ್ಟೇ ಬಳಸಿದರೆ ಸಾಲದು. ಸಮತೋಲಿತ ಆಹಾರವೂ ಮುಖ್ಯ ಎಂಬುದನ್ನು ಗಮನಿಸಿದರೆ ಮನೆಯಲ್ಲೇ ಮದ್ದು ಕಂಡುಕೊಂಡಂತಾಗಲಿದೆ.
ಪರಿಹಾರ ಕ್ರಮಗಳು
ತೈಲ ಮಸಾಜ್ ಮಾಡಿಸುವುದು, ತುರಿಕೆಯಾಗುವ ಜಾಗದಲ್ಲಿ ಒದ್ದೆ ಹೊದ್ದೆ ಬಟ್ಟೆ ಹಾಕುವುದು, ವಾರಕ್ಕೆ ಒಂದೆರಡು ಬಾರಿ ಪುದೀನ ತೈಲ ಲೇಪಸಿವುದು ಬಳಕೆಯಲ್ಲಿದೆ. ಇವು ತಾತ್ಕಾಲಿಕ ಉಪಶಮನ ನೀಡಬಹುದು ಅಷ್ಟೇ. ನೀರಿನಂಶ ಹೆಚ್ಚಿರುವ ಹಣ್ಣ, ತರಕಾರಿ, ಆಹಾರ ಸೇವನೆ ಅಗತ್ಯ. ಚರ್ಮಕ್ಕೆ ನೀರಿನಂಶದ ಕೊರತೆ ಆಗಬಾರದು. ಇದು ಮುಖ್ಯ.
ತುಂಬೇ ಸೊಪ್ಪಿನ ರಸದ ಲೇಪನ ಚರ್ಮದ ತುರಿಕೆಯ ಅಲರ್ಜಿಗಳಿಗೆ ರಾಮಬಾಣದಂತೆ ಕೆಲಸ ಮಾಡಲಿದೆ. ತುಂಬೆ ಸೊಪ್ಪನ್ನು ಚೆನ್ನಾಗಿ ಅರೆದು ತುರಿಕೆ ಜಾಗಕ್ಕೆ ಲೇಪನ ಮಾಡಿ ಸುಮಾರು ಅರ್ಧ ಗಂಟೆಯ ನಂತರ ತೊಳೆದರೆ ಸಾಕು. ಮಾರಕ್ಕೆ ನಾಲ್ಕು ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.ಈ ವಿಚಾರ ಸಾಮಾಜಿಕ ಮಾಧ್ಯಮ ಹಾಗೂ ಅಂತರ್ ಜಾಲದಲ್ಲಿ ಲಭ್ಯವಿರುವ ಮಾಹಿತಿ ಆಧಾರಿತವಾಗಿದೆ.
2 comments
[…] ಅಂಕಣ […]
[…] ಅಂಕಣ […]