ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : ಇಲ್ಲ
ಅಮೃತ ಘಳಿಗೆ : ಅಪರಾಹ್ನ 11 : 50 – 01 : 18
ಬುಧವಾರ, 13 ಮಾರ್ಚ್ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಪಾಲ್ಗುಣ
ಪಕ್ಷ : ಶುಕ್ಲಪಕ್ಷ
ತಿಥಿ : ಚೌತಿ
ನಕ್ಷತ್ರ : ಅಶ್ವಿನಿ
ಯೋಗ : ಇಂದ್ರ
ಕರಣ : ವಣಿಜ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 28
ಸೂರ್ಯಾಸ್ತ : ಸಂಜೆ 06 : 30
ರಾಹುಕಾಲ : 12 : 29 – 01 : 59
ಯಮಗಂಡ ಕಾಲ : 07 : 58 – 09 : 29
ಗುಳಿಕಕಾಲ : 10 : 59 – 12 : 29
ರಾಶಿ ಫಲ
ಮೇಷ : ಕೆಲಸದಲ್ಲಿ ದಕ್ಷತೆ ಹೆಚ್ಚಾಗಲಿದೆ. ನೀವು ಅಂದುಕೊಂಡಂತೆ ದಿನವಿರುತ್ತದೆ. ಸ್ನೇಹಿತರೊಂದಿಗೆ ಸಂತೋಷ ಕೂಟದಲ್ಲಿ ಪಾಲ್ಗೊಳ್ಳುವಿರಿ.
ವೃಷಭ : ದಿಢೀರ್ ನಿರ್ಧಾರ ಕೈಗೊಳ್ಳುವಿರಿ. ದೂರ ಪ್ರಯಾಣ ಒಳ್ಳೆಯದಲ್ಲ. ಮಾದಕ ವಸ್ತುಗಳ ವ್ಯಸನಿಗಳಿಂದ ದೂರವಿರುವುದು ಸೂಕ್ತ.
ಮಿಥುನ : ಕುಟುಂಬದ ಅಗತ್ಯಗಳಿಗಾಗಿ ಹಣ ವ್ಯಯವಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ತಾಳ್ಮೆಯಿಂದ ವ್ಯವಹಿರಿಸಿದರೆ ಒಳ್ಳೆಯದು.
ಕಟಕ : ಮಕ್ಕಳ ಪ್ರಗತಿಯ ಬಗ್ಗೆ ಹೆಮ್ಮೆ ಪಡುವಿರಿ. ಸಂಗಾತಿಯ ಸಲಹೆ ಪಡೆಯುವುದು ಉತ್ತಮ. ಆಸ್ತಿ ಖರೀದಿಯ ಯೋಗವಿದೆ.
ಸಿಂಹ : ಅಕ್ಕಪಕ್ಕದವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಿ. ತಪ್ಪು ಕಲ್ಪನೆಯಿಂದ ದೂರವಿರಿ. ಹಿತಶತ್ರುಗಳ ಬಾಧೆ ಅಧಿಕವಾಗುವುದು.
ಕನ್ಯಾ : ರಕ್ತದೊತ್ತಡ ಸಮಸ್ಯೆ ಉಂಟಾಗಬಹುದು. ಹಳೆಯ ಸ್ನೇಹಿತರ ಭೇಟಿಯಾಗಬಹುದು. ನಿಮ್ಮ ಆಲೋಚನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ತುಲಾ : ನಿಮ್ಮೊಂದಿಗೆ ದಿನ ಕಳೆಯುವವರು ಸಂತೋಷದಿಂದ ಇರುತ್ತಾರೆ. ಸಂಗಾತಿಯು ಉತ್ತಮ ಸ್ನೇಹಿತರಾಗುವರು. ಶಾಂತ ಚಿತ್ತದಿಂದ ಕಾರ್ಯನಿರ್ವಹಿಸಿ.
ವೃಶ್ಚಿಕ : ಭಯದ ಭಾವನೆ ಅಧಿಕವಾಗಲಿದೆ. ದೊಡ್ಡ ಸಮಸ್ಯೆಗೆ ಪರಿಹಾರ ದೊರಕುವುದು. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.
ಧನಸ್ಸು : ಕಲಾವಿದರಿಗೆ ಉತ್ತಮ ದಿನ. ಸ್ನೇಹಿತರಿಂದ ಸಹಾಯ ದೊರೆಯಲಿದೆ. ಮಕ್ಕಳ ವಿಚಾರದಲ್ಲಿ ಸಮಸ್ಯೆ ತಲೆ ದೋರಲಿದೆ.
ಮಕರ : ಯಾವುದೇ ಹೊಸ ಕೆಲಸ ಪ್ರಾರಂಭಿಸದಿರಿ. ಅಸಿಡಿಟಿ ಸಮಸ್ಯೆ ಕಾಡಬಹುದು. ಯೋಗ ಮತ್ತು ಪ್ರಾಣಯಾಮ ಮಾಡುವುದು ಒಳ್ಳೆಯದು.
ಕುಂಭ : ದೀರ್ಘಾವಧಿ ರಜೆ ಪಡೆಯುವ ಬಗ್ಗೆ ಆಲೋಚಿಸುವಿರಿ. ವಿದ್ಯಾರ್ಥಿಗಳಿಗೆ ಕಠಿಣ ಶ್ರಮದ ಅವಶ್ಯಕತೆ ಇದೆ. ಜನರ ನಂಬಿಕೆಗೆ ಪಾತ್ರರಾಗುವಿರಿ.
ಮೀನ : ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕಣ್ಣಿನ ಆರೋಗ್ಯದ ಬಗ್ಗೆ ಗಮನವಿರಲಿ. ಸಣ್ಣ ವಿಚಾರಗಳಿಗೆ ಕೋಪಗೊಳ್ಳದಿರಿ.