ಟೈಪ್-2 ಸಕ್ಕರೆ ರೋಗ ಹತ್ತೋಟಿಗೂ ಸಹಕಾರಿ
ಜಡತ್ವದಿಂದ ಕೂಡಿದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದ ಆರೋಗ್ಯದಲ್ಲಿ ಆಗಾಗ್ಗೆ ಏರುಪೇರಾಗುವುದು ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿದೆ. ಜೀವನ ಶೈಲಿಯ ಅಸ್ವಸ್ಥೆಯಿಂದಾಗಿ ಉಂಟಾಗಿರುವ ಬೊಜ್ಜು, ಅತಿಯಾದ ಕೊಬ್ಬಿನ ಶೇಖರಣೆ. ದೇಹದ ತೂಕದಲ್ಲಿ ಅತಿಯಾದ ಹೆಚ್ಚಳ. ಇವುಗಳನ್ನು ನಿಯಂತ್ರಿಸಲು ಪ್ರತಿನಿತ್ಯ ನಿಯಮಿತವಾಗಿ ಯೋಗಾಸನಗಳು, ಮುದ್ರೆಗಳು ಹಾಗೂ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡುವುದು ಒಳ್ಳಿತು. ಇಂತಹ ಅಭ್ಯಾಸಗಳು ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಲ್ಲವು.
ರುದ್ರಮುದ್ರೆಯು ಹಸ್ತ ಮುದ್ರೆಗಳಲ್ಲಿ ಒಂದಾಗಿದೆ. ದೇಹ ಪಂಚಭೂತಗಳಿಂದ ನಿರ್ಮಿಸಲ್ಪಟ್ಟಿದ್ದು, ಹಸ್ತದ ಐದು ಬೆರಳುಗಳು ಪಂಚಭೂತಗಳನ್ನೇ ಪ್ರತಿನಿಧಿಸುತ್ತವೆ. ಮುದ್ರೆಗಳ ಅಭ್ಯಾಸದ ಸಮಯದಲ್ಲಿ ನಾವು ಬೆರಳುಗಳ ತುದಿಗೆ ಒತ್ತಡವನ್ನು ತಂದಾಗ ಮೆದುಳಿನ ನರಗಳು ಸಕ್ರಿಯಗೊಳ್ಳುವುದರ ಜೊತೆಗೆ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಶಿವನ ಹಲವು ಹೆಸರುಗಳಲ್ಲಿ ರುದ್ರವೂ ಒಂದು. ಇದು ಶಿವನಿಗೆ ಸಮರ್ಪಿತವಾದ ಮುದ್ರೆಯಾಗಿದೆ. ದೇಹದಲ್ಲಿನ ಬೆಂಕಿ, ಗಾಳಿ ಮತ್ತು ಭೂಮಿಯ ಅಂಶಗಳನ್ನು ಸಂಕೇತಿಸುವ ಹೆಬ್ಬೆರಳು, ತೋರು ಬೆರಳು ಮತ್ತು ಉಂಗುರದ ಬೆರಳುಗಳನ್ನು ಒಳಗೊಂಡಿದೆ.
ರುದ್ರಮುದ್ರೆ ಮಾಡುವುದು ಹೀಗೆ
ಪದ್ಮಾಸನ ಅಥವಾ ವಜ್ರಾಸನ ಅಥವಾ ಸುಖಾಸನ ಭಂಗಿಗಳಲ್ಲಿ ಕುಳಿತುಕೊಳ್ಳಿ. ತಲೆ ಮತ್ತು ಬೆನ್ನು ನೇರವಾಗಿ ಇರಿಸಿಕೊಂಡಿರಬೇಕು. ಅಂಗೈಗಳನ್ನು ಮೊಣಕಾಲುಗಳ ಮೇಲೆ ಇಟ್ಟುಕೊಂಡಿರಬೇಕು. ಅಂಗೈಗಳು ಆಕಾಶವನ್ನು ನೋಡುತ್ತಿರಲಿ. ತೋರು ಬೆರಳು, ಉಂಗುರದ ಬೆರಳು ಮತ್ತು ಹೆಬ್ಬೆರಳಿನ ತುದಿಯನ್ನು ಸೇರಿಸಿಕೊಳ್ಳಬೇಕು. ಮಧ್ಯದ ಬೆರಳು ಹಾಗೂ ಕಿರುಬೆರಳು ನೇರವಾಗಿ ವಿಸ್ತರಿಸಿಕೊಂಡಿರಬೇಕು. ಮುದ್ರೆಯನ್ನು ಮಾಡುವಾಗ ಸಾಧ್ಯವಾದರೆ ಕಣ್ಣುಗಳನ್ನು ಮುಚ್ಚಿ. ಇಲ್ಲವಾದಲ್ಲಿ ಕಣ್ಣುಗಳನ್ನು ತೆರೆದೇ ಧ್ಯಾನ ಸ್ಥಿತಿಯಲ್ಲಿ ಕೂರಬಹುದು.
ಕೇಂದ್ರದ ವಿರುದ್ಧ ತೊಡೆ ತಟ್ಟಿದ ಸಿದ್ದರಾಮಯ್ಯ
ನಿಧಾನವಾಗಿ ಉಸಿರಾಡಿ ಮತ್ತು ಹೆಬ್ಬೆರಳು, ತೋರು ಬೆರಳು ಮತ್ತು ಉಂಗುರದ ಬೆರಳಿನ ಮೇಲೆ ಸ್ವಲ್ಪ ಒತ್ತಡವನ್ನು ಹಾಕಿರಬೇಕು. ಜೊತೆಗೆ ಉಸಿರಾಟದ ಮೇಲೆ ಗಮನ ಕೇಂದ್ರೀಕೃತವಾಗಿರಲಿ. ಮುಖ್ಯವಾಗಿ ಯಾವುದೇ ಮುದ್ರೆಯನ್ನು ಮಾಡುವಾಗ ಶಾಂತ ಮನಸ್ಸಿನಿಂದ ಕೂರುವುದು ಒಳ್ಳೆಯದು. ಪ್ರತಿದಿನ 20 ರಿಂದ 30 ನಿಮಿಷಗಳ ಕಾಲ ಈ ಮುದ್ರೆ ಮಾಡಬೇಕು. ಪೂರ್ಣ ಪ್ರಯೋಜನ ಪಡೆದ ನಂತರ ಮುದ್ರೆ ಮಾಡುವುದನ್ನು ನಿಲ್ಲಿಸಬೇಕು.
ಈ ಮುದ್ರೆಯನ್ನು ಹೆಚ್ಚು ಮಾಡುವುದರಿಂದ ಏಕಾಗ್ರತೆಯಲ್ಲಿ ಸುಧಾರಣೆ ಕಂಡುಬರುತ್ತದೆ. ಈ ಮುದ್ರೆಯು ಭಗವಾನ್ ಶಿವ ಮತ್ತು ಋಗ್ವೇದ ದೇವತೆಗೆ ಸಮರ್ಪಿತವಾಗಿದೆ. ರುದ್ರಮುದ್ರೆಯು ಶಿವನಿಗೆ ಸಮರ್ಪಿತವಾಗಿರುವುದರಿಂದ ಇದನ್ನು ಶಕ್ತಿಯ ಸೂಚಕವೆಂದು ಕರೆಯುವುದುಂಟು. ರುದ್ರಮುದ್ರೆಯು ಮಣಿಪುರ ಚಕ್ರವನ್ನು ಸಕ್ರಿಯಗೊಳಿಸುವುದು.
ರುದ್ರಮುದ್ರೆಯ ಪ್ರಯೋಜನಗಳು
ಈ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ದೃಷ್ಟಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದಲ್ಲದೆ, ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಮಂದ ದೃಷ್ಟಿಯೂ ಸರಿ ಹೋಗುವ ಸಾಧ್ಯತೆಗಳಿವೆ. ರುದ್ರಮುದ್ರೆಯ ಅಭ್ಯಾಸವು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವುದು. ಬೊಜ್ಜಿನ ಸಮಸ್ಯೆ ನಿಯಂತ್ರಿಸುವುದರ ಜೊತೆಗೆ ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಈ ಮುದ್ರೆಯ ಅಭ್ಯಾಸದಿಂದ ಮಣಿಪುರ ಚಕ್ರ ಉತ್ತೇಜನಗೊಂಡು ಆಹಾರ ಮತ್ತು ಜೀರ್ಣಕ್ರಿಯೆಯಲ್ಲಿ ಸುಧಾರಣೆ ಕಾಣಬಹುದು.
ಅತಿಯಾದ ಖಿನ್ನತೆ, ಮಾನಸಿಕ ಅಸ್ವಸ್ಥತೆ, ದುಃಖದ ಭಾವನೆಯಿಂದ ಬಳಲುತ್ತಿರುವವರು ಪ್ರತಿದಿನ ನಿಯಮಿತ ಅಭ್ಯಾಸ ಮಾಡುವುದರಿಂದ ಬೇಗ ಗುಣಮುಖರಾಗಬಹುದು. ಟೈಪ್-2 ಮಧುಮೇಹವನ್ನು ರುದ್ರಮುದ್ರೆ ಅಭ್ಯಾಸದಿಂದ ನಿಯಂತ್ರಿಸಬಹುದಾಗಿದೆ. ಇನ್ಸುಲಿನ್, ಹಾರ್ಮೋನ್ ನಲ್ಲಿನ ಕೊರತೆ, ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಇವೆಲ್ಲವನ್ನು ನಿಯಂತ್ರಿಸುತ್ತದೆ. ದೋಷಪೂರಿತ ಭಂಗಿ ದೀರ್ಘಕಾಲದವರೆಗೆ ಕಾಡುವ ಕುತ್ತಿಗೆ ಹಾಗೂ ಬೆನ್ನು ನೋವಿನ ಸಮಸ್ಯೆಯನ್ನು ನಿವಾರಿಸಲು ರುದ್ರಮುದ್ರೆಯು ಸಹಾಯ ಮಾಡುತ್ತದೆ. ದೇಹದಲ್ಲಿನ ರಕ್ತದ ಪರಿಚಲನೆಯನ್ನು ಸುಧಾರಿಸಲು ಉಸಿರಾಟದ ಕ್ರಿಯೆಯನ್ನು ಸುಧಾರಿಸಲು ಮತ್ತು ತಲೆ ತಿರುಗುವಿಕೆಯಂತಹ ಸಮಸ್ಯೆಗಳ ನಿವಾರಣೆಗೆ ಈ ಮುದ್ರೆ ಸಹಕಾರಿಯಾಗಿದೆ.
ರುದ್ರಮುದ್ರೆಯ ಮೇಲೆ ವೈದ್ಯರು ಅತಿ ಹೆಚ್ಚಿನ ಸಂಶೋಧನೆಗಳನ್ನು ನಡೆಸುತ್ತಿದ್ದು, ಮೇಲೆ ಹೇಳಿದ ಹಲವು ಫಲಿತಾಂಶಗಳ ಬಗ್ಗೆ ಹೆಚ್ಚು ಬೆಳಕು ಚೆಲ್ಲಲಾಗಿದೆ. ಯಾವುದೇ ರೋಗದ ಲಕ್ಷಣಗಳು ಕೊನೆಯ ಹಂತವನ್ನು ತಲುಪಿದ ಸಮಯದಲ್ಲಿ ಮುದ್ರೆಗಳು ಗರಿಷ್ಠ ಅಥವಾ ಪೂರ್ಣ ಫಲಿತಾಂಶವನ್ನು ನೀಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ವೈದ್ಯರ ಸಲಹೆ ಪಡೆಯುವುದು ಅತ್ಯಾವಶ್ಯಕ. ಆದರೆ, ನಿಯಮಿತವಾಗಿ ಮುದ್ರೆಗಳ ಅಭ್ಯಾಸದಿಂದ ಆರೋಗ್ಯದಲ್ಲಿ ಲವಲವಿಕೆಯನ್ನು ಕಾಣಬಹುದು.
ರುದ್ರಮುದ್ರೆಯ ಇತಿ-ಮಿತಿಗಳು
ಗರ್ಭಿಣಿ ಹಾಗೂ ಬಾಣಂತಿಯರು, ಚಿಕ್ಕಮಕ್ಕಳು ಮತ್ತು ಹಿರಿಯರು ಈ ಮುದ್ರೆ ಮಾಡದಿರುವುದು ಒಳ್ಳೆಯದು. ಊಟದ ನಂತರ ರುದ್ರಮುದ್ರೆಯನ್ನು ಯಾವುದೇ ಕಾರಣಕ್ಕೂ ಮಾಡಬಾರದು. ದೇಹದ ಮೇಲೆ ಆಭರಣಗಳನ್ನು ಧರಿಸಿರುವಂತಹ ಸಂದರ್ಭದಲ್ಲಿ, ಕನ್ನಡ ಧರಿಸಿರುವ ಸಂದರ್ಭದಲ್ಲಿ ರುದ್ರಮುದ್ರೆಯನ್ನು ಮಾಡಕೂಡದು. ಶಸ್ತ್ರ ಚಿಕಿತ್ಸೆಗಳಿಗೆ ಒಳಪಟ್ಟವರು ಹಾಗೂ ಮೂಳೆ ಮುರಿತಗಳಾದ ಸಂದರ್ಭದಲ್ಲಿ ರುದ್ರಮುದ್ರೆಯನ್ನು ಮಾಡಬಾರದು. ಹಾಗೆಯೇ ಆಯಾಸ ಹಾಗೂ ಅನಾರೋಗ್ಯದ ಸ್ಥಿತಿಯಲ್ಲಿ ಮುದ್ರೆಯನ್ನು ಅಭ್ಯಾಸ ಮಾಡದಿರುವುದು ಒಳ್ಳೆಯದು.
ಅತಿಯಾದ ಶೀತ ಸಂದರ್ಭದಲ್ಲಿ ಅತಿಯಾದ ಬಿಸಿಲಿನ ಸಂದರ್ಭದಲ್ಲಿ ರುದ್ರಮುದ್ರೆಯಿಂದ ದೂರವಿರುವುದು ಒಳ್ಳೆಯದು. ಮನೆಯಲ್ಲಿ ಸಾಕಷ್ಟು ಶಾಂತ ವಾತಾವರಣವಿಲ್ಲದೆ, ಅಧಿಕ ಶಬ್ದವಿದ್ದಾಗಲೂ ಈ ಮುದ್ರೆ ಮಾಡುವುದು ಅಸಾಧ್ಯವಾಗಲಿದೆ. ಯಾವುದೇ ಮುದ್ರೆ ಮಾಡುವ ಮುನ್ನ ನುರಿತ ತರಬೇತುದಾರರಿಂದ ಸಲಹೆ ಪಡೆಯುವುದು ಸೂಕ್ತ. ಏಕಾಏಕಿ ಮುದ್ರೆ ಅಭ್ಯಾಸ ಮಾಡುವುದು ಕೂಡ ಒಳ್ಳೆಯದಲ್ಲ.
3 comments
[…] ಅಂಕಣ […]
[…] ಅಂಕಣ […]
[…] ಅಂಕಣ […]