ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಅಭಿಜಿತ್ ಮುಹೂರ್ತ: 12 : 11 – 12 : 57
ಅಮೃತ ಘಳಿಗೆ: 08 : 15 – 09 : 42
ಕಿರು ಪಂಚಾಂಗ
ದಿನ ವಿಶೇಷ: ಕುಂಭ ಸಂಕ್ರಾಂತಿ
ಮಂಗಳವಾರ, 13 ಫೆಬ್ರವರಿ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಮಾಘ
ಪಕ್ಷ : ಶುಕ್ಲ
ತಿಥಿ : ಚೌತಿ
ನಕ್ಷತ್ರ : ಉತ್ತರ ಭಾದ್ರಾ
ಯೋಗ : ಸಾಧ್ಯ
ಕರಣ : ವಿಷ್ಠಿ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 43
ಸೂರ್ಯಾಸ್ತ : ಸಂಜೆ 06 : 25
ರಾಹುಕಾಲ : 03: 29 – 04: 57
ಯಮಗಂಡ ಕಾಲ : 09 : 38 – 11 : 06
ಗುಳಿಕಕಾಲ : 12 : 34 – 02 : 02
ರಾಶಿ ಫಲ
ಮೇಷ : ಕುಟುಂಬ ಸದಸ್ಯರಲ್ಲಿ ಅನಾರೋಗ್ಯ ಉಂಟಾಗಬಹುದು. ವ್ಯಾಪಾರದಲ್ಲಿ ಅಭಿವೃದ್ಧಿ. ಗಾಳಿ ಬಂದ ಕಡೆ ತೂರಿಕೊಳ್ಳುವ ನಡವಳಿಕೆ ರೂಢಿಸಿಕೊಳ್ಳಿ.
ವೃಷಭ : ಮಿತಿಮೀರಿದ ವೆಚ್ಚ ಸಂಕಟ ತರಬಹುದು. ಸ್ವಾಭಿಮಾನದಿಂದ ಧನ ನಷ್ಟವಾಗಬಹುದು. ಅನ್ಯರ ಮುಂದೆ ಸ್ವಪ್ರಶಂಸೆ ಮಾಡಿಕೊಳ್ಳುವುದು ಒಳ್ಳೆಯದಲ್ಲ.
ಮಿಥುನ : ಸಾಲವನ್ನು ಹಿಂದಿರುಗಿಸುವಿರಿ. ಮುರಿದು ಹೋಗಿದ್ದ ಸಂಬಂಧವನ್ನು ಸರಿಪಡಿಸಿಕೊಳ್ಳುತ್ತೀರಿ. ಮಿತ್ರರಿಂದ ಸಹಾಯ ದೊರೆಯುವುದು.
ಕಟಕ : ಸ್ನೇಹಿತರೊಡನೆ ಸಮಯ ಕಳೆಯುತ್ತೀರಿ. ಮಂದಗತಿಯಲ್ಲಿ ಕೆಲಸಗಳು ಸಾಗಲಿವೆ. ನಿಮ್ಮಿಂದಾದ ತಪ್ಪಿಗೆ ಇತರರನ್ನು ಹೊಣೆಗಾರರನ್ನಾಗಿ ಮಾಡಬೇಡಿ.
ಸಿಂಹ : ವೈವಾಹಿಕ ಜೀವನದಲ್ಲಿ ನೆಮ್ಮದಿ ಕಾಣುವಿರಿ. ಹೊಸ ಕೆಲಸ ಪ್ರಾರಂಭಿಸಲು ಯೋಗ್ಯ ಸಮಯ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ.
ಕನ್ಯಾ : ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ದಿನ. ಗೊಂದಲದಲ್ಲಿ ದಿನ ಕಳೆಯುವಿರಿ.
ತುಲಾ : ವಿವಾಹ ಯೋಗ ಪ್ರಾಪ್ತಿ. ತಾಯಿಯಿಂದ ಒಳ್ಳೆಯ ಸುದ್ದಿ ದೊರಯಲಿದೆ. ಕುಟುಂಬದಲ್ಲಿ ಸಂಭ್ರಮದ ವಾತಾವರಣ.
ವೃಶ್ಚಿಕ : ಮುಂದೂಡದೆ ಸಕಾಲದಲ್ಲಿ ಕೆಲಸ ಪೂರ್ಣಗೊಳಿಸುವಿರಿ. ಪ್ರೇಮಿಗಳು ಸುಮಧುರ ಸಮಯ ಕಳೆಯುವರು. ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ.
ಧನಸ್ಸು : ಆದಾಯ ಅಧಿಕವಾಗುತ್ತದೆ. ಕಾನೂನಿನ ವಿಚಾರಗಳು ತೊಡಕಾಗಬಹುದು. ಅನ್ಯರ ವಿಚಾರಕ್ಕೆ ತಲೆಹಾಕದಿರಿ.
ಮಕರ : ಮೇಲಾಧಿಕಾರಿಗಳಿಂದ ಪ್ರಶಂಸೆ ಪಡೆಯುವಿರಿ. ಸಮಾಜದಲ್ಲಿ ಗೌರವ ಹೆಚ್ಚಲಿದೆ. ಹೊಸ ಪ್ರೇಮ ಸಂಬಂಧ ಬೆಳೆಯುವ ಸಾಧ್ಯತೆಯುಂಟು.
ಕುಂಭ : ಆರ್ಥಿಕ ಮುಗ್ಗಟ್ಟಿಗೆ ಪರಿಹಾರ ಸಿಗಲಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹಿನ್ನಡೆ. ಮನೆಯಲ್ಲಿ ಅಧಿಕ ಒತ್ತಡ ಉಂಟಾಗಲಿದೆ.
ಮೀನ : ಹವ್ಯಾಸಗಳು ಚಟಗಳಾಗಬಹುದು. ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಸಕಾಲವಲ್ಲ. ಭಾವನೆಗಳ ಮೇಲೆ ನಿಯಂತ್ರಣವಿರಲಿ.