ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : ಮಧ್ಯಾಹ್ನ 12 : 02 – 12 : 51
ಗುರುವಾರ, 21 ಮಾರ್ಚ್ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಪಾಲ್ಗುಣ
ಪಕ್ಷ : ಶುಕ್ಲಪಕ್ಷ
ತಿಥಿ : ದ್ವಾದಶಿ
ನಕ್ಷತ್ರ :ಆಶ್ಲೇಷ
ಯೋಗ : ಸುಕರ್ಮ
ಕರಣ : ಭವ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 23
ಸೂರ್ಯಾಸ್ತ : ಸಂಜೆ 06 : 30
ರಾಹುಕಾಲ : 01 : 58 – 03 : 29
ಯಮಗಂಡ ಕಾಲ : 06 : 23 – 07 : 54
ಗುಳಿಕಕಾಲ : 09 : 25 – 10 : 56
ರಾಶಿ ಫಲ
ಮೇಷ : ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಲಿದೆ. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಮೇಲಾಧಿಕಾರಿಗಳ ಪ್ರಶಂಸೆ ಗಳಿಸುವಿರಿ.
ವೃಷಭ : ಕುಟುಂಬದ ಜವಾಬ್ದಾರಿ ಹೆಚ್ಚಾಗಲಿದೆ. ಸಂಪತ್ತು ನಿರೀಕ್ಷೆಗೆ ಮೀರಿದ ವೃದ್ಧಿಯಾಗುವುದು. ಸಂಗಾತಿ ಆರೋಗ್ಯದಲ್ಲಿ ಏರು-ಪೇರು ಸಾಧ್ಯತೆ.
ಮಿಥುನ : ಪಿತ್ರಾರ್ಜಿತ ಆಸ್ತಿಯಿಂದ ಲಾಭವಾಗುವುದುಂಟು. ಜೀವನಶೈಲಿಯಲ್ಲಿ ಬದಲಾವಣೆ ಉಂಟಾಗುವುದು. ಹಣ ಗಳಿಕೆಯ ಹೊಸ ಮೂಲಗಳು ವೃದ್ಧಿಯಾಗಲಿವೆ.
ಕಟಕ : ಕಷ್ಟಪಟ್ಟು ಕೆಲಸ ಮಾಡಿದರೂ ನಿರೀಕ್ಷಿತ ಫಲವಿಲ್ಲ. ಪ್ರೇಮ ವಿಚಾರಗಳು ವಿವಾಹವಾಗಿ ಬದಲಾಗಲಿವೆ. ಏಕಾಂಗಿಯಾಗಿ ಬದಕಲು ಬಯಸುವಿರಿ.
ಸಿಂಹ : ನಕಾರಾತ್ಮಕ ಆಲೋಚನೆಗಳಿಂದ ದೂರವಿರುವುದು ಒಳ್ಳೆಯದು. ಸಕಾಲದಲ್ಲಿ ಕೆಲಸ ಪೂರ್ಣಗೊಳಿಸುವಿರಿ. ಮಾನಸಿಕ ಕಿರಿಕಿರಿಗೆ ಒಳಗಾಗುವಿರಿ.
ಕನ್ಯಾ : ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಆಸ್ತಿ ಖರೀದಿಯ ಯೋಗವಿದೆ. ಸಾಕಷ್ಟು ವಿಶ್ರಾಂತಿ ಅಗತ್ಯವಿದೆ.
ತುಲಾ : ಮನೆಯಲ್ಲಿ ಸಂತೋಷದ ವಾತಾವರಣವಿರಲಿದೆ. ಪ್ರತಿಭೆಗೆ ತಕ್ಕ ಸನ್ಮಾನ ದೊರೆಯಲಿದೆ. ಹೊಸ ಸ್ನೇಹಿತರ ಪರಿಚಯವಾಗುವುದು.
ವೃಶ್ಚಿಕ : ಮೇಲಾಧಿಕಾರಿಗಳ ಪ್ರಶಂಸೆಗೆ ಒಳಗಾಗುವಿರಿ. ಪೋಷಕರು ನಿಮ್ಮ ಬಗ್ಗೆ ಹೆಮ್ಮೆ ಪಡುವರು. ಪ್ರೇಮಗಳು ದೂರವಾಗುವ ಸಂಭವ ಹೆಚ್ಚು.
ಧನಸ್ಸು : ವಂಚಕರಿಂದ ಮೋಸ ಹೋಗುವಿರಿ. ಕೌಟುಂಬಿಕ ಕಲಹ ಸಂಭವ. ವೃತ್ತಿಯಲ್ಲಿ ಏರಿಳಿತವಾಗುವ ಸಾಧ್ಯತೆಯುಂಟು.
ಮಕರ : ಹೊಸ ವಿಚಾರಗಳನ್ನು ಅರಿಯಲು ಉತ್ತಮ ದಿನ. ಸೋಮಾರಿತನ ಕಂಡುಬರಲಿದೆ. ಅಹಿತಕರ ಜನರಿಂದ ಮನಃಶಾಂತಿ ಹಾಳಾಗುವುದು.
ಕುಂಭ : ವಿದ್ಯಾರ್ಥಿಗಳು ಅಧ್ಯಯನದ ಬಗ್ಗೆ ಹೆಚ್ಚಿನ ಗಮನ ಹರಿಸಿ. ಸರ್ಕಾರದ ಯೋಜನೆಗಳಿಂದ ಲಾಭವುಂಟು. ಆತ್ಮ ವಿಶ್ವಾಸದಿಂದ ಕೂಡಿದ ದಿನವಾಗಲಿದೆ.
ಮೀನ : ಸಹೋದ್ಯೋಗಿಗಳ ಬಗ್ಗೆ ಕೋಪಗೊಳ್ಳುವಿರಿ. ಹಿರಿಯರ ಮಾರ್ಗದರ್ಶನ ದೊರೆಯಲಿದೆ. ಸಂಬಂಧಿಕರು ದೂರವಾಗಬಹುದು.
