ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : ಇಲ್ಲ
ಅಮೃತ ಘಳಿಗೆ : ಬೆಳಿಗ್ಗೆ 09 : 08 – 10 : 55
ಬುಧವಾರ, 27 ಮಾರ್ಚ್ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಪಾಲ್ಗುಣ
ಪಕ್ಷ : ಕೃಷ್ಣ
ತಿಥಿ: ಬಿದಿಗೆ
ನಕ್ಷತ್ರ : ಚಿತ್ತ
ಯೋಗ : ವ್ಯಾಘಾತ
ಕರಣ : ಗರಜ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 19
ಸೂರ್ಯಾಸ್ತ : ಸಂಜೆ 06 : 31
ರಾಹುಕಾಲ : 12 : 25 – 01 : 55
ಯಮಗಂಡ ಕಾಲ : 07 : 50 – 09 : 20
ಗುಳಿಕಕಾಲ : 10 : 53 – 12 : 25
ರಾಶಿ ಫಲ
ಮೇಷ : ಕೆಲಸದಲ್ಲಿ ವಿಶ್ರಾಂತಿ ದೊರೆಯಲಿದೆ. ಮನೆಗೆ ಅತಿಥಿಗಳ ದಿಡೀರ್ ಆಗಮನವಾಗಬಹುದು. ಹಿರಿಯರ ಮಾರ್ಗದರ್ಶನ ದೊರೆಯುವುದು.
ವೃಷಭ : ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ. ದೇವತಾ ಕಾರ್ಯಗಳ ಬಗ್ಗೆ ನಿರಾಸಕ್ತಿ ಮೂಡಲಿದೆ. ವ್ಯಾಪಾರದಲ್ಲಿ ಲಾಭಾಂಶ ಕಂಡುಬರುವುದು.
ಮಿಥುನ : ಕಾಲುಗಳಲ್ಲಿ ನೋವು ಕಂಡುಬರಲಿದೆ. ನಿಮ್ಮವರ ಮೇಲೆ ನಿಮಗೆ ಕೋಪ ಬರಲಿದೆ. ವ್ಯಾಪಾರದಲ್ಲಿ ಅಧಿಕ ಒತ್ತಡ ಉಂಟಾಗಲಿದೆ.
ಕಟಕ : ಮಾನಸಿಕ ಒತ್ತಡ ಉಂಟಾಗಬಹುದು. ವಾಹನ ದುರಸ್ಥಿಯಾಗಬಹುದು. ಹಳೆಯ ಸ್ನೇಹಿತರ ಭೇಟಿಯ ಸಾಧ್ಯತೆಯುಂಟು.
ಸಿಂಹ : ಶೈಕ್ಷಣಿಕ ಪ್ರಗತಿ ಕಂಡುಬರುವುದು. ಹಣದ ಹರಿವು ಅಧಿಕಗೊಳ್ಳಲಿದೆ. ಸಂಗಾತಿಯೊಂದಿಗೆ ದಿನ ಕಳೆಯುವಿರಿ.
ಕನ್ಯಾ : ಸಾಲ ಹಿಂದಿರುಗಿಸಲಿದ್ದಾರೆ. ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಸಂಯಮದಿಂದ ವರ್ತಿಸಿ.
ತುಲಾ : ಹೊಸ ಯೋಜನೆಗಳು ರೂಪುಗೊಳ್ಳಲಿವೆ. ಭವಿಷ್ಯದ ಯೋಜನೆಗಳನ್ನು ರೂಪಿಸಲಿದ್ದೀರಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು.
ವೃಶ್ಚಿಕ : ದೂರ ಪ್ರಯಾಣ ಒಳ್ಳೆಯದಲ್ಲ. ಆರೋಗ್ಯದ ಕಡೆ ಗಮನ ಹರಿಸಿ. ಯಾರಿಗೂ ಭರವಸೆ ನೀಡದಿರುವುದು ಒಳ್ಳೆಯದು.
ಧನಸ್ಸು : ಆಸ್ತಿ ಖರೀದಿಸಲಿದ್ದೀರಿ. ನಿಮ್ಮ ಮಾತಿಗೆ ಜನರು ಆಕರ್ಷಿತರಾಗುವರು. ಸಮಾರಂಭಗಳಲ್ಲಿ ಭಾಗವಹಿಸಲಿದ್ದೀರಿ.
ಮಕರ : ಮಕ್ಕಳಿಂದ ಬೆಂಬಲ ದೊರೆಯಲಿದೆ. ಉದ್ಯೋಗದಲ್ಲಿ ಬದಲಾವಣೆ. ಪ್ರಮುಖ ಕಾರ್ಯಗಳನ್ನು ಕಡೆಗಣಿಸದಿರಿ.
ಕುಂಭ : ಮನೆಯ ವಾತಾವರಣದಲ್ಲಿ ಗೊಂದಲ ಕಂಡುಬರುವುದು. ಕಲ್ಪನಾ ಲೋಕದಲ್ಲಿ ವಿಹರಿಸಬೇಡಿ. ಸಹೋದ್ಯೋಗಿಗಳಿಂದ ಹಿಂಸೆಗೆ ಒಳಗಾಗಬಹುದು.
ಮೀನ : ಸಾಧ್ಯವಾದಷ್ಟು ಮನೆಯಿಂದ ದೂರವಿರುತ್ತೀರಿ. ನಿರಾಸೆ ಉಂಟಾಗಲಿದೆ. ಪ್ರೇಮಿಗಳಲ್ಲಿ ಭಿನ್ನಾಭಿಪ್ರಾಯ ತಲೆದೋರುವುದು.