ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : 12 : 07 – 12 : 55
ಅಮೃತ ಘಳಿಗೆ : ಬೆಳಿಗ್ಗೆ 07 : 08 – 08 : 37
ಗುರುವಾರ, 7 ಮಾರ್ಚ್ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಮಾಘ
ಪಕ್ಷ : ಕೃಷ್ಣ
ತಿಥಿ : ದ್ವಾದಶಿ
ನಕ್ಷತ್ರ : ಉತ್ತರಾಷಾಢ
ಯೋಗ : ವರಿಯಾನ್
ಕರಣ : ಕೌಲವ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 32
ಸೂರ್ಯಾಸ್ತ : ಸಂಜೆ 06 : 29
ರಾಹುಕಾಲ : 02 : 00 – 03 : 30
ಯಮಗಂಡ ಕಾಲ : 06 : 32 – 08 : 02
ಗುಳಿಕಕಾಲ : 09 : 31 – 11 : 01
ರಾಶಿ ಫಲ
ಮೇಷ : ವ್ಯಾಪಾರದಲ್ಲಿ ಪ್ರಗತಿ. ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳಲಿದ್ದೀರಿ. ನಿಗೂಢ ವಿಷಯಗಳ ಬಗ್ಗೆ ಆಸಕ್ತಿ ಮೂಡಲಿದೆ.
ವೃಷಭ : ಮನೆಯಲ್ಲಿ ವಿವಾಹದ ಮಾತುಕತೆ ನಡೆಯಲಿದೆ. ಸ್ನೇಹಿತರೊಂದಿಗೆ ಸಮಯ ಕಳೆಯುತ್ತೀರಿ. ತಂದೆಯ ಸಲಹೆಯಂತೆ ವ್ಯವಹರಿಸಿ.
ಮಿಥುನ : ಕುಟುಂಬದಲ್ಲಿ ಕಲಹ. ನಿಮ್ಮ ಕಾರ್ಯಶೈಲಿಯಿಂದ ನೀವೇ ತೃಪ್ತರಾಗುವುದಿಲ್ಲ. ಅಹಿತಕರ ಮಾತು ಕೇಳಬೇಕಾಗಬಹುದು.
ಕಟಕ : ಪ್ರೇಮಿಗಳು ದೂರ ಪ್ರಯಾಣ ಹೊರಡಬಹುದು. ಶತ್ರುಗಳು ಮಿತ್ರರಾಗುವರು. ಉದ್ಯೋಗ ಬದಲಾವಣೆ ಸಾಧ್ಯತೆಯುಂಟು.
ಸಿಂಹ : ಲಾಭಾಂಶದ ಮೂಲಗಳು ವೃದ್ಧಿಯಾಗಲಿವೆ. ಕುಟುಂಬದಲ್ಲಿ ಕಲಹ ಕಂಡುಬರಲಿದೆ. ಸಂಗಾತಿಯಿಂದ ಉಡುಗೊರೆ ದೊರೆಯಲಿದೆ.
ಕನ್ಯಾ : ಆರ್ಥಿಕ ಲಾಭದ ಸಾಧ್ಯತೆಗಳಿವೆ. ಮಕ್ಕಳ ವಿಚಾರದಲ್ಲಿ ಸಂತೋಷಗೊಳ್ಳುತ್ತೀರಿ. ಸ್ನೇಹಿತರೊಂದಿಗೆ ಸಮಯ ಕಳೆಯುತ್ತೀರಿ.
ತುಲಾ : ಆರೋಗ್ಯದ ಬಗ್ಗೆ ಗಮನವಿರಲಿ. ಕೋಪದ ಮೇಲೆ ನಿಯಂತ್ರಣವಿರಲಿ. ಪಿತ್ರಾರ್ಜಿತ ಆಸ್ತಿಯ ಕಲಹ ಉಂಟಾಗಬಹುದು.
ವೃಶ್ಚಿಕ : ಧಾರ್ಮಿಕ ವ್ಯವಹಾರಗಳಲ್ಲಿ ಭಾಗವಹಿಸುತ್ತೀರಿ. ಉದ್ಯೋಗದಲ್ಲಿ ಗೌರವ ಹೆಚ್ಚಲಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸಿದ್ಧಿ ಹೊಂದುವಿರಿ.
ಧನಸ್ಸು : ಯಾರಿಗೂ ಭರವಸೆ ನೀಡದಿರಿ. ಸಭ್ಯತೆಯ ಮಾತುಗಳಾಡುವುದು ಒಳ್ಳೆಯದು. ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗೆ ಶುಭ ದಿನ.
ಮಕರ : ಉದ್ಯೋಗದಲ್ಲಿ ವೇತನ ಹೆಚ್ಚಾಗಲಿದೆ. ಮನರಂಜನಾ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸುವರಿ. ಸಂಗಾತಿಯೊಂದಿಗಿನ ಬಾಂಧವ್ಯ ವೃದ್ಧಿಸಲಿದೆ.
ಕುಂಭ : ದಾಂಪತ್ಯದಲ್ಲಿ ಕಲಹ ಕಂಡುಬರಲಿದೆ. ದಿಡೀರ್ ನಿರ್ಧಾರಗಳನ್ನು ತೆಗೆದುಕೊಳ್ಳದಿರಿ. ಹಣದ ವ್ಯವಹಾರದಲ್ಲಿ ಜಾಗರೂಕರಾಗಿರಿ.
ಮೀನ : ಐಷಾರಾಮಿ ವಸ್ತುಗಳನ್ನು ಖರೀದಿಸಲಿದ್ದೀರಿ. ದೇವಾಲಯಗಳಿಗೆ ಭೇಟಿ ನೀಡಬಹುದು. ತಾಳ್ಮೆಯಿಂದ ವ್ಯವಹರಿಸಿ.