Tuesday, May 20, 2025
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Tuesday, May 20, 2025
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ಅಂಕಣ

ಕಾಡಿನಿಂದ ಐಸ್ ಕ್ರೀಮ್ ವರೆಗೆ ಸೀತಾಫಲದ ಮಹಿಮೆ…!

by admin January 21, 2024
written by admin January 21, 2024 9 comments 3 minutes read
Share 8FacebookTwitterPinterestEmail
437
ಔಷಧ ಗುಣಗಳ ಆಗರ; ತಿನ್ನಲು ಬಲು ರುಚಿಕರ

ಬೆಂಗಳೂರು: ಆರೋಗ್ಯವಂತರಾಗಿರಲು ಹಣ್ಣುಗಳನ್ನು ಸೇವಿಸಬೇಕು ಎಂಬುದು ವೈದ್ಯರ ಸಲಹೆ. ಯಾವ ಹಣ್ಣಿನಿಂದ ಯಾವ ವಿಟಮಿನ್ ಸಿಗುತ್ತದೆ. ಆರೋಗ್ಯ ಇಲ್ಲವೆ ಶರೀರದ ಮೇಲೆ ಹಣ್ಣು ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಯಾರು ಅರಿಯಲು ಹೋಗುವುದಿಲ್ಲ.

ಸಾಮಾನ್ಯವಾಗಿ ಋತುಮಾನಕ್ಕೆ ಅನುಗುಣವಾಗಿ ದೊರೆಯುವ ಹಣ್ಣುಗಳನ್ನು ಸೇವಿಸುವುದು ರೂಢಿ. ಊಟವಾದ ನಂತರ ಬಾಳೆ ಹಣ್ಣು ಇಲ್ಲವೆ ಫ್ರೂಟ್ ಸಲಾಡ್ ತಿನ್ನುವ ಪರಿಪಾಠ ಕೆಲವರದ್ದು. ಹಣ್ಣಿನ ಹಿನ್ನೆಲೆ, ಪ್ರಯೋಜನ ಹಾಗೂ ಅದರಿಂದಾಗುವ ಅಡ್ಡ ಪರಿಣಾಮದ ಬಗ್ಗೆ ತಿಳುವಳಿಕೆ ಇದ್ದರೆ ಒಳ್ಳೆಯದು.

`ಸೀತಾಫಲ’ ಇದೊಂದು ಋತುಮಾನದ ಹಣ್ಣು. ಎಲ್ಲಾ ಋತುಗಳಲ್ಲೂ ಸೀತಾಫಲ ದೊರೆಯುವುದಿಲ್ಲ. ಋತುಮಾನದ ಹಣ್ಣು ಹೇಗೋ ಹಾಗೆಯೇ ಕಾಡಿನ ಹಣ್ಣು ಕೂಡ ಹೌದು. ಈ ಹಣ್ಣು ಊರು ಬಿಟ್ಟು ಕಾಡು ಸೇರಿದ್ದಾದರೂ ಹೇಗೆ ಎಂಬುದು ಒಂದು ರೋಚಕವೇ ಆಗಿದೆ.

ಕೆಎಸ್ ಡಿಎಲ್ ನಿಂದ 21 ನೂತನ ಉತ್ಪನ್ನ ಬಿಡುಗಡೆ

ಜನಪದರ ನಂಬಿಕೆಯಂತೆ ರಾಮಾಯಣದಲ್ಲಿ ಬರುವ ಜನಕರಾಜ ಸಸ್ಯಶಾಸ್ತ್ರಜ್ಞ.  ಆತ ಸಸ್ಯಗಳ ಮೇಲೆ ಪ್ರಯೋಗ ಮಾಡಲೆಂದು ಭೂಮಿ ಉಳುಮೆ ಮಾಡುವಾಗ ನೇಗಿಲ ಗೆರೆಗೆ ಸಿಕ್ಕ ಪೆಟ್ಟಿಗೆಯಲ್ಲಿ ದೊರೆತ ಮಗುವೆ ಸೀತಾ.

ಜನಕರಾಜನಂತೆ ಸೀತಾ ಕೂಡ ಸಸ್ಯಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದವಳೆ. ರಾಮನನ್ನು ವರಿಸಿದ ಸೀತಾ ಕೂಡ 14 ವರ್ಷಗಳ ಕಾಲ ವನವಾಸಕ್ಕೆ ಅತ್ಯಂತ ಖುಷಿಯಿಂದಲೇ ಹೊರಡುತ್ತಾಳಂತೆ. ನಾರು ಉಡುಗೆಯನ್ನು ತೊಟ್ಟ ಸೀತಾ ತನ್ನ ಮಡಿಲಿಗೆ ಅನೇಕ ವಿಧದ ಬೀಜಗಳನ್ನು ಸಾಧ್ಯವಾದಷ್ಟು ತುಂಬಿಸಿಕೊಳ್ಳುತ್ತಾಳಂತೆ.

ಸೀತಾ ಬಿತ್ತಿದ ಬೀಜವೇ ಸೀತಾಫಲ

ತಾನು ಅಂದುಕೊಂಡಂತೆ ವನದ ರಾಶಿಯ ಮಧ್ಯದಲ್ಲೇ ಪ್ರಯೋಗಗಳನ್ನು ನಡೆಸಿಕೊಳ್ಳಬಹುದು ಎಂದುಕೊಳ್ಳುತ್ತಾ ರಾಮನ ಮಡಿಲಿಗೆ, ಲಕ್ಷ್ಮಣನ ಮಡಿಲಿಗೆ ಒಂದಷ್ಟು ಬೀಜದ ರಾಶಿಗಳನ್ನು ತುಂಬುತ್ತಾಳಂತೆ.  ಹಾಗಾಗಿ ರಾಮ, ಸೀತಾ, ಲಕ್ಷ್ಮಣರು ಹೋದ ಕಡೆಯಲ್ಲಿ ಬೀಜಗಳನ್ನು ಚೆಲ್ಲುತ್ತಾ ಹೋಗುತ್ತಾರೆ.

ಹಾಗಾಗಿ ಸೀತಾ, ರಾಮ, ಲಕ್ಷ್ಮಣರು ಕಾಡಿನಲ್ಲಿ ಚೆಲ್ಲಿದ ಬೀಜಗಳು ಕ್ರಮವಾಗಿ ಸೀತಾಫಲ, ರಾಮಫಲ, ಲಕ್ಷ್ಮಣ ಫಲವಾಗಿವೆ. ಕಾಡಿನಲ್ಲಿ ದೊರೆಯುವ ಹಣ್ಣುಗಳಾಗಿವೆ.

ನಾನು ಕಂಡಂತೆ ತೀರ್ಥಕ್ಷೇತ್ರಗಳಿಗೆ ಕಾಲ್ನಡಿಗೆಯಲ್ಲಿ ಹಿಂದಿನ ಕಾಲದಲ್ಲಿ ಹೋಗುವಾಗ ಅನೇಕ ಹಿರಿಯರು ಜೊತೆಯಲ್ಲಿ ಒಂದಷ್ಟು ಹಲಸಿನ ಬೀಜ, ಇತರೆ ಹಣ್ಣಿನ ಬೀಜಗಳನ್ನು ಕೊಂಡೊಯ್ಯುತ್ತಿದ್ದರು. ತಾವು ಹೋದ ಪ್ರದೇಶಗಳಲ್ಲಿ ಅವುಗಳನ್ನು ಎಸೆದು ಬಂದಿರುವುದನ್ನು ಕೇಳಿದ್ಧೇನೆ.

ಕರ್ನಾಟಕದಿಂದ ಹೆಚ್ಚು ಸ್ಥಾನ ಗೆಲ್ಲಸಿ

ಈಗಿನ ತಂತ್ರಜ್ಞಾನ ಯುಗದಲ್ಲೂ ಮಳೆಗಾಲದ ಸಂದರ್ಭಗಳಲ್ಲಿ ವಾಟ್ಸಾಪ್, ಫೇಸ್ ಬುಕ್, ಟ್ವಿಟರ್ ನಂತಹ ಸಾಮಾಜಿಕ ಮಾಧ್ಯಮದ ಜಾಲತಾಣಗಳಲ್ಲಿ ಬೈಕು, ಕಾರುಗಳಲ್ಲಿ ಚಲಿಸುವವರು ರಸ್ತೆ ಬದಿ ಹಾಗೂ ಬರಡು ಪ್ರದೇಶಗಳಲ್ಲಿ ಹಣ್ಣಿನ ಬೀಜಗಳನ್ನು ಎಸೆದು ಬನ್ನಿ; ಎಸೆದ  ಬೀಜ ಮರವಾಗಿ ಪ್ರಾಣಿ ಪಕ್ಷಿಗಳಿಗೆ ಫಲ ನೀಡುತ್ತವೆ ಎಂಬ ಸಂದೇಶ ನೀಡುವುದನ್ನು ನೋಡಿದ್ದೇವೆ.

ಇದು ಕೂಡ ಸೀತಾ ರಾಮರು ಹಾಕಿಕೊಟ್ಟ ಮಾರ್ಗವೇ ಹೌದು. ಬಹುಶಃ ತಾನು ಬಂದ ದಾರಿಯ  ಗುರುತಿಗೆ ಸೀತಾ, ರಾಮರು ಬೀಜಗಳನ್ನು ಬಿತ್ತಿರಬಹುದು. 14 ವರ್ಷ ಕಳೆದ ನಂತರ ಅಯೋಧ್ಯೆಗೆ ಮರಳುವುದೆಂತು. ದಾರಿಯ ಗುರುತಿಗೆ ತಮ್ಮ ತಮ್ಮ ಬಳಿ ಇದ್ದ ಬೀಜಗಳನ್ನು ಒಬ್ಬೊಬ್ಬರು ಬಿತ್ತಿರಬಹುದು. ಈ ಅಭ್ಯಾಸ ಬಲದಿಂದಲೇ  ಸೀತೆಯನ್ನು ರಾವಣ ಅಪಹರಿಸಿದಾಗ ತನ್ನ ಗುರುತು ಸಿಗಲೆಂದು ಆಭರಣಗಳನ್ನು ಕಳಚಿ ಸೀತೆ ಎಸೆದಿರಬಹುದು ಅನ್ನಿಸುತ್ತದೆ.

ಸೀತಾಫಲ ವಾಣಿಜ್ಯ ಬೆಳೆಯಾಗಿ ಲಾಭದಾಯಕ

ಅದೇನೆ ಇದ್ದರು ರಾಮಫಲ, ಲಕ್ಷ್ಮಣ ಫಲಕ್ಕಿಂತ ಸೀತಾಫಲ ಅತ್ಯಂತ ರುಚಿಯಾದ ಹಣ್ಣು. ಈಗೀಗ ಸೀತಾಫಲ ವಾಣಿಜ್ಯ ಬೆಳೆಯಾಗಿಯು ಬದಲಾಗಿದ್ದು, ಇದರಲ್ಲೂ ಹೈಬ್ರಿಡ್ ತಳಿಯನ್ನು ಕಾಣಬಹುದಾಗಿದೆ. ಬೆಟ್ಟ, ಗುಡ್ಡಗಳ ನಡುವೆ ಬೆಳೆಯುತ್ತಿದ್ದ ಸೀತಾಫಲವು ಫಲವತ್ತಾದ ನೆಲದಲ್ಲಿ ವಾಣಿಜ್ಯ ಬೆಳೆಯಾಗಿ ಬದಲಾಗಿದೆ.

ನ್ಯಾಚುರಲ್ ಐಸ್ ಕ್ರೀಂನಲ್ಲಿ ಸೀತಾಫಲದ ಐಸ್ ಕ್ರೀಂ ಅತ್ಯಂತ ರುಚಿಕರವಾದದ್ದು. ಅದರ ಒಂದೊಂದು ಎಸಳು ಬಾಯಿಗೆ ಸಿಕ್ಕಾಗ ಐಸ್ ಕ್ರೀಂನ ರುಚಿ ಮತ್ತಷ್ಟು ಹೆಚ್ಚುತ್ತದೆ.

ಶ್ರೀಗಂಧ, ಬೀಟೆ, ತೇಗಕ್ಕೆ ಜಿಯೋ ಟ್ಯಾಗ್

ಕೇವಲ ಹಣ್ಣಿನ ರುಚಿಯಲ್ಲ, ಸೀತಾಫಲದ ಗಿಡದ ಬೇರಿನಿಂದ ಎಲೆಯ ತುದಿಯವರೆಗೂ ಔಷಧಿಯ ಗುಣಗಳನ್ನೇ ಹೊಂದಿದೆ. ಹಾಗಾದರೆ, ಬನ್ನಿ ಸೀತಾಫಲದ ಪ್ರಯೋಜನಗಳನ್ನು ಒಂದೊಂದಾಗಿ ತಿಳಿಯೋಣ.

ಸೀತಾಫಲದ ಎಲೆಯನ್ನು ನುಣ್ಣಗೆ ಅರೆದು ಕುರುವಾದ ಜಾಗಕ್ಕೆ ದಿನಕ್ಕೆ ಎರಡರಿಂದ ಮೂರು ಬಾರಿ ಹಚ್ಚುತ್ತಾ ಬಂದರೆ ಕುರು ಒಣಗಿ ಹೋಗುತ್ತದೆ. ವಾಸಿಯಾಗುತ್ತದೆ. ಚಿಕ್ಕಮಕ್ಕಳಿಗೆ ತಲೆಯಲ್ಲಿ ಹೇನು, ಸೀರು ಹೆಚ್ಚು.

ಹಲವು ಔಷಧಿಯ ಗುಣಗಳು

 ಇದಕ್ಕಾಗಿ ತಾಯಂದಿರು   ಮಾರುಕಟ್ಟೆಯಲ್ಲಿ ಸಿಗುವ ಯಾವುದ್ಯಾವುದೋ ಔಷಧಿಗಳನ್ನು ತಂದು ತಮ್ಮ ಮಕ್ಕಳ ತಲೆಗೆ ಹಚ್ಚುವುದರಿಂದ ಕಣ್ಣಿನ ದೃಷ್ಟಿಗೆ ತೊಂದರೆಯಾಗಬಹುದು. ಆದರೆ, ಸೀತಾಫಲದ ಎಲೆಗಳನ್ನು ವಾರದಲ್ಲಿ ತಲೆಗೆ ಎರಡು ಬಾರಿ ಹಚ್ಚುವುದರಿಂದ ಹೇನು, ಸೀರಿ ಮಾಯವಾಗಿ ಬಿಡುತ್ತವೆ.

ಅಲ್ಲದೆ, ತಲೆ ಕೂದಲಿಗೆ ಉತ್ತಮ ಕಂಡೀಷನರ್ ಕೂಡ ಹೌದು. ನೆರೆದ (ಬಿಳಿ) ತಲೆ ಕೂದಲಿಗೆ ನೈಸರ್ಗಿಕ ಡೈ ಮಾಡಲು ಕೂಡ ಈ ಎಲೆಯನ್ನು ಒಣಗಿಸಿ ಪುಡಿ ಮಾಡಿ ಬಳಸಲಾಗುತ್ತದೆ. ಕ್ಯಾನ್ಸರ್  ರೋಗಿಗಳು ಇದರ ಎಲೆಯನ್ನು ನೀರಿನಲ್ಲಿ ಕುದಿಸಿ ಅದರ ರಸವನ್ನು ಕುಡಿಯುತ್ತಾ ಬಂದದ್ದರಿಂದ ಕ್ಯಾನ್ಸರ್ ರೋಗ ಕೂಡ ವಾಸಿಯಾಗಿದೆಯಂತೆ!.

ಸೀತಾಫಲದ ಎಲೆ ತಂದು ಒಣಗಿಸಿ ಬಾಣಲಿಗೆ ಹಾಕಿ ಕರಕಲಾಗುವಂತೆ ಹುರಿದು ಪುಡಿ ಮಾಡಿಟ್ಟುಕೊಂಡು ಗಾಯಕ್ಕೆ ಹಚ್ಚಿದರೆ ಗಾಯ ಕೂಡ ಗುಣವಾಗುತ್ತದೆಯಂತೆ.  ಸೀತಾಫಲದ ಗಿಡದ ತೊಗಡೆಯ ಕಷಾಯ ಮಾಡಿ ಜೇನುತುಪ್ಪ ಸೇರಿಸಿ ಕುಡಿದರೆ ಜ್ವರ, ಕೆಮ್ಮು, ಉಬ್ಬಸ(ದಮ್ಮು) ಗುಣವಾಗಿ ನಿಶಕ್ತಿ ಕಡಿಮೆಯಾಗುತ್ತದೆ.

ರಾಮನಿಗೂ ಕರ್ನಾಟಕಕ್ಕೂ ಯುಗ-ಯುಗಾಂತರ ಸಂಬಂಧ

ಸೀತಾಫಲದ ಹಣ್ಣಂತು ಮುಟ್ಟಲು ಎಷ್ಟು ಮೃದುವೋ ಅಷ್ಟೇ ರುಚಿಯಾಗಿರುತ್ತದೆ. ರುಚಿಯಷ್ಟೇ ಅಲ್ಲ; ಆರೋಗ್ಯಕ್ಕೆ ಉಪಯೋಗಕಾರಿ ಕೂಡ ಹೌದು. ಪಚನಕ್ರಿಯೆಗೆ ಉತ್ತಮ ಹಣ್ಣು ಕೂಡ ಹೌದು. ಹಣ್ಣಿನಲ್ಲಿ ಅಪಾರ ಪ್ರಮಾಣದ ನಾರಿನಾಂಶ, ವಿಟಮಿನ್ ಮತ್ತು ಮಿನರಲ್ ಇದ್ದು, ಕಣ್ಣು, ಹೃದಯದ  ಆರೋಗ್ಯಕ್ಕೆ ಉತ್ತಮವಾಗಿದೆ.

ಈ ಹಣ್ಣಿನಲ್ಲಿ ಆಂಟಿ-ಆಕ್ಸಿಡೆಂಟ್ ಇರುವುದರಿಂದ ದೇಹದಲ್ಲಿ ರಾಡಿಕಲ್ಸ್ ಉತ್ಪತ್ತಿ ಮಾಡುತ್ತದೆ. ಇದರಿಂದ ವಯಸ್ಸಾದಂತೆ ಕಾಣುವುದಿಲ್ಲ. ಉತ್ತಮ ಚರ್ಮವನ್ನು ಹೊಂದಲು ಸಹಕಾರಿಯಾಗಿದೆ. ಇದರ ಜೊತೆಗೆ ಕ್ಯಾನ್ಸರ್ ಅನ್ನು ತಡೆಗಟ್ಟುವ ಗುಣ ಕೂಡ ಈ ಹಣ್ಣಿಗಿದೆಯಂತೆ.

ಅಲ್ಲದೆ, ಹೊರಗಿನ ಮಾಲಿನ್ಯದಿಂದ ದೇಹವನ್ನು ಕಾಪಾಡುತ್ತದೆ. ಈ ಹಣ್ಣಿನಲ್ಲಿರುವ ಪೊಟ್ಯಾಶಿಯಂ, ಮೆಗ್ನೀಷಿಯಂ ಅಂಶಗಳು ದೇಹದ ರಕ್ತ ಸಂಚಾರವನ್ನು ಸುಗಮಗೊಳಿಸಿ ಹೃದಯದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ವಿಟಮಿನ್ ಸಿ ಹೇರಳವಾಗಿದ್ದು, ಈ ಹಣ್ಣಿನ ಸೇವನೆಯಿಂದ ಉರಿಯೂತದಿಂದ ದೇಹವನ್ನು ರಕ್ಷಿಸುತ್ತದೆ.

ಜನವರಿ 22ರಂದು ಧಾರ್ಮಿಕ ಮೆರವಣಿಗೆ ನಿಷೇಧ

ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾದ ಸೇವನೆಯಿಂದ ಮಧು ಮೇಹ ಇರುವವರಿಗೆ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗಬಹುದು. ಇನ್ನು ಕೆಲವರಿಗೆ ವಾಕರಿಗೆ ಬಂದಂತೆ ಆಗಬಹುದು. ಶೀತ, ಕೆಮ್ಮು ಕೂಡ ಕಾಣಿಸಿಕೊಳ್ಳಬಹುದು. ಇದು ವಿರಳವಾಗಿ ಕೆಲವರಿಗೆ ಒಗ್ಗದಿರುವಿಕೆಯ ಪ್ರಭಾವದಿಂದಾಗಬಹುದು. ದೇಹ ಪ್ರಕೃತಿಗೆ ಒಗ್ಗದಿದ್ದರೆ ಬಳಸುವುದರಲ್ಲಿ ಅರ್ಥವಿಲ್ಲ. ಏನೇ ಆದರೂ ಸೀತಾಫಲ ಬಳಕೆಯು ದೇಹದ ಆರೋಗ್ಯಕ್ಕೆ ಉಪಯೋಗಕಾರಿಯಾಗಿದೆ ಎಂದರೆ ತಪ್ಪಾಗಲಾರದು.

-ಪುಷ್ಪಲತಾ ಕೆ.ಪಿ.

Share this:

  • WhatsApp
  • Post
  • Tweet
  • Print
  • Email
commercial cropcustard appledelicious eatforestgloryice creamprofitablerich in medicinal properties
Share 8 FacebookTwitterPinterestEmail
admin

previous post
ಕೆಎಸ್ ಡಿಎಲ್ ನಿಂದ 21 ನೂತನ ಉತ್ಪನ್ನ ಬಿಡುಗಡೆ
next post
ರಾಮಪ್ರಾಣ ಪ್ರತಿಷ್ಠಾಪನೆಗೆ ಕರ್ನಾಟಕದಲ್ಲಿಲ್ಲ ರಜೆ

You may also like

ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ

May 19, 2025

ಇತಿಹಾಸ ಮರೆಯದ ಕೌತುಕದ ಕ್ಷಣಗಳು..

April 21, 2025

ಕೇಂದ್ರ ಮಂತ್ರಿ ಕುಮಾರಣ್ಣನ ಲೇಟೆಸ್ಟು ಸಂಕಟ

February 17, 2025

ಅಮಿತ್ ಷಾ ಆಟ ಬಲ್ಲವರಾರು?

February 3, 2025

ಬಿಜೆಪಿ ಭಿನ್ನರಿಗೆ ಚುನಾವಣೆಯ ಕನಸು?

January 27, 2025

ನಿಖಿಲ್ ಇಲ್ಲಿಗೆ ಕುಮಾರಣ್ಣ ದಿಲ್ಲಿಗೆ

January 20, 2025

ಕೊತ ಕೊತ ಕುದಿಯುತ್ತಿದ್ದಾರೆ ಜಾರ್ಕಿಹೊಳಿ

January 6, 2025

ವಿಜಯೇಂದ್ರ ಸೇಫ್ಟಿಗೆ ನಡ್ಡಾ ಬರುತ್ತಿದ್ದಾರೆ

December 23, 2024

ಕಾಂಗ್ರೆಸ್ ಹಡಗಿಗೆ ಕೃಷ್ಣ ಹತ್ತಿದ ಕತೆ

December 10, 2024

ಬಿಜೆಪಿ ಬೆಕ್ಕಿಗೆ ಗಂಟೆ ಕಟ್ಟುವುದು ಹೇಗೆ?

December 9, 2024

9 comments

Revanth January 21, 2024 - 7:20 am

A very informative article on health

Reply
ಪುಟ್ಟರಾಮಯ್ಯ January 21, 2024 - 7:25 am

ಸೀತಾಫಲದ ಬಗ್ಗೆ ಉತ್ತಮ ಮಾಹಿತಿ ನೀಡಿದ್ದೀರಿ, ಧನ್ಯವಾದಗಳು

Reply
ರಾಮಪ್ರಾಣ ಪ್ರತಿಷ್ಠಾಪನೆಗೆ ಕರ್ನಾಟಕದಲ್ಲಿಲ್ಲ ರಜೆ – KMS January 21, 2024 - 1:47 pm

[…] ಅಂಕಣ […]

Reply
ಬಿಜೆಪಿ –ಜೆಡಿಎಸ್ ನಾಯಕರ ಚುನಾವಣೆ ಸಮಾಲೋಚನೆ – KMS January 21, 2024 - 2:08 pm

[…] ಅಂಕಣ […]

Reply
ಒಕ್ಕಲಿಗರು ಉದ್ಯಮದಲ್ಲಿಯೂ ಸಾಧಿಸಬೇಕು  – KMS January 21, 2024 - 3:24 pm

[…] ಅಂಕಣ […]

Reply
ಇಂದಿನ ದಿನ ಭವಿಷ್ಯ – KMS January 22, 2024 - 2:36 am

[…] ಅಂಕಣ […]

Reply
Bhagyamma January 22, 2024 - 8:01 am

Good information

Reply
Bhagya . V January 22, 2024 - 9:44 am

Very Important Information Madam

Reply
Jyothi A.P. January 22, 2024 - 4:27 pm

ಸೀತಾಫಲದ ಹಣ್ಣಿನ ಮಹತ್ವವನ್ನು ಸಮಾಜಕ್ಕೆ ಚೆನ್ನಾಗಿ ತಿಳಿಸಿದ್ದೀರ ಮೇಡಂ. ತುಂಬಾ ಚೆನ್ನಾಗಿದ್ದೆ ನಿಮ್ಮ ಮಹಿತಿ ಸೂಪರ್ ಸೂಪರ್

Reply

Leave a Reply to ಇಂದಿನ ದಿನ ಭವಿಷ್ಯ – KMS Cancel Reply

Save my name, email, and website in this browser for the next time I comment.

Social Networks

Facebook Twitter Instagram Linkedin Youtube Email Rss

KMS Analysis

  • ಶತ್ರು ದೇಶದ ಕ್ಷೇಮಕ್ಕಾಗಿ ಕಾಂಗ್ರೆಸ್ ಮಿಡಿಯುತ್ತಿದೆ : ಹೆಚ್ ಡಿಕೆ ಟೀಕೆ

    May 16, 2025
  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025
  • ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಕಸರತ್ತು

    May 8, 2025
  • ಭಯೋತ್ಪಾದನೆ ನಿಗ್ರಹ: ಪ್ರಧಾನಿ ಮೋದಿಗೆ ಸಂಪೂರ್ಣ ಬೆಂಬಲ ಘೋಷಿಸಿದ ದೇವೇಗೌಡರು

    May 6, 2025
  • ಜಾತಿಗಣತಿ ವರದಿ ದತ್ತಾಂಶ ಮರುಪರಿಶೀಲನೆಗೆ ನಿರ್ಧಾರ

    April 18, 2025

Categories

  • Special Story (180)
  • ಅಂಕಣ (102)
  • ಉದ್ಯೋಗ (237)
  • ದಿನ ಭವಿಷ್ಯ (110)
  • ರಾಜಕೀಯ (1,583)
  • ರಾಜ್ಯ (1,872)
  • ರಾಷ್ಟ್ರ (1,844)
  • ವಿಶ್ಲೇಷಣೆ (183)
  • ಶಿಕ್ಷಣ (318)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • ಮುಖ್ಯಮಂತ್ರಿ ಗಾದಿಗೆ ಶಿವಕುಮಾರ್ ತಂತ್ರಗಾರಿಕೆ ಆರಂಭ

    May 19, 2025
  • ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ

    May 19, 2025
  • 93ನೇ ವರ್ಷಕ್ಕೆ ಕಾಲಿಟ್ಟಿ ದೇವೇಗೌಡರು, ಶುಭ ಕೋರಿದ ಪ್ರಧಾನಿ ಮೋದಿ, ಅಮಿತ್ ಶಾ

    May 18, 2025

KMS Special

  • ಮುಖ್ಯಮಂತ್ರಿ ಗಾದಿಗೆ ಶಿವಕುಮಾರ್ ತಂತ್ರಗಾರಿಕೆ ಆರಂಭ

    May 19, 2025
  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025
  • ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಕಸರತ್ತು

    May 8, 2025
  • Facebook
  • Twitter
  • Linkedin
  • Youtube
  • Email
  • Telegram
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ

May 19, 2025
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ