ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : ಅಪರಾಹ್ನ 12 : 03 – 12 : 52
ಅಮೃತ ಘಳಿಗೆ : ಬೆಳಿಗ್ಗೆ 07 : 36 – 09 : 17
ಸೋಮವಾರ, 18 ಮಾರ್ಚ್ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಪಾಲ್ಗುಣ
ಪಕ್ಷ : ಶುಕ್ಲಪಕ್ಷ
ತಿಥಿ : ನವಮಿ
ನಕ್ಷತ್ರ : ಆರಿದ್ರಾ
ಯೋಗ : ಸೌಭಾಗ್ಯ
ಕರಣ : ಬಾಲವ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 25
ಸೂರ್ಯಾಸ್ತ : ಸಂಜೆ 06 : 30
ರಾಹುಕಾಲ : 07 : 56 – 09 : 26
ಯಮಗಂಡ ಕಾಲ : 10 : 57 – 12 : 28
ಗುಳಿಕಕಾಲ : 01 : 58 – 03 : 29
ರಾಶಿ ಫಲ
ಮೇಷ : ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ಹೊಸ ಉದ್ಯಮ ಪ್ರಾರಂಭಿಸುವ ಮೂಲಕ ಭವಿಷ್ಯಕ್ಕೆ ಭದ್ರ ಬುನಾದಿ ಸಾಧ್ಯತೆ. ವಿರೋಧಿಗಳನ್ನು ಕಡೆಗಣಿಸುವುದು ಸೂಕ್ತವಲ್ಲ.
ವೃಷಭ : ಕುಟುಂಬದಲ್ಲಿ ಕಲಹ. ಮಕ್ಕಳ ವಿಚಾರದಲ್ಲಿ ಸಂತೋಷ ಪಡುವಿರಿ. ಆರೋಗ್ಯವನ್ನು ನಿರ್ಲಕ್ಷಿಸದಿರಿ.
ಮಿಥುನ : ಹಳೆಯ ಸಾಲಗಳು ಮರುಪಾವತಿ ಆಗಲಿವೆ. ಆರ್ಥಿಕ ಲಾಭ ಕಂಡುಬರಲಿದೆ. ಸಂಗಾತಿಯ ಮೇಲೆ ಪ್ರೀತಿ ಅಧಿಕವಾಗಲಿದೆ.
ಕಟಕ : ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಅನ್ಯರ ಬಗ್ಗೆ ಅಸೂಯೆ ಪಡುವುದು ಒಳ್ಳೆಯದಲ್ಲ. ಹಣವು ನೀರಿನಂತೆ ವ್ಯಯವಾಗುವುದು.
ಸಿಂಹ : ಮೇಲಾಧಿಕಾರಿಗಳ ಆಜ್ಞೆಯಂತೆ ಕಾರ್ಯನಿರ್ವಹಿಸಲಿದ್ದೀರಿ. ಹೊಸದಾದ ಪ್ರೇಮ ಸಂಬಂಧ ಪ್ರಾರಂಭವಾಗಬಹುದು. ವಿದ್ಯಾರ್ಥಿಗಳಿಗೆ ಉತ್ತಮ ದಿನ.
ಕನ್ಯಾ : ಆರೋಗ್ಯದ ಬಗ್ಗೆ ಗಮನವಿರಲಿ. ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಲಿದ್ದೀರಿ. ಮನೆ ಮತ್ತು ಕೆಲಸದ ನಡುವೆ ಸಮತೋಲನ ಕಾಯ್ದುಕೊಳ್ಳಿ.
ತುಲಾ : ಸಂಗಾತಿಯ ಆರೋಗ್ಯದ ಕಡೆ ಗಮನವಿರಲಿ. ದೂರ ಪ್ರಯಾಣ ಒಳ್ಳೆಯದಲ್ಲ. ಅತಿಥಿಗಳ ಆಗಮನವಾಗಬಹುದು.
ವೃಶ್ಚಿಕ : ಕೆಲಸಗಳು ಅಪೂರ್ಣಗೊಳ್ಳಲಿವೆ. ಸ್ನೇಹಿತರಿಂದ ವಂಚನೆಗೆ ಒಳಗಾಗುವಿರಿ. ಸ್ತ್ರೀಯರು ಆರೋಗ್ಯದ ಕಡೆ ಗಮನಹರಿಸಿ.
ಧನಸ್ಸು : ಬುದ್ಧಿವಂತಿಕೆಯಿಂದ ಸಮಸ್ಯೆ ಬಗೆಹರಿಸಲಿದ್ದೀರಿ. ಉತ್ತಮ ವಾಗ್ಮಿಗಳಾಗಿರುತ್ತೀರಿ. ಗಣ್ಯವ್ಯಕ್ತಿಗಳ ಸಂಪರ್ಕ ದೊರೆಯಲಿದೆ.
ಮಕರ : ಮಕ್ಕಳ ವಿವಾಹ ಸಮಸ್ಯೆ ಬಗೆಹರಿಯಲಿದೆ. ಧಾರ್ಮಿಕ ಯೋಜನೆಗಳಿಗೆ ಹಣ ವ್ಯಯವಾಗಲಿದೆ. ಮಲಬದ್ಧತೆ ಸಮಸ್ಯೆ ಕಾಡಬಹುದು.
ಕುಂಭ : ಓದಿನ ಕಡೆ ಹೆಚ್ಚು ಗಮನ ಹರಿಸುವಿರಿ. ಯಾರಿಗೂ ಆಶ್ವಾಸನೆ ನೀಡದಿರಿ. ಆರೋಗ್ಯದ ಕಡೆ ಗಮನವಿರಲಿ.
ಮೀನ : ಕೆಲಸ ಹಾಗೂ ಮನೆಯಲ್ಲಿ ನೆಮ್ಮದಿಯ ವಾತಾವರಣವಿರಲಿದೆ. ಮಕ್ಕಳು ಓದಿನ ಕಡೆ ಆಸಕ್ತರಾಗಿರುತ್ತಾರೆ. ಹಣದ ಸಮಸ್ಯೆ ಬಗೆಹರಿಯಲಿದೆ.