ಪಂಚಾಂಗ
ಬುಧವಾರ, 31 ಜನವರಿ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಹೇಮಂತ
ಮಾಸ : ಪುಷ್ಯ
ಪಕ್ಷ : ಕೃಷ್ಣ
ತಿಥಿ : ಪಂಚಮಿ
ನಕ್ಷತ್ರ : ಹಸ್ತ
ಯೋಗ : ಸುಕರ್ಮ
ಕರಣ : ತೈತಲೆ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 46
ಸೂರ್ಯಾಸ್ತ : ಸಂಜೆ 6 : 20
ರಾಹುಕಾಲ : 12: 33- 02: 00
ಯಮಗಂಡ ಕಾಲ : 08 : 13 – 09 : 40
ಗುಳಿಕಕಾಲ : 11 : 06 – 12 : 33
ರಾಶಿ ಫಲ
ಮೇಷ : ಕೆಲಸದ ಸ್ಥಳದಲ್ಲಿ ಪ್ರಾಮಾಣಿಕ ಪ್ರಯತ್ನವಿರಲಿ. ಆರೋಗ್ಯದ ಬಗ್ಗೆ ಗಮನಹರಿಸಿ.
ವೃಷಭ : ಮನೆಯಲ್ಲಿ ಖರ್ಚು ಹೆಚ್ಚಳ. ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ.
ಮಿಥುನ : ಹಿತಶತ್ರುಗಳ ಬಾಧೆ ಅಧಿಕವಾಗಬಹುದು. ಕಾಲಿನಲ್ಲಿ ನೋವು ಕಾಣಿಸುವ ಸಂಭವ.
ಕಟಕ : ಹಳೆಯ ಹೂಡಿಕೆಗಳಿಂದ ಲಾಭ ಗಳಿಸುವಿರಿ. ಅನಾಥರಿಗೆ ಸಹಾಯ ಮಾಡಿ.
ಸಿಂಹ : ಮಾತಿನಲ್ಲಿ ಮೃದುತ್ವವಿರಲಿ. ನೆರೆ-ಹೊರೆಯವರಿಂದ ಸಂಬಂಧ ಹದಗೆಡಬಹುದು.
ಕನ್ಯಾ : ವಿಳಂಬಿತ ಕೆಲಸಗಳು ಮರು ಚಾಲನೆ ಪಡೆಯುತ್ತವೆ. ನಿಮ್ಮ ನಡವಳಿಕೆ ತಂಡದಲ್ಲಿ ಸ್ಪೂರ್ತಿಯನ್ನುಂಟು ಮಾಡುತ್ತದೆ.
ತುಲಾ : ಮೇಲಾಧಿಕಾರಿಯಿಂದ ನಿಂದನೆಗೆ ಒಳಗಾಗುತ್ತೀರಿ. ಕೆಲಸವು ಮಂದ ಕಾರ್ಯದಲ್ಲಿ ಜರುಗುವುದು.
ವೃಶ್ಚಿಕ : ಆಸ್ತಿ ಖರೀದಿ ಅವಕಾಶವಿದೆ. ತರಾತುರಿಯಿಂದ ಕೆಲಸ ಮಾಡುವುದನ್ನು ತಪ್ಪಿಸಿ.
ಧನಸ್ಸು : ಆದಾಯ ವೃದ್ಧಿಯಾಗುವುದು. ನಿಮ್ಮ ಪ್ರತಿಭೆಯಿಂದ ಗೌರವಕ್ಕೆ ಪಾತ್ರರಾಗುತ್ತೀರಿ.
ಮಕರ : ವಿದ್ಯಾರ್ಥಿಗಳಿಗೆ ಉತ್ತಮ ದಿನ. ರಹಸ್ಯ ಪ್ರೇಮ ಪ್ರಕರಣಗಳು ಬಹಿರಂಗಗೊಳ್ಳಬಹುದು.
ಕುಂಭ : ಸಂಗಾತಿಯೊಂದಿಗೆ ವಿರಸ. ದೇಹದಲ್ಲಿ ಪಿತ್ತ ಹೆಚ್ಚಾಗಬಹುದು.
ಮೀನ : ಸಂತೋಷದಿಂದ ಹಣ ಖರ್ಚು ಮಾಡುವಿರಿ. ಶರೀರಕ್ಕೆ ವಿಶ್ರಾಂತಿ ಹೆಚ್ಚು ಬೇಕಾಗಬಹುದು.