ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : ಇಲ್ಲ
ಅಮೃತ ಘಳಿಗೆ : ಸಂಜೆ 03 : 35 – 05 : 20
ಬುಧವಾರ, 20 ಮಾರ್ಚ್ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಪಾಲ್ಗುಣ
ಪಕ್ಷ : ಶುಕ್ಲಪಕ್ಷ
ತಿಥಿ : ಏಕಾದಶಿ
ನಕ್ಷತ್ರ : ಪುಷ್ಯ
ಯೋಗ : ಅತಿಗಂಡ
ಕರಣ : ವಣಿಜ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 24
ಸೂರ್ಯಾಸ್ತ : ಸಂಜೆ 06 : 30
ರಾಹುಕಾಲ : 12 : 27 – 01 : 58
ಯಮಗಂಡ ಕಾಲ : 07 : 54 – 09 : 25
ಗುಳಿಕಕಾಲ : 10 : 56 – 12 : 27
ರಾಶಿ ಫಲ
ಮೇಷ : ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಆತುರದ ನಿರ್ಧಾರ ಒಳ್ಳೆಯದಲ್ಲ. ಕುಟುಂಬದವರೊಂದಿಗೆ ಸಮಯ ಕಳೆಯುವಿರಿ.
ವೃಷಭ : ಅನಗತ್ಯ ಖರ್ಚನ್ನು ನಿಯಂತ್ರಿಸಿ. ಹೊಸ ಕೌಶಲ್ಯಗಳನ್ನು ಕಲಿಯುವಿರಿ. ಆತ್ಮ ವಿಶ್ವಾಸ ವೃದ್ಧಿಸಲಿದೆ.
ಮಿಥುನ : ಉದ್ಯೋಗದಲ್ಲಿ ಬಡ್ತಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಲಿದೆ. ರಹಸ್ಯ ವಿಚಾರಗಳನ್ನು ಬೇರೆಯವರೊಂದಿಗೆ ಚರ್ಚಿಸದಿರಿ.
ಕಟಕ : ಹಿರಿಯರಿಂದ ಬೆಂಬಲ ಪಡೆಯಲಿದ್ದೀರಿ. ಶಿಕ್ಷಣದಲ್ಲಿ ಪ್ರಗತಿ ಕಾಣಲ್ಲಿದೆ. ಕುಟುಂಬದ ಜವಾಬ್ದಾರಿ ಹೆಚ್ಚಾಗಲಿದೆ.
ಸಿಂಹ : ದೂರ ಪ್ರಯಾಣ ಒಳ್ಳೆಯದಲ್ಲ. ಆಹಾರದ ಬಗ್ಗೆ ಜಾಗರೂಕರಾಗಿರಿ. ಮಾನಸಿಕ ಒತ್ತಡ ಹೆಚ್ಚಾಗಲಿದೆ.
ಕನ್ಯಾ : ಆಸ್ತಿ ಖರೀದಿ ಯೋಗವಿದೆ. ವಿಶ್ರಾಂತಿಯ ಅವಶ್ಯಕತೆ ಇದೆ. ಸ್ನೇಹಿತರ ಸಲಹೆ ಪಡೆಯಲಿದ್ದೀರಿ.
ತುಲಾ : ಕೆಲಸದಲ್ಲಿನ ಸಮಸ್ಯೆಗಳು ಬಗೆಹರಿಯಲಿವೆ. ತಂದೆಯೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಸಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ.
ವೃಶ್ಚಿಕ : ತಪ್ಪು ಸಲಹೆ ನೀಡುವವರಿಂದ ದೂರವಿರಿ. ಪ್ರೇಮಿಗಳಿಗೆ ಉತ್ತಮ ದಿನ. ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಕೊಳ್ಳುವಿರಿ.
ಧನಸ್ಸು : ಆರೋಗ್ಯದಲ್ಲಿ ಸಮಸ್ಯೆ ಕಂಡುಬರಲಿದೆ. ಕೆಲಸ ಮಂದಗತಿಯಲ್ಲಿ ಸಾಗಲಿದೆ. ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ.
ಮಕರ : ಅವಿವಾಹಿತರಿಗೆ ವಿವಾಹ ಯೋಗವಿದೆ. ವ್ಯವಹಾರದಲ್ಲಿ ಲಾಭ ಕಂಡುಬರಲಿದೆ. ಬುದ್ಧಿವಂತರಿಂದ ಸಲಹೆಗಳನ್ನು ಪಡೆಯಲಿದ್ಧೀರಿ.
ಕುಂಭ : ಹಳೆಯ ಸಾಲಗಳನ್ನು ಮರು ಪಾವತಿಸಲಿದ್ಧೀರಿ. ತಾಳ್ಮೆಯಿಂದ ಕಾರ್ಯನಿರ್ವಹಿಸಿ. ಶತ್ರುಗಳಿಂದ ಮುಕ್ತಿ ದೊರೆಯಲಿದೆ.
ಮೀನ : ಕೆಟ್ಟಚಟಗಳಿಂದ ದೂರವಿರಿ. ತಂದೆ-ತಾಯಿಯ ಆದೇಶದಂತೆ ನಡೆದುಕೊಳ್ಳುವಿರಿ. ಕೌಟುಂಬಿಕ ಕಲಹ ಕಂಡುಬರಲಿದೆ.