ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : ಅಪರಾಹ್ನ 12 : 04 – 12 : 52
ಅಮೃತ ಘಳಿಗೆ : ಬೆಳಿಗ್ಗೆ 07 : 44 – 09 : 23
ಭಾನುವಾರ, 17 ಮಾರ್ಚ್ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಪಾಲ್ಗುಣ
ಪಕ್ಷ : ಶುಕ್ಲಪಕ್ಷ
ತಿಥಿ : ಅಷ್ಟಮಿ
ನಕ್ಷತ್ರ : ಮೃಗಶಿರ
ಯೋಗ : ಆಯುಷ್ಮಾನ್
ಕರಣ : ವಿಷ್ಠಿ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 26
ಸೂರ್ಯಾಸ್ತ : ಸಂಜೆ 06 : 30
ರಾಹುಕಾಲ : 05 : 00 – 06 : 30
ಯಮಗಂಡ ಕಾಲ : 12 : 28 – 01 : 58
ಗುಳಿಕಕಾಲ : 03 : 29 – 05 : 00
ರಾಶಿ ಫಲ
ಮೇಷ : ವಿದ್ಯಾರ್ಥಿಗಳು ಹೊಸ ವಿಚಾರ ಕುರಿತು ಅಧ್ಯಯನ ಮಾಡುವರು. ನೂತನ ಆದಾಯದ ಮೂಲಗಳು ವೃದ್ಧಿಯಾಗಲಿವೆ. ಅತಿಥಿಗಳ ಆಗಮನವಾಗಲಿದೆ.
ವೃಷಭ : ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಉದ್ಯೋಗದಲ್ಲಿ ಬದಲಾವಣೆ ಸಂಭವ. ಹಿರಿಯರ ಮಾತನ್ನು ಗೌರವಿಸುವುದು ಒಳ್ಳೆಯದು.
ಮಿಥುನ : ಆರೋಗ್ಯದ ಕಡೆ ಲಕ್ಷ್ಯವಿರಲಿ. ಹೊಸ ಯೋಜನೆಗಳನ್ನು ರೂಪಿಸಲು ಸಕಾಲ. ವೈದ್ಯರಿಗೆ ಉತ್ತಮ ದಿನ.
ಕಟಕ : ಅಸಿಡಿಟಿ ಸಮಸ್ಯೆ ಕಾಡಬಹುದು. ಅನ್ಯರ ವಿಚಾರಕ್ಕೆ ತಲೆಹಾಕದಿರಿ. ಆರೋಗ್ಯ ಮತ್ತು ಕೆಲಸದ ಕಡೆ ಗಮನಹರಿಸುವುದು ಸೂಕ್ತ.
ಸಿಂಹ : ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಿರಿ. ಕುಟುಂಬದಲ್ಲಿ ಸಂತಸದ ವಾತಾವರಣವಿರಲಿದೆ. ಧನಾತ್ಮಕ ಆಲೋಚನೆಯಿಂದ ಕೂಡಿರುತ್ತೀರಿ.
ಕನ್ಯಾ : ಕೆಲಸದಲ್ಲಿ ಪ್ರಗತಿ ಕಂಡುಬರಲಿದೆ. ಪೋಷಕರಿಂದ ಬೆಂಬಲ ಸಿಗಲಿದೆ. ಭವಿಷ್ಯಕ್ಕಾಗಿ ಯೋಜನೆ ರೂಪಿಸುವಿರಿ.
ತುಲಾ : ಹಿತ ಶತ್ರುಗಳಿಂದ ಸಮಸ್ಯೆ ಉಂಟಾಗಲಿದೆ. ವಿಶ್ರಾಂತಿಯ ಅವಶ್ಯಕತೆ ಇದೆ. ಪ್ರಶಸ್ತಿ ಪಡೆಯುವ ಯೋಗವಿದೆ.
ವೃಶ್ಚಿಕ : ಸಂಗಾತಿಯ ಬಗ್ಗೆ ಅಹಿತಕರ ಭಾವನೆ ಹೊಂದುವಿರಿ. ಕೌಟುಂಬಿಕ ಕಲಹ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಧನಸ್ಸು : ಸಹೋದ್ಯೋಗಿಗಳಿಂದ ಲಾಭ ಪಡೆಯುವಿರಿ. ವಿವಾಹ ಯೋಗವಿದೆ. ಆಸ್ತಿ ಖರೀದಿಸಬಹುದು.
ಮಕರ : ಬಂಧುಗಳಿಂದ ಧನ ಸಹಾಯವಾಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
ಕುಂಭ : ಸ್ನೇಹಿತರೊಂದಿಗೆ ಪ್ರವಾಸ ಹೊರಡುವಿರಿ. ರಾಜಕೀಯ ವ್ಯಕ್ತಿಗಳು ಉನ್ನತ ಸ್ಥಾನ ಪಡೆಯುವ ಯೋಗವಿದೆ. ದೇವಾಲಯಗಳಿಗೆ ಭೇಟಿ ನೀಡುವಿರಿ.
ಮೀನ : ತಾಳ್ಮೆಯಿಂದ ವರ್ತಿಸುವುದು ಒಳ್ಳೆಯದು. ಕೆಲಸದ ಒತ್ತಡ, ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುವುದು.