ಔಷಧೀಯ ಗುಣಗಳ ಗಣಿ; ಶೀತ ಸಂಬಂಧಿ ಸಮಸ್ಯೆಗೆ ದಿವ್ಯ ಔಷಧ
ಬೆಂಗಳೂರು: ವರ್ಷದ ಯಾವುದೇ ಕಾಲವಾದರೂ ಸರಿಯೇ ಚರ್ಮ ಸಂಬಂಧಿ ವ್ಯಾಧಿಗಳು ಬಹಳಷ್ಟು ಕಾಡುತ್ತವೆ. ದುಬಾರಿಯಾದ ಅಲೋಪತಿ ಔಷಧಿ ಪಡೆದರೂ ಗುಣವಾಗುವುದು ವಿರಳ. ನಾನಾ ರೀತಿಯ ಅಲರ್ಜಿಗಳು ಮಕ್ಕಳಿಂದ ವಯೋವೃದ್ಧರವರೆಗೂ ಕಾಡುವುದು ಸಹಜ. ಸಾಂಪ್ರದಾಯಿಕ ಔಷಧಿ ಪದ್ಧತಿ ಹಾಗೂ ಆಯುರ್ವೇದದಲ್ಲಿ ಬಳಕೆ ಮಾಡುವ ತುಂಬೆ ಗಿಡ ಚರ್ಮದ ಅಲರ್ಜಿಗೆ ದಿವ್ಯ ಔಷಧ ಎಂದು ಪರಿಗಣಿಸಲಾಗುತ್ತದೆ.
ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಸಹಜವಾಗಿ ಬೆಳೆಯುವ ಸಸ್ಯ ತುಂಬೆ ಗಿಡ. ಸಂಸ್ಕೃತ ಭಾಷೆಯಲ್ಲಿ ತುಂಬೆಯನ್ನು ದ್ರೋಣ ಪುಷ್ಪ, ಚಿತ್ರಪತ್ರಿಕಾ ಎಂದು ಕರೆಯಲಾಗಿದೆ. ಇದರಲ್ಲಿ ವಿಫುಲವಾದ ಔಷಧ ಗುಣಗಳಿವೆ. ಹೀಗಾಗಿ ಇದನ್ನು ಕೀಟನಾಶಕವಾಗಿ ಮತ್ತು ಜ್ವರ, ಶೀತ, ಕೆಮ್ಮು ಹಾಗೂ ಚರ್ಮದ ತುರಿಕೆ ಮೊದಲಾದ ಸಮಸ್ಯೆಗಳಿಗೆ ಔಷಧವಾಗಿ, ರೋಗ ನಿವಾರಕವಾಗಿ ಹೆಚ್ಚು ಬಳಸಲಾಗುತ್ತಿದೆ.
ಬರಡು ಭೂಮಿಯಲ್ಲೂ ಬೆಳೆಯುವ ಔಷಧಿ ಸಸ್ಯ
ಒಣ ಪ್ರದೇಶದಲ್ಲಿ, ಕಡಿಮೆ ಮಳೆಯಾಗುವ ಹಾಗೂ ಬರಡು ಭೂಮಿಯಲ್ಲೂ ಬೆಳೆಯುವ ಸಸ್ಯ. ಗ್ರಾಮೀಣ ಭಾಗದಲ್ಲಿ ಹೊಲ, ರಸ್ತೆ, ಗುಡ್ಡ, ಬೆಟ್ಟವೆಂಬ ಬೇಧವಿಲ್ಲದೆ, ಎಲ್ಲಂದರಲ್ಲಿ ಬೆಳೆಯುವ ಗುಣವುಳ ಸಸ್ಯ. ಮುಳ್ಳಿಲ್ಲದೆ, ರಸತುಂಬಿದ ಹಸಿರು ಪುಟ್ಟ ಎಲೆಗಳುಳ್ಳ ಚತುರ್ಭುಜದಂತೆ ಕವಲುಗಳು ಕಂಡು ಬರುತ್ತವೆ. ಬಿಳಿ ಹೂವುಗಳಿಂದ ನೋಡಲು ಸುಂದರವಾಗಿಯೂ ಕಾಣುತ್ತದೆ. ಎತ್ತರದ ಬೆಟ್ಟ, ಬಂಡೆಗಳ ಮೇಲೂ ಸಾಕಷ್ಟು ಪ್ರಮಾಣದಲ್ಲಿ ಬೆಳೆಯುತ್ತದೆ.
ಭೂಮಿಯ ಫಲವತ್ತತೆ ಆಧರಿಸಿ ಅದರ ಬೆಳೆಯುವಿಕೆ ಅವಲಂಭಿಸಿರುತ್ತದೆ. ಬರಡು ಭೂಮಿಯಲ್ಲಿ ಕುಬ್ಜವಾಗಿ ಬೆಳೆದರೆ, ಫಲವತ್ತಾದ ಭೂಮಿಯಲ್ಲಿ ಎಲೆ, ಹೂವುಗಳಿಂದ ಪೊದೆಯಂತೆ ಸಮೃದ್ಧಿಯಾಗಿ ಬೆಳೆಯತ್ತದೆ. ಎಷ್ಟೇ ಬೆಳೆದರೂ ಒಂದರಿಂದ ಎರಡು ಅಡಿ ದಾಟುವುದಿಲ್ಲ. ನಗರ, ಪಟ್ಟಣಗಳಲ್ಲಿ ಅತೀ ವಿರಳವಾಗಿ ದೊರೆಯುತ್ತದೆ.
ರಾಜ್ಯದ 219 ಕೇಂದ್ರಗಳಲ್ಲಿ 800 ಡಯಾಲಿಸಿಸ್ ಯಂತ್ರಗಳ ಅಳವಡಿಕೆ
ನಮ್ಮ ಪೂರ್ವಜರು ಮನೆ ಮದ್ದಿನಂತೆ ತುಂಬೆ ಸೊಪ್ಪು ಬಳಕೆ ಮಾಡುತ್ತಿದ್ದರು. ಜ್ವರ, ಕೆಮ್ಮು ಶೀತ ಸಮಸ್ಯೆಗಳಿಗೆ ತುಂಬೆ ಸೊಪ್ಪಿನ ಕಸಾಯ ಮಾಡಿ ಕುಡಿಯುವುದು ರೂಢಿಯಲ್ಲಿದೆ. ತಲೆ, ಸಂದುಗಳಲ್ಲಿ ಉಂಟಾಗುವ ಚರ್ಮದ ತುರಿಕೆ, ಅಲರ್ಜಿಗಳನ್ನು ಪರಿಣಾಮಕಾರಿಯಾಗಿ ನಿವಾರಿಸುವ ಗುಣ ತುಂಬೆ ಸೊಪ್ಪಿಗಿದೆ. ಅದೇ ರೀತಿ ಚರ್ಮದ ಮೇಲೆ ನಾನಾ ಕಾರಣಕ್ಕಾಗಿ ಸಣ್ಣ ಗುಳೆಗಳು, ತುರಿಕೆ, ದದ್ದುಗಳು ಉಂಟಾಗುವುದನ್ನು ಕಾಣಬಹುದು.
ಇಂತಹ ಸಂದರ್ಭದಲ್ಲಿ ತುಂಬೆ ಸೊಪ್ಪನ್ನು ಅರೆದು ಪೇಸ್ಟ್ ಮಾಡಿ ಹಚ್ಚಿ ಕೆಲ ಸಮಯದ ನಂತರ ತೊಳೆದರೆ ಗುಣವಾಗುತ್ತದೆ. ತಲೆಯ ಅಲರ್ಜಿಗಳಿಗೆ ಸ್ನಾನ ಮಾಡುವ ಬಿಸಿ ನೀರಿನಲ್ಲಿ ಸ್ವಲ್ಪ ಸೊಪ್ಪು ಹಾಕಿದರೆ, ಅದರ ರಸವುಳ್ಳ ನೀರಿನಿಂದ ಸ್ನಾನ ಮಾಡಬಹುದು. ಇಲ್ಲವೇ ಕುದಿಯುವ ನೀರಿನಲ್ಲಿ ಹಾಕಿ ಅದರ ರಸವನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡಬಹುದು. ಸೊಪ್ಪನ್ನು ಒಣಗಿಸಿ ಪುಡಿ ಮಾಡಿ ಸುರಕ್ಷಿತವಾಗಿ ಇಟ್ಟುಕೊಂಡು ಬೇಕಾದಾಗ ಸೀಗೆಕಾಯಿ ಬಳಸುವ ರೀತಿಯಲ್ಲಿ ತಲೆ ಹಾಗೂ ಚರ್ಮದ ಅಲರ್ಜಿಗೆ ಬಳಸಬಹುದು.
ತಜ್ಞರ ಸಲಹೆ ಪಡೆದು ಬಳಸುವುದು ಸೂಕ್ತ
ಮನೆ ಮದ್ದೆಂಬ ಮಾತ್ರಕ್ಕೆ ಬಳಕೆಯ ವಿಧಾನ, ಪರಿಮಾಣ, ಸ್ವರೂಪ ಗೊತ್ತಿಲ್ಲದೆ, ಪ್ರಯೋಗ ಮಾಡುವುದು ಸೂಕ್ತವಲ್ಲ; ಸಮಂಜಸವೂ ಅಲ್ಲ. ಪರಿಣಿತ ತಜ್ಞರಿಂದ ಸಲಹೆ ಪಡೆದು ಬಳಸುವುದು ಉತ್ತಮ. ಇಲ್ಲವೆ, ಭಾರತೀಯ ವೈದ್ಯಪದ್ಧತಿಯ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು. ಏಕೆಂದರೆ, ಎಲ್ಲಾ ಔಷಧವೂ ಎಲ್ಲರಿಗೂ ಗುಣವಾಗುವ ಔಷಧವಲ್ಲ. ವಿರಳವಾಗಿ ಕೆಲವರಿಗೆ ಒಗ್ಗದಿರುವಿಕೆ ಇದ್ದು, ಪ್ರತಿಕೂಲ ಪರಿಣಾಮ ಉಂಟಾಗಬಹುದು. ಅಂತಹ ಸಂದರ್ಭದಲ್ಲಿ ಉಪಯೋಗಿಸದಿರುವುದೇ ಲೇಸು.
ತುಂಬೆ ಸೊಪ್ಪಿನ ರಸವನ್ನು ಕೀಟನಾಶಕವಾಗಿ ಕೀಟಗಳನ್ನು ನಿಯಂತ್ರಿಸಲು ಹಿಂದಿನ ಕಾಲದಲ್ಲಿ ಬಳಸಲಾಗುತ್ತಿತ್ತು. ಯಾವ ರೀತಿ? ಹೇಗೆ? ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಈ ಮಾಹಿತಿಯು ಅಂತರ್ಜಾಲದಲ್ಲಿ ದೊರೆಯುವ ಮಾಹಿತಿ ಆಧಾರಿತವಾಗಿದ್ದು, ಔಷಧಿಯಾಗಿ ಬಳಸುವ ಮುನ್ನ ಎಚ್ಚರಿಕೆ ವಹಿಸುವುದು ಅಗತ್ಯ. ಅಡ್ಡ ಪರಿಣಾಮಗಳ ಬಗ್ಗೆಯೂ ಅರಿವಿರಬೇಕು.
ಸೂರಜ್ ರೇವಣ್ಣ – ಡಿ.ಕೆ.ಶಿವಕುಮಾರ್ ಭೇಟಿಯ ರಹಸ್ಯವೇನು?
ಮನೆಯ ಮುಂದೆ ಹೂವಿನ ಕುಂದಗಳ ರೀತಿಯಲ್ಲಿ ತುಂಬೆಗಿಡ ಬೆಳಸಬಹುದು. ಹಚ್ಚ ಹಸಿರಿನಿಂದ ಬಿಳಿ ಹೂವಿನೊಂದಿಗೆ ಕಂಗೊಳಿಸುತ್ತದೆ. ಎಲೆಯ ತುಂಬ ರಸವೂ ಇರುತ್ತದೆ. ಬೇಸಿಗೆಯ ವೇಳೆಗೆ ಒಣಗಿರುತ್ತದೆ. ಆ ವೇಳೆಗೆ ಅದರಲ್ಲಿ ಬೀಜದ ಗಂಟುಗಳು ಕಂಡುಬರುತ್ತವೆ. ಈ ಗಿಡ ಮನೆಯ ಸುತ್ತಮುತ್ತವಿದ್ದರೆ ಆರೋಗ್ಯಕರ. ಮನೆಯ ಬಳಿ ಇದ್ದರೆ ಶುಭಕರ ಎಂಬ ಪ್ರತೀತಿ ಇದೆ.
ತುಂಬೆಯ ಪೌರಾಣಿಕ ಹಿನ್ನಲೆ
ತುಂಬೆಗಿಡವನ್ನು ಕೇವಲ ಔಷಧವಾಗಿ ಮಾತ್ರ ಬಳಸುವುದು ರೂಢಿಯಲ್ಲಿ ಇಲ್ಲ. ಇದನ್ನು ಪೂಜಿಸಲಾಗುತ್ತದೆ. ಬಿಲ್ವಪತ್ರೆ ಹೇಗೋ ಹಾಗೆಯೇ ತುಂಬೆಗಿಡದ ಬಿಳಿಯ ಸಣ್ಣ ಸಣ್ಣ ಹೂವುಗಳನ್ನು ಶಿವನಿಗೆ ಅರ್ಪಿಸಿ ಪೂಜಿಸಲಾಗುತ್ತದೆ. ಶಿವನಿಗೆ ಸಂಬಂಧಿಸಿದ ಹಬ್ಬಗಳಲ್ಲಿ ಈ ಹೂವನ್ನು ಸಂಪ್ರದಾಯದಂತೆ ಬಳಸಲಾಗುತ್ತದೆ.
ಸಮುದ್ರ ಮಂಥನದ ಸಂದರ್ಭದಲ್ಲಿ ಉತ್ಪತ್ತಿಯಾದ ವಿಷವನ್ನು ಶಿವ ಮಾತ್ರ ಕುಡಿದಿರುವುದು ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ವಿಷವು ದೇಹದೊಳಗೆ ಹೋಗದಂತೆ ಪಾರ್ವತಿಯು ಶಿವನ ಗಂಟಲಿನಲ್ಲೇ ತಡೆದಳು. ಹೀಗಾಗಿ ವಿಷಕಂಠ, ನಂಜುಂಡನೆಂಬ ಹೆಸರು ಶಿವನಿಗೆ ಬಂದಿದೆ ಎಂಬ ಪೌರಾಣಿಕ ಸಂಗತಿ ಗೊತ್ತಿರುವುದೇ ಆಗಿದೆ. ಕುಡಿದ ವಿಷದಿಂದ ಶಿವನಿಗೆ ತೊಂದರೆಯಾಗದಿರಲಿ ಎಂಬ ಕಾರಣಕ್ಕಾಗಿ ವಿಷ ನಿವಾರಕವಾಗಿ ಪಾರ್ವತಿ ಬಳಸಿದ ಸಸ್ಯ ತುಂಬೆ ಗಿಡ ಎನ್ನಲಾಗುತ್ತಿದೆ.
ಹಠವಿಡಿದು ಬಾಲರಾಮನ ದರ್ಶನ ಪಡೆದ ಗೌಡರು