ಯಾರಿಗೆ ಶುಭ-ಇನ್ಯಾರಿಗೆ ಅಶುಭ, ಇಲ್ಲಿದೆ ನಿಮ್ಮ ರಾಶಿಫಲ
ಕಿರು ಪಂಚಾಂಗ
ಅಭಿಜಿತ್ ಮುಹೂರ್ತ : ಮಧ್ಯಾಹ್ನ 12 : 01 – 12 : 50
ಅಮೃತ ಘಳಿಗೆ : ಬೆಳಿಗ್ಗೆ 11 : 05 – 12 : 49
ಶುಕ್ರವಾರ, 29 ಮಾರ್ಚ್ 2024
ಶೋಭಕೃತ ನಾಮ ಸಂವತ್ಸರ
ಉತ್ತರಾಯಣ
ಋತು : ಶಿಶಿರ
ಮಾಸ : ಪಾಲ್ಗುಣ
ಪಕ್ಷ : ಕೃಷ್ಣ
ತಿಥಿ : ಚೌತಿ
ನಕ್ಷತ್ರ : ವಿಶಾಖ
ಯೋಗ : ವಜ್ರ
ಕರಣ : ಭವ
ಸ್ಥಳ – ಬೆಂಗಳೂರು
ಸೂರ್ಯೋದಯ : ಬೆಳಿಗ್ಗೆ 06 : 18
ಸೂರ್ಯಾಸ್ತ : ಸಂಜೆ 06 : 31
ರಾಹುಕಾಲ : 10 : 53 – 12 : 24
ಯಮಗಂಡ ಕಾಲ : 03 : 28 – 04 : 59
ಗುಳಿಕಕಾಲ : 07 : 49 – 09 : 21
ರಾಶಿ ಫಲ
ಮೇಷ : ಮೇಲಾಧಿಕಾರಿಯಿಂದ ಪ್ರಶಂಸೆ ದೊರೆಯಲಿದೆ. ದಾಂಪತ್ಯದಲ್ಲಿ ಸುಖವಿರಲಿದೆ. ಉದರ ಸಮಸ್ಯೆ ಕಾಣಿಸಲಿದೆ.
ವೃಷಭ : ವಿದ್ಯಾರ್ಥಿಗಳಿಗೆ ಉತ್ತಮ ದಿನ. ಶತ್ರುಗಳು ಮಿತ್ರರಾಗುವರು. ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕೆ ಗಮನಹರಿಸಿ.
ಮಿಥುನ : ಸಂಯಮದಿಂದ ವರ್ತಿಸಿ. ಪ್ರೇಮ ಪ್ರಕರಣಗಳು ಬಯಲಿಗೆ ಬರಬಹುದು. ಹಿರಿಯರ ಆಶೀರ್ವಾದ ದೊರೆಯಲಿದೆ.
ಕಟಕ : ಅನ್ಯರ ವಿಚಾರದಲ್ಲಿ ಅಭಿಪ್ರಾಯ ನೀಡುವುದು ಒಳ್ಳೆಯದಲ್ಲ. ಮೃದುವಾಗಿ ಮಾತನಾಡಿದರೆ ಅನುಕೂಲ. ವಸ್ತುಗಳ ಖರೀರಿ ಮುಂದೂಡುವುದು ಒಳ್ಳೆಯದು.
ಸಿಂಹ : ಅನಾಥರಿಗೆ ಸಹಾಯ ಮಾಡುವಿರಿ. ಸ್ನೇಹಿತರಿಂದ ಸಹಾಯ ದೊರೆಯುವುದು. ಆತ್ಮವಿಶ್ವಾಸದಿಂದ ಮುನ್ನಡೆಯಿರಿ.
ಕನ್ಯಾ : ಉತ್ತಮ ಆಲೋಚನೆ ಬೆಳೆಸಿಕೊಳ್ಳಿ. ಅನ್ಯರ ವಿಚಾರಗಳಿಗೆ ತಲೆ ಹಾಕದಿರುವುದು ಒಳ್ಳೆಯದು. ಸಂಗಾತಿಯೊಂದಿಗೆ ಸಮಯ ಕಳೆಯುತ್ತೀರಿ.
ತುಲಾ : ಹಣವನ್ನು ಮಿತವಾಗಿ ಬಳಸಿ. ತಂದೆ, ತಾಯಿಯರ ಹಿತವಚನ ಪಾಲನೆ ಮಾಡಿ. ನಿಮಗಾಗಿ ಸಮಯ ಮೀಸಲಿಡಿ.
ವೃಶ್ಚಿಕ : ಬಜೆಟ್ ಮೀರಿ ಹಣಕಾಸು ವ್ಯವಹಾರ ಮಾಡುವಿರಿ. ಸಂಗಾತಿ ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆ. ಮಕ್ಕಳೊಂದಿಗೆ ಸಮಯ ಕಳೆಯುವಿರಿ.
ಧನಸ್ಸು : ತರಾತುರಿಯಲ್ಲಿ ಹೂಡಿಕೆ ಮಾಡುವುದು ಒಳ್ಳೆಯದಲ್ಲ. ಪ್ರೇಮಿಗಳಿಗೆ ಸಂಕಷ್ಟ ಎದುರಾಗಬಹುದು. ಪ್ರೀತಿ ಪಾತ್ರರು ಮತ್ತೆ ಸಿಗಲಿದ್ದಾರೆ.
ಮಕರ : ಹೊಸ ಸ್ನೇಹಿತರ ಪರಿಚಯವಾಗುವುದು. ಸಂಗಾತಿಯ ಕೋಪಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದಲ್ಲ.
ಕುಂಭ : ಬಿಡುವಿನ ಸಮಯದಲ್ಲಿ ಮನರಂಜನಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಿರಿ. ಶತ್ರುಗಳು ನಿಮ್ಮನ್ನು ಟೀಕಿಸಬಹುದು. ಮಾನಸಿಕ ಚಿಂತೆಗೆ ಒಳಗಾಗಲಿದ್ದೀರಿ.
ಮೀನ : ಸಕಾರಾತ್ಮಕ ಆಲೋಚನೆಯಿಂದ ಕಾರ್ಯನಿರ್ವಹಿಸಿ. ಸಮಯ ವ್ಯರ್ಥಮಾಡುವ ಜನರಿಂದ ದೂರವಿರಿ. ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ.